ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲ್ಲೆ ಪ್ರಕರಣ: ಯಶವಂತ್ ಸಿನ್ಹಾ ನ್ಯಾಯಾಂಗ ಬಂಧನಕ್ಕೆ

By Mahesh
|
Google Oneindia Kannada News

ನವದೆಹಲಿ, ಜೂ.3: ಕರ್ತವ್ಯ ನಿರತ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಧಿಕಾರಿ ಮೇಲೆ ಹಲ್ಲೆ ಮಾಡಿದ ಸಂಬಂಧ ಹಜಾರಿಭಾಗ್ ನ್ಯಾಯಾಲಯ ಯಶವಂತ್ ಸಿನ್ಹ ಅವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಬೇಕೆಂದು ಆದೇಶ ಮಾಡಿದೆ.

ಜಾರ್ಖಂಡ್ ವಿದ್ಯುಚ್ಛಕ್ತಿ ಮಂಡಳಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರ ಮುಂದಾಳತ್ವ ವಹಿಸಿಕೊಂಡಿದ್ದ ಯಶವಂತ ಸಿನ್ಹ ಅವರು ವಿದ್ಯುಚ್ಛಕ್ತಿ ಮಂಡಳಿಯ ಅಧಿಕಾರಿ ಜತೆ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದರು. ಮಂಗಳವಾರ ಯಶವಂತ ಸಿನ್ಹ ಸೇರಿದಂತೆ ಬಿಜೆಪಿ ಕಾರ್ಯಕರ್ತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜಾರ್ಖಂಡ್ ವಿದ್ಯುಚ್ಛಕ್ತಿ ಮಂಡಳಿ (JSEB) ಹಜರೀಬಾಗ್ ಬ್ರ್ಯಾಂಚ್ ಮ್ಯಾನೇಜರ್ ಧಾನೇಶ್ ಝಾ ಅವರು ಯಶವಂತ್ ಸಿನ್ಹ ಹಾಗೂ ಇತರರ ವಿರುದ್ಧ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿದ್ದರು. ಸಿನ್ಹ ಸೇರಿದಂತೆ ಹಲವು ಕಾರ್ಯಕರ್ತರಿಗೆ 14 ದಿನಗಳ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿ ಮ್ಯಾಜಿಸ್ಟ್ರೇಟ್ ಆರ್ ಬಿ ಪಾಲ್ ಅವರು ಆದೇಶ ಹೊರಡಿಸಿದ್ದಾರೆ.

BJP leader Yashwant sent to jail in JSEB official assault case

ಈ ಘಟನೆ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಯಶವಂತ್ ಸಿನ್ಹ ಅವರು ಬಿಜೆಪಿ ಮಹಿಳಾ ಘಟಕ ಕಾರ್ಯಕರ್ತರಿಗೆ ಅಧಿಕಾರಿಗಳನ್ನು ಹಗ್ಗದಿಂದ ಕಟ್ಟಿ ಹಾಕುವಂತೆ ಸೂಚಿಸಿದ್ದೆ ಎಂದು ಹೇಳಿದ್ದರು. ಇದರಲ್ಲಿ ತಪ್ಪೇನಿಲ್ಲ, ಗ್ರಾಮಸ್ಥರಲ್ಲಿ ವಿದ್ಯುತ್ ಅಸಮರ್ಪಕ ಪೂರೈಕೆ ತೊಂದರೆಗೆ ಒಳಗಾಗುವವರಲ್ಲಿ ಮಹಿಳೆಯರೇ ಅಧಿಕರಾಗಿದ್ದಾರೆ. ಅವರ ಆಕ್ರೋಶವನ್ನು ಈ ರೀತಿ ತೀರಿಸಿಕೊಳ್ಳಲು ಯತ್ನಿಸಿದ್ದಾರೆ ಎಂದರು.

ಆಕ್ರೋಶಿತ ಮಹಿಳೆಯರಿಂದ ಝಾ ಅವರನ್ನು ಉಪ ಎಸ್ ಪಿ ಪೊಲೀಸ್ ಅಧಿಕಾರಿ ಬಚಾವ್ ಮಾಡಿದ್ದರು. ವಾರಣಾಸಿಯಲ್ಲಿ ಅನಿಯಮಿತ ವಿದ್ಯುತ್ ಪೂರೈಕೆಗಾಗಿ ನಡೆದಿದ್ದ ಧರಣಿ ನಿಲ್ಲಿಸಲಾಗಿದ್ದು, ಅಲ್ಲಿನ ಸಿಎಂ ಅಖಿಲೇಶ್ ಯಾದವ್ ಅವರು ನಿರಂತರ ವಿದ್ಯುತ್ ಪೂರೈಕೆ ನೀಡುವ ಭರವಸೆ ನೀಡಿದ್ದಾರೆ. ಆದರೆ, ಜಾರ್ಖಂಡ್ ನಲ್ಲಿ ತೀವ್ರವಾದ ವಿದ್ಯುತ್ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. (ಪಿಟಿಐ)

English summary
Senior BJP leader Yashwant Sinha and 54 others were remanded in judicial custody by a local court today after they refused to seek bail in a case of alleged assault of a Jharkhand State Electricity Board official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X