Madhya Pradesh Polls: ಹತ್ಯೆ ವಿವಾದ; ದಶಕದ ಬಳಿಕ ಧ್ರುವ್ ನಾರಾಯಣ್ ಸಿಂಗ್ ಅವರನ್ನ ಕಣಕ್ಕಿಳಿಸಿದ ಬಿಜೆಪಿ
ಭೋಪಾಲ್, ಆಗಸ್ಟ್ 18: ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಬಿಜೆಪಿಯ 39 ಹೆಸರುಗಳ ಪೈಕಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನಿರಾಕರಿಸಿದ ಧ್ರುವ ನಾರಾಯಣ ಸಿಂಗ್ ಕೂಡ ಸೇರಿದ್ದಾರೆ.
2013ರಲ್ಲಿ ಆರ್‌ಟಿಐ ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣದಲ್ಲಿ ಧ್ರುವ ನಾರಾಯಣ್ ಸಿಂಗ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಗೋವಿಂದ್ ನಾರಾಯಣ ಸಿಂಗ್ ಅವರ ಪುತ್ರರಾಗಿರುವ ಧ್ರುವ ನಾರಾಯಣ್ ಸಿಂಗ್ ಅವರು 2008 ರಿಂದ 2013ರಲ್ಲಿ ಭೋಪಾಲ್ ಮಧ್ಯ ಕ್ಷೇತ್ರದ ಶಾಸಕರಾಗಿ ಪ್ರತಿನಿಧಿಸಿದ್ದರು. ಆಗಸ್ಟ್ 16, 2011 ರಂದು ಪಾಯಿಂಟ್-ಬ್ಲಾಂಕ್ ರೇಂಜ್ ಗುಂಡು ಹಾರಿಸಿದ ಶೆಹ್ಲಾ ಸಾವಿನ ನಂತರ ಅವರು ರಾಜಕೀಯ ಹಿನ್ನಡೆಯನ್ನು ಎದುರಿಸಿದರು.

ಇನ್ನೂ ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿತ್ತು. ಝಾಹಿದಾ ಎಂಬ ಹಂತಕ ಬಿಜೆಪಿ ನಾಯಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಕಾರಣ ಕೊಲೆಗೆ ಧ್ರುವ ನಾರಾಯಣ್ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಧ್ರುವ್ ನಾರಾಯಣ್ ಸಿಂಗ್ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಇನ್ನೂ ಧ್ರುವ ನಾರಾಯಣ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಶೆಹ್ಲಾ ಅವರ ಸಹೋದರ ರಜಿಲ್ ಜೈದಿ ಆಘಾತ ವ್ಯಕ್ತಪಡಿಸಿದ್ದಾರೆ. ಇದು ಆಘಾತಕಾರಿ ಮತ್ತು ಸಮರ್ಥನೀಯವಲ್ಲ. ಅಂತಿಮವಾಗಿ 2023ರಲ್ಲಿ ಅವರಿಗೆ ಟಿಕೆಟ್ ನೀಡಬೇಕಾದರೆ ಬಿಜೆಪಿ 2013 ಮತ್ತು 2018ರಲ್ಲಿ ಅವರ ಟಿಕೆಟ್ ಅನ್ನು ಏಕೆ ನೀಡಿರಲಿಲ್ಲ ಎಂದು ಶೆಹ್ಲಾ ಸಹೋದರ ರಾಜಿಲ್ ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶ ಚುನಾವಣೆಗೆ ಮೊದಲ ಪಟ್ಟಿಯಲ್ಲಿರುವ ಬಿಜೆಪಿ ಅಭ್ಯರ್ಥಿಗಳು
1. ಸರಳಾ ವಿಜೇಂದ್ರ ರಾವತ್ - ಸಬಲ್ಗಢ ಕ್ಷೇತ್ರ
2. ಅಡಾಲ್ ಸಿಂಗ್ ಕಂಸನಾ - ಸುಮಾವಲಿ ಕ್ಷೇತ್ರ
3. ಲಾಲ್ ಸಿಂಗ್ ಆರ್ಯ - ಗೋಹಾಡ್ (SC) ಕ್ಷೇತ್ರ
4. ಪ್ರೀತಂ ಲೋಧಿ - ಪಿಚೋರ್ ಕ್ಷೇತ್ರ
5. ಪ್ರಿಯಾಂಕಾ ಮೀನಾ - ಚಚೌರಾ ಕ್ಷೇತ್ರ
6. ಜಗನ್ನಾಥ್ ಸಿಂಗ್ ರಘುವಂಶಿ - ಚಂದೇರಿ ಕ್ಷೇತ್ರ
7. ವೀರೇಂದ್ರ ಸಿಂಗ್ ಲಂಬಾರ್ದಾರ್ - ಬಂದಾ ಕ್ಷೇತ್ರ
8. ಕಾಮಾಖ್ಯ ಪ್ರತಾಪ್ ಸಿಂಗ್ - ಮಹಾರಾಜಪುರ ಕ್ಷೇತ್ರ
9. ಲಲಿತಾ ಯಾದವ್ - ಛತ್ತರ್‌ಪುರ ಕ್ಷೇತ್ರ
10. ಲಖನ್ ಪಟೇಲ್ - ಪಠಾರಿಯಾ ಕ್ಷೇತ್ರ
11. ರಾಜೇಶ್ ಕುಮಾರ್ ವರ್ಮಾ - ಗುನ್ನಾರ್ (SC) ಕ್ಷೇತ್ರ
12. ಸುರೇಂದ್ರ ಸಿಂಗ್ ಗಹರ್ವಾರ್ - ಚಿತ್ರಕೂಟ ಕ್ಷೇತ್ರ
13. ಹೆರಾಸಿಂಗ್ ಶ್ಯಾಮ್ - ಪುಷ್ಪ್ರಜಗಢ (ST) ಕ್ಷೇತ್ರ
14. ಧೀರೇಂದ್ರ ಸಿಂಗ್ - ಬರ್ವಾರಾ (ST) ಕ್ಷೇತ್ರ
15. ನೀರಜ್ ಠಾಕೂರ್ - ಬರ್ಗಿ ಕ್ಷೇತ್ರ
16. ಅಂಚಲ್ ಸೋಂಕರ್ - ಜಬಲ್ಪುರ್ ಪುರ್ಬಾ (SC) ಕ್ಷೇತ್ರ
17. ಓಂಪ್ರಕಾಶ್ ಧುರ್ವೆ - ಶಹಪುರ (ST) ಕ್ಷೇತ್ರ
18. ವಿಜಯ್ ಆನಂದ್ ಮರಾವಿ - ಬಿಚ್ಚಿಯಾ (ಎಸ್‌ಟಿ) ಕ್ಷೇತ್ರ
19. ಭಗತ್ ಸಿಂಗ್ ನೇತಮ್ - ಬೈಹಾರ್ (ST) ಕ್ಷೇತ್ರ
20. ರಾಜ್‌ಕುಮಾರ್ ಕರ್ರಾಹೆ - ಲಾಂಜಿ ಕ್ಷೇತ್ರ
21. ಕಮಲ್ ಮಾಸ್ಕೋಲೆ - ಬರ್ಘಾಟ್ (ST) ಕ್ಷೇತ್ರ
22. ಮಹೇಂದ್ರ ನಾಗೇಶ್ - ಗೋಟೆಗಾಂವ್ (ಎಸ್‌ಸಿ) ಕ್ಷೇತ್ರ
23. ನಾನಾಭೌ ಮೊಹೋದ್ - ಸೌನ್ಸಾರ್ ಕ್ಷೇತ್ರ
24. ಪ್ರಕಾಶ್ ಉಯ್ಕೆ - ಪಾಂಡುರ್ಣ (ST) ಕ್ಷೇತ್ರ
25. ಚಂದ್ರಶೇಖರ್ ದೇಶಮುಖ್ - ಮುಲ್ತಾಯಿ ಕ್ಷೇತ್ರ
26. ಮಹೇಂದ್ರ ಸಿಂಗ್ ಚೌಹಾಣ್ - ಭೈನಸ್ದೇಹಿ (ST) ಕ್ಷೇತ್ರ
27. ಅಲೋಕ್ ಶರ್ಮಾ - ಭೋಪಾಲ್ ಉತ್ತರ ಕ್ಷೇತ್ರ
28. ಧ್ರುವ ನಾರಾಯಣ ಸಿಂಗ್ - ಭೋಪಾಲ್ ಮಧ್ಯ ಕ್ಷೇತ್ರ
29. ರಾಜೇಶ್ ಸೋಂಕರ್ - ಸೋನ್‌ಕಾಚ್ (SC) ಕ್ಷೇತ್ರ
30. ರಾಜ್‌ಕುಮಾರ್ ಮೇವ್ - ಮಹೇಶ್ವರ್ (SC) ಕ್ಷೇತ್ರ
31. ಆತ್ಮಾರಾಮ್ ಪಟೇಲ್ - ಕಾಸರವಾಡ ಕ್ಷೇತ್ರ
32. ನಾಗರ್ ಸಿಂಗ್ ಚೌಹಾಣ್ - ಅಲಿರಾಜಪುರ (ST) ಕ್ಷೇತ್ರ
33. ಭಾನು ಭೂರಿಯಾ - ಝಬುವಾ (ST) ಕ್ಷೇತ್ರ
34. ನಿರ್ಮಲಾ ಭೂರಿಯಾ - ಪೇಟಿವಾಡ್ (ಎಸ್‌ಟಿ) ಕ್ಷೇತ್ರ
35. ಜಯದೀಪ್ ಪಟೇಲ್ - ಕುಕ್ಷಿ (ST) ಕ್ಷೇತ್ರ
36. ಕಲು ಸಿಂಗ್ ಠಾಕೂರ್ - ಧರಂಪುರಿ (ST) ಕ್ಷೇತ್ರ
37. ಮಧು ವರ್ಮಾ - ರಾವು ಕ್ಷೇತ್ರ
38. ತಾರಾಚಂದ್ ಗೋಯಲ್ - ತರಾನಾ (SC) ಕ್ಷೇತ್ರ
39. ಸತೀಶ್ ಮಾಳವೀಯ - ಘಾಟಿಯಾ (SC) ಕ್ಷೇತ್ರ












Click it and Unblock the Notifications