ಎಸ್ಪಿ-ಬಿಎಸ್ಪಿಗೆ ಸೆಡ್ಡು ಹೊಡೆಯಲು ಬಿಜೆಪಿ ಬಳಿ ಇದೆ ಬ್ರಹ್ಮಾಸ್ತ್ರ
Recommended Video

ಎಸ್ ಬಿಎಸ್ಪಿಯನ್ನ ಮಟ್ಟ ಹಾಕಲು ಬಿಜೆಪಿ ಬಳಿಯಿದೆ ಬ್ರಹ್ಮಾಸ್ತ್ರ | Oneindia Kannada
ಬಲ್ಲಿಯಾ, ಮೇ 01: 2019 ರ ಲೋಕಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷದ ವಿರುದ್ಧ ಸೆಡ್ಡು ಹೊಡೆಯಲು ಬಿಜೆಪಿ ಬಳಿ ಬ್ರಹ್ಮಾಸ್ತ್ರವಿದೆ ಎಂದು ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಓಮ್ ಪ್ರಕಾಶ್ ರಾಜ್ಭಾರ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಮೈತ್ರಿ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಬಳಿ ಬ್ರಹ್ಮಾಸ್ತ್ರವಿದೆ. ಆದರೆ ಅದನ್ನು 2019 ರ ಲೋಕಸಭಾ ಚುನಾವಣೆಗೆ ಆರು ತಿಂಗಳಿರುವಾಗ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಇತರೆ ಹಿಂದುಳಿದ ವರ್ಗದ ಜನರನ್ನು ಮೂರು ವಿಭಾಗಗಳಾಗಿ ಗುರುತಿಸಲಿದೆ. ಇದರಿಂದ ಎಲ್ಲರಿಗೂ ಸಮಾನ ನ್ಯಾಯ ನೀಡುವುದಕ್ಕೆ ಸಹಾಯಕವಾಗುತ್ತದೆ ಎಂದು ಅವರು ಹೇಳಿದ್ದಾರೆ. ಫುಲ್ಪುರ ಮತ್ತು ಗೋರಖ್ಪುರ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿನ ನಂತರ ನಾವು ಪಾಠ ಕಲಿತಿದ್ದೇವೆ. ಹೊಸ ಬ್ರಹ್ಮಾಸ್ತ್ರ ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications