ಇಟಲಿಯಲ್ಲಿ ಮದುವೆಯಾದ ವಿರಾಟ್ ಕೊಹ್ಲಿ ದೇಶಭಕ್ತನಲ್ಲ: ಬಿಜೆಪಿ ಶಾಸಕ
Recommended Video

ಗುನಾ, ಡಿಸೆಂಬರ್ 19: "ವಿರಾಟ್ ಹಣ ಗಳಿಸಿರುವುದು ಭಾರತದಲ್ಲಿ...ಆದರೆ ದೇಶದಲ್ಲಿ ಮದುವೆಯಾಗುವುದಕ್ಕೆ ಸ್ಥಳವೇ ಸಿಗಲಿಲ್ಲ. ಹಿಂದೂಸ್ತಾನವು ಅಸ್ಪೃಶ್ಯವೇ?" ಎಂದು ಮಧ್ಯಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಕ್ಯಾ ಪ್ರಶ್ನಿಸಿದ್ದಾರೆ.
ಈ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ದೇಶಭಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ಈಚೆಗಷ್ಟೇ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನು ಇಟಲಿಯಲ್ಲಿ ಮದುವೆಯಾಗಿದ್ದರು.
ರಾಮ, ಕೃಷ್ಣ, ವಿಕ್ರಮಾದಿತ್ಯ, ಯುಧಿಷ್ಠಿರ ಇವರೆಲ್ಲ ಈ ನೆಲದಲ್ಲಿ ಮದುವೆಯಾಗಿದ್ದಾರೆ. ನೀವೆಲ್ಲ ಇಲ್ಲೇ ಮದುವೆಯಾಗಬೇಕಿತ್ತು. ನಾವ್ಯಾರೂ ವಿದೇಶದಲ್ಲಿ ಮದುವೆಯಾಗಿಲ್ಲ.. ಕೊಹ್ಲಿ ಇಲ್ಲಿ ಹಣ ಸಂಪಾದಿಸಿ, ಕೋಟ್ಯಂತರ ರುಪಾಯಿ ಇಟಲಿಯಲ್ಲಿ ಖರ್ಚು ಮಾಡಿದ್ದಾರೆ. ಆತನಿಗೆ ಈ ದೇಶದ ಬಗ್ಗೆ ಗೌರವವಿಲ್ಲ. ಆತ ದೇಶಭಕ್ತನಲ್ಲ ಎಂದು ಇದರಿಂದ ಸಾಬೀತಾಗಿದೆ ಎಂದು ಶಾಸಕ ದೂಷಿಸಿದ್ದಾರೆ.

"ಇನ್ನೂ ಸೂಕ್ಷ್ಮವಾಗಿ ಯೋಚಿಸಿದರೆ ನಿಮಗೆ ಗೊತ್ತಾಗುತ್ತದೆ. ಇಟಲಿಯ ನೃತ್ಯಗಾರರು/ಗಾರ್ತಿಯರು ಇಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ. ನೀವು ದೇಶದ ಹಣವನ್ನು ಅಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಹಾಗಿದ್ದರೆ ಈ ದೇಶಕ್ಕೆ ನೀವು ಏನು ಕೊಡ್ತೀರಿ? ಆತ್ನ ಎಂಥ ದೊಡ್ಡ ವ್ಯಕ್ತಿಯೇ ಆಗಿರಬಹುದು ಆದರೆ ಆದರ್ಶನೀಯ ಅಲ್ಲ. ದೇಶಕ್ಕೆ ನಿಷ್ಠನಾದ ವ್ಯಕ್ತಿ ಮತ್ತು ಪರಿಶ್ರಮದಿಂದ ಹಣ ಗಳಿಸಿದ ವ್ಯಕ್ತಿ ಮಾತ್ರ ನಮ್ಮ ಆದರ್ಶ" ಎಂದಿದ್ದಾರೆ.












Click it and Unblock the Notifications