Jammu And Kashmir Elections: ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ: ಮೋದಿ ಭವಿಷ್ಯ
ನವದೆಹಲಿ, ಸೆಪ್ಟೆಂಬರ್ 28: ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷವು ತನ್ನ ಮೊದಲ ಸರ್ಕಾರವನ್ನು ರಚಿಸುವುದು ಬಹುತೇಕ ಖಚಿತ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ಹಂತದ ಚುನಾವಣೆಗೆ ಮುನ್ನ ಜಮ್ಮುವಿನಲ್ಲಿ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆಯ ಅಂತಿಮ ಹಂತದ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಮ್ಮುವಿನಲ್ಲಿ ರ್ಯಾಲಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯನ್ನು ತೀವ್ರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದರು.

ಸೋದರ ಸೋದರಿಯರೇ, ಅಕ್ಟೋಬರ್ 8 ರಂದು ಫಲಿತಾಂಶವನ್ನು ಪ್ರಕಟವಾಗಲಿದ್ದು, ಅಕ್ಟೋಬರ್ 12 ರಂದು ವಿಜಯದಶಮಿಯ ಆಶೀರ್ವಾದದಲ್ಲಿ ನಾವು ಜಯಗಳಿಸಲಿದ್ದೇವೆ. ಈ ಬಾರಿಯ ವಿಜಯದಶಮಿ ನಮಗೆಲ್ಲರಿಗೂ ಮಂಗಳಕರ ಆರಂಭವನ್ನು ಸೂಚಿಸುತ್ತದೆ ಎಂದು ಮೋದಿ ಅವರು ವಿಶ್ವಾಸವನ್ನ ವ್ಯಕ್ತಪಸಿದರು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಎಂಬ ಮೂರು ಕುಟುಂಬಗಳಿಂದ ಜಮ್ಮು ಮತ್ತು ಕಾಶ್ಮೀರದ ಜನರು ಬೇಸತ್ತಿದ್ದಾರೆ. ಉದ್ಯೋಗದಲ್ಲಿ ಭ್ರಷ್ಟಾಚಾರ ಮತ್ತು ತಾರತಮ್ಯ ಇರುವಂತಹ ವ್ಯವಸ್ಥೆ ಮತ್ತೆ ಬೇಕಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಇನ್ನು ಮುಂದೆ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ರಕ್ತಪಾತವನ್ನು ಬಯಸುವುದಿಲ್ಲ.
ಇಲ್ಲಿನ ಜನರು ಶಾಂತಿಯನ್ನು ಬಯಸುತ್ತಾರೆ ಹಾಗೂ ಅಭಿವೃದಿಯನ್ನ ಭಯಸುತ್ತಾರೆ. ಇಲ್ಲಿನ ಜನರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಬಯಸುತ್ತಾರೆ ಮತ್ತು ಅದಕ್ಕಾಗಿಯೇ ಜಮ್ಮು ಮತ್ತು ಕಾಶ್ಮೀರದ ಜನರು ಬಿಜೆಪಿ ಸರ್ಕಾರವನ್ನು ಬಯಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಕಾಂಗ್ರೆಸ್‌ನ ವರ್ತನೆಯನ್ನು ನೀವು ಎಂದಿಗೂ ಮರೆಯಬಾರದು, ನಮ್ಮ ಸೇನೆಯಿಂದ ಸರ್ಜಿಕಲ್ ಸ್ಟೈಕ್‌ಗೆ ಪುರಾವೆ ಕೇಳಿದ್ದ ಪಕ್ಷ ಅದು. ಕಾಂಗ್ರೆಸ್ ಇಂದಿಗೂ ಸರ್ಜಿಕಲ್ ಸ್ಟೈಕ್ ಬಗ್ಗೆ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುವ ಪಕ್ಷವಾಗಿದೆ. ಅಂತಹ ಕಾಂಗ್ರೆಸ್ ಅನ್ನು ನೀವು ಕ್ಷಮಿಸಬಹುದೇ ? ದೇಶಕ್ಕಾಗಿ ಸಾಯುವವರನ್ನು ಕಾಂಗ್ರೆಸ್ ಎಂದಿಗೂ ಗೌರವಿಸುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದರು.
ಕಳೆದ ವಾರಗಳಲ್ಲಿ, ನಾನು ಜಮ್ಮು ಮತ್ತು ಕಾಶ್ಮೀರದ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದೇನೆ. ನಾನು ಎಲ್ಲೇ ಹೋದರೂ ಬಿಜೆಪಿಯ ಕಾರುಕರ್ತರ ಉತ್ಸಾಹವನ್ನ ನೋಡಿದ್ದೇನೆ ಎಂದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್, ನ್ಯಾಷನಲ್ ಕಾನ್ಸರೆನ್ಸ್ ಮತ್ತು ಪಿಡಿಪಿಯನ್ನು ತರಾಟೆಗೆ ತೆಗೆದುಕೊಂಡರು, ಜಮ್ಮು ಮತ್ತು ಕಾಶ್ಮೀರದಲ್ಲಿನ ಜನರು ಮೂರು ಕುಟುಂಬಗಳಿಂದ ತೊಂದರೆಗೀಡಾಗಿದ್ದಾರೆ ಮತ್ತು ಈಗ ಅವರು ಭಯೋತ್ಪಾದನೆಯನ್ನು ಬಯಸುವುದಿಲ್ಲ ಎಂದು ಹೇಳಿದರು.
ಈ ಪ್ರದೇಶದಲ್ಲಿ ಪ್ರತ್ಯೇಕತಾವಾದ ಮತ್ತು ಹಿಂಸಾಚಾರದ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ ಮತ್ತು ಅದಕ್ಕಾಗಿಯೇ ಅವರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡುತ್ತಾರೆ. ಇಲ್ಲಿನ ಜನರು ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಇಲ್ಲಿನ ಜನರು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಬಯಸುತ್ತಾರೆ. ಇಲ್ಲಿನ ಜನರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ.
ಕಳೆದ ಎರಡು ಹಂತಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದ್ದು, ಎರಡೂ ಹಂತಗಳಲ್ಲಿ ಬಿಜೆಪಿ ಪರವಾಗಿ ಮತ ಚಲಾವಣೆಯಾದವು . ಬಿಜೆಪಿಯ ಮೊದಲ ಪೂರ್ಣ ಬಹುಮತದ ಸರ್ಕಾರ ಬಹುತೇಕ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ದಶಕಗಳಿಂದ ಜಮ್ಮು ಪ್ರದೇಶದ ವಿರುದ್ಧ ಯಾವಾಗಲೂ ತಾರತಮ್ಯ ಮಾಡುವುದನ್ನು ಗಮನಿಸಿದ ಪ್ರಧಾನಿ ಮೋದಿ, ಇಲ್ಲಿ ರಚನೆಯಾಗಲಿರುವ ಬಿಜೆಪಿ ಸರ್ಕಾರವು ಎಲ್ಲವನ್ನೂ ನಿವಾರಿಸುತ್ತದೆ ಎಂದು ಹೇಳಿದರು. ಇದೀಗ ಮೊದಲ ಬಾರಿಗೆ ಜಮ್ಮು ಪ್ರದೇಶದ ಜನರ ಆಶಯದಂತೆ ಸರ್ಕಾರ ರಚನೆಯಾಗಲಿದೆ. ಈ ಅವಕಾಶವನ್ನು ನೀವು ತಪ್ಪಿಸಿಕೊಳ್ಳಬಾರದು. ಏಕೆಂದರೆ ಇಲ್ಲಿ ರಚನೆಯಾಗಲಿರುವ ಬಿಜೆಪಿ ಸರಕಾರ ನಿಮ್ಮ ನೋವನ್ನು ನಿವಾರಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.












Click it and Unblock the Notifications