ಬಿಜೆಪಿ ಜೊತೆಗಿನ ಮೈತ್ರಿಗೆ ಪ್ರಮುಖ ಪಕ್ಷಗಳು ಗುಡ್‌ಬೈ! INDIA ಒಕ್ಕೂಟಕ್ಕೆ ಆಗುತ್ತಾ ಲಾಭ?
ದೆಹಲಿ, ಸೆಪ್ಟೆಂಬರ್ 27: 2024ರ ಲೋಕಸಭಾ ಚುನಾವಣೆಗೆ 7 ರಿಂದ 8 ತಿಂಗಳು ಮಾತ್ರ ಬಾಕಿಯಿದೆ. ಎನ್‌ಡಿಎ ಹಾಗೂ ಐಎನ್‌ಡಿಐಎ ಮೈತ್ರಿಕೂಟಗಳು ಪಾರ್ಲಿಮೆಂಟ್ ಎಲೆಕ್ಷನ್‌ಗೆ ಭರ್ಜರಿ ತಯಾರಿ ನಡೆಸುತ್ತಿವೆ. ಇದರ ನಡುವೆಯೇ ಎನ್‌ಡಿಎ ಒಕ್ಕೂಟದಿಂದ ತಮಿಳುನಾಡಿನ ಎಐಎಡಿಎಂಕೆ ಪಕ್ಷ ಹೊರಬಂದಿದ್ದು, ಬಿಜೆಪಿ ಜೊತೆಗಿನ ಮೈತ್ರಿಗೆ ಗುಡ್‌ಬೈ ಹೇಳಿದೆ.
ಇದರೊಂದಿಗೆ 2019ರ ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಜೊತೆ ನಾಲ್ಕು ಪ್ರಮುಖ ಪ್ರಾದೇಶಿಕ ಪಕ್ಷಗಳು ತಮ್ಮ ಸಂಬಂಧವನ್ನು ಕಡಿತಗೊಳಿಸಿದಂತಾಗಿದೆ. ಇದರಿಂದ ಐಎನ್‌ಡಿಐಎ ಮೈತ್ರಿಕೂಟಕ್ಕೆ ಮೋದಿ ವಿರುದ್ಧ ಸೆಣಸಲು ಮತ್ತಷ್ಟು ಬಲ ಬಂದಿದ್ದು, ಇಂಡಿಯಾ ಒಕ್ಕೂಟ ಅದನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದೇ ಕುತೂಹಲ.

ಎನ್‌ಡಿಎ ಮೈತ್ರಿಕೂಟವನ್ನು ಎಐಎಡಿಎಂಕೆ ತೊರೆಯುವುದಕ್ಕೂ ಮುಂಚೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ, ಬಿಹಾರದಲ್ಲಿ ಜೆಡಿಯು, ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷಗಳು ಬಿಜೆಪಿಯ ಸಖ್ಯವನ್ನು ತೊರೆದಿದ್ದವು. 2019ರ ಸಾರ್ವತ್ರಿಕ ಚುನಾವಣೆ ಬಳಿಕ ಈ ನಾಲ್ಕು ಪ್ರಾದೇಶಿಕ ಪಕ್ಷಗಳು ಎನ್‌ಡಿಎಯನ್ನು ತೊರೆದಿರುವುದು ಸಹಜವಾಗಿಯೇ ಮುಂದಿನ ಲೋಕಸಭಾ ಚುನಾವಣೆ ಬಿಜೆಪಿಗೆ ಕಷ್ಟವಾಗಬಹುದು. ಇದನ್ನೇ ಐಎನ್‌ಡಿಐಎ ಮೈತ್ರಿಕೂಟ ಗೆಲುವಿನ ಸೂತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಮೈತ್ರಿಕೂಟದಲ್ಲಿದ್ದ ಪಕ್ಷಗಳನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ, ನರೇಂದ್ರ ಮೋದಿ - ಅಮಿತ್ ಶಾ ಜೋಡಿ ಬಂದ ಬಳಿಕ ಏಕಾಂಗಿ ರಾಜಕೀಯ ಹೋರಾಟಕ್ಕೆ ಪಕ್ಷವನ್ನು ಅಣಿಗೊಳಿಸುತ್ತಿರುವ ರೀತಿ ಕಾಣುತ್ತಿದೆ. ವಿಪಕ್ಷಗಳ ಒಡಕನ್ನೇ ಲಾಭ ಮಾಡಿಕೊಳ್ಳುವ ಇರಾದೆಯಲ್ಲಿದ್ದ ಮೋದಿ - ಶಾ ಜೋಡಿ ಮಿತ್ರಪಕ್ಷಗಳ ಬೇಡಿಕೆಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮದೇ ಆದ ರಣತಂತ್ರವನ್ನು ಎಣೆಯುತ್ತಿದೆ. ಇದರಿಂದ ಒಂದೊಂದೆ ಪಕ್ಷಗಳು ಎನ್‌ಡಿಎದಿಂದ ಹೊರಬರುತ್ತಿವೆ.

ಆದರೆ, ಈಗ ವಿಪಕ್ಷಗಳೆಲ್ಲಾ ಐಎನ್‌ಡಿಐಎ ಮೈತ್ರಿಕೂಟದಡಿಯಲ್ಲಿ ಒಂದಾಗಿದ್ದು, ಎನ್‌ಡಿಎಗೆ ಹೆಚ್ಚಿನ ಮಿತ್ರಪಕ್ಷಗಳು ಬೇಕಿದೆ. ಅದಕ್ಕೋಸ್ಕರವೇ ದಿಲ್ಲಿಯಲ್ಲಿ ಎನ್‌ಡಿಎ ಸಭೆ ನಡೆಸಿ ಒಂದೇ ಒಂದು ಶಾಸಕರು ಹಾಗೂ ಸಂಸದರನ್ನು ಹೊಂದಿರದ ಹಲವು ಮಿತ್ರಪಕ್ಷಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದರು. ಅದರ ಬೆನ್ನಲ್ಲಿಯೇ ಎಐಎಡಿಎಂಕೆ ಬಿಜೆಪಿ ಜೊತೆಗಿನ ಸ್ನೇಹವನ್ನು ಕಡಿತಗೊಳಿಸಿದೆ. ಒಂದೊಂದೆ ಪಕ್ಷಗಳು ಎನ್‌ಡಿಎದಿಂದ ಹೊರಬರುತ್ತಿರುವುದು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿದೆ.
ಎನ್‌ಡಿಎ ಅಂದ್ರೆನೇ ಬಿಜೆಪಿ!
ಸದ್ಯ ಎನ್‌ಡಿಎ ಮೈತ್ರಿಕೂಟ ಲೋಕಸಭೆಯಲ್ಲಿ 324 ಸಂಸದರನ್ನು ಹೊಂದಿದೆ. ಅದರಲ್ಲಿ ಬರೋಬ್ಬರಿ 301 ಸಂಸದರು ಬಿಜೆಪಿಯವರೇ, ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆ (ಏಕನಾಥ್ ಶಿಂಧೆ ಬಣ) 13 ಸಂಸದರನ್ನು ಹೊಂದಿದೆ. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಐದು ಸಂಸದರನ್ನು, ಅಪ್ನಾ ದಳ ಎರಡು ಸಂಸದರನ್ನು ಹೊಂದಿದ್ದರೆ, ಎನ್‌ಡಿಎದ 9 ಪಕ್ಷಗಳು ಕೇವಲ ಒಂದೇ ಒಂದು ಸಂಸದರನ್ನು ಹೊಂದಿವೆ. ಉಳಿದ 20 ಪಕ್ಷಗಳು ಒಂದೂ ಸಂಸದರನ್ನು ಹೊಂದಿಲ್ಲ. ಈಗಾಗಿ ಇಲ್ಲಿ ಬಿಜೆಪಿಯೇ ಸಾರ್ವಭೌಮ, ಬಿಜೆಪಿಯೇ ಎಲ್ಲ. ಮೋದಿ ಕೂಡ ಆತ್ಮವಿಶ್ವಾಸದ ಅಲೆಯಲ್ಲಿ ಇದ್ದಾರೆ. ಅದಕ್ಕಾಗಿಯೇ ಮಿತ್ರಪಕ್ಷಗಳ ಬಗ್ಗೆ ಮೋದಿ-ಶಾ ಜೋಡಿ ತಲೆಕೆಡಿಸಿಕೊಂಡಿಲ್ಲ ಎಂಬಂತೆ ಕಾಣುತ್ತಿದೆ.
ಇನ್ನೂ ಈ ಹಿಂದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜನಪ್ರಿಯತೆಯೂ ಹೆಚ್ಚಾಹಿತ್ತು. ಹಾಗೂ ಮತ್ತೊಂದು ಅಧಿಕಾರಾವಧಿಗೆ ಮರಳುತ್ತಾರೆ ಎಂದು ವ್ಯಾಪಕವಾಗಿ ಪ್ರಚಾರವನ್ನ ಕೈಗೊಳ್ಳಲಾಗಿತ್ತು. ಈ ಹಿಂದೆ ಅವರ ನಿಲುವು, ಛಲ ಹಾಗೂ ವರ್ಚಸ್ಸಿಗೆ ಸರಿಸಾಟಿಯಾಗುವ ಪ್ರತಿಪಕ್ಷದ ನಾಯಕರೂ ಇರಲಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ ಎನ್‌ಡಿಎಯನ್ನು ಸೋಲಿಸಿತು. ಏಕೆಂದರೆ ಆ ಚುನಾವಣೆಯು ರಾಜ್ಯ ಚುನಾವಣೆಗಳ ಒಟ್ಟು ಮೊತ್ತವಾಗಿತ್ತು. ವಾಜಪೇಯಿ ಪ್ರಧಾನಿಯಾಗಿದ್ದರೂ, ರಾಜ್ಯಗಳಲ್ಲಿ ಪ್ರಬಲವಾದ ಪ್ರಾದೇಶಿಕ (ಸಮಾಜವಾದಿ ಪಕ್ಷ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ ಇತ್ಯಾದಿ) ಅಥವಾ ರಾಷ್ಟ್ರೀಯ ಪಕ್ಷವನ್ನು (ಕಾಂಗ್ರೆಸ್, ಕಮ್ಯುನಿಸ್ಟರು) ಎದುರಿಸಿದ್ದು, ಆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿತು.
ರಾಜ್ಯಗಳಲ್ಲಿ ಪ್ರಬಲವಾದ ಪ್ರಾದೇಶಿಕ (ಸಮಾಜವಾದಿ ಪಕ್ಷ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ ಇತ್ಯಾದಿ) ಅಥವಾ ರಾಷ್ಟ್ರೀಯ ಪಕ್ಷವನ್ನು (ಕಾಂಗ್ರೆಸ್, ಕಮ್ಯುನಿಸ್ಟರು) ಎದುರಿಸಿದ ಎಲ್ಲೆಲ್ಲಿ ಬಿಜೆಪಿಯು ಆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿತು.
2024ರ ಚುನಾವಣೆಯಲ್ಲಿ ಪ್ರತಿಪಕ್ಷಗಳು ತಮ್ಮ ಕಾರ್ಡ್ ಅನ್ನು ಪ್ರಯೋಗಿಸುವುದರಿಂದ ರಾಜ್ಯ ಚುನಾವಣೆಗಳಲ್ಲಿ ಸಹಾಯಕವಾಗಬಹುದು. ಪ್ರಬಲವಾದ ಪ್ರಾದೇಶಿಕ ಅಥವಾ ರಾಷ್ಟ್ರೀಯ ಪಕ್ಷದ ವಿರುದ್ಧ ಕಣಕ್ಕಿಳಿದಿರುವ ರಾಜ್ಯಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿದೆ ಎಂಬುದು ಸಾಬೀತಾಗಿರುವ ಸತ್ಯ. ಅದು ದೆಹಲಿ, ಪಂಜಾಬ್, ತಮಿಳುನಾಡು ಅಥವಾ ಪಶ್ಚಿಮ ಬಂಗಾಳವಾಗಿರಬಹುದು. ಅಥವಾ ಇತ್ತೀಚೆಗೆ ಹಿಮಾಚಲ ಪ್ರದೇಶ ಅಥವಾ ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲೂ ಸಹ ಬಿಜೆಪಿಗೆ ಹಿನ್ನಡೆಯಾಗಿದೆ.












Click it and Unblock the Notifications