ತೆಲಂಗಾಣ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಬಿಜೆಪಿ! ಸರ್ಪ್ರೈಸ್ ಏನು ಗೊತ್ತಾ?
ನವದೆಹಲಿ: ಅಖಾಡ ಸಜ್ಜಾಗಿದೆ 5 ರಾಜ್ಯದ ವಿಧಾನಸಭೆ ಚುನಾವಣೆ ಗೆಲ್ಲಲು ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಕೂಡ ಜೋರಾಗಿದೆ. ಅದರಲ್ಲೂ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ತೆಲಂಗಾಣ ವಿಧಾನಸಭೆಗೆ ಅಬ್ಬರದ ತಯಾರಿ ನಡೆದಿದೆ. ಇಂದು ಬಿಜೆಪಿ ತನ್ನ ಮೊದಲನೇ ಪಟ್ಟಿಯ ರಿಲೀಸ್ ಮಾಡಿ ಸರ್ಪ್ರೈಸ್ ಕೊಟ್ಟಿದ್ದು, ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಗೊತ್ತಾ?
ಅಂದಹಾಗೆ ಈಗ ಹೊರಬಿದ್ದಿರುವ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದೆ ಇದೆ. ಹೀಗಾಗಿ ಸಮೀಕ್ಷೆ ಈಗ ಆಡಳಿತ ನಡೆಸುತ್ತಿರುವ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಕ್ಷಕ್ಕೆ ಆಘಾತ ನೀಡಿದೆ. ಇದೇ ಹಿನ್ನೆಲೆ, ಬಿಜೆಪಿ ಹಾಗೂ ಬಿಆರ್‌ಎಸ್ ನಾಯಕರು ಕಾಂಗ್ರೆಸ್ ವಿರುದ್ಧ ರಣತಂತ್ರ ರೂಪಿಸುತ್ತಿದ್ದಾರೆ. ಇದೇ ರಣತಂತ್ರದ ಭಾಗವಾಗಿ ಬಿಜೆಪಿ ಇದೀಗ ತೆಲಂಗಾಣ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಅಳೆದು ತೂಗಿ ಬಿಡುಗಡೆ ಮಾಡಿದ್ದು, ಸರ್ಪ್ರೈಸ್ ನೀಡಿದೆ.

ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ?
ತೆಲಂಗಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಜೆಪಿ ಪಕ್ಷ ಇಂದು ರಿಲೀಸ್ ಮಾಡಿದೆ. ಆ ಪ್ರಕಾರ ಬೋತ್ ಕ್ಷೇತ್ರದಿಂದ ಬಿಜೆಪಿ ಪಕ್ಷದ ಸಂಸದ ಸೋಯಂ ಬಾಪು ರಾವ್ ಅವರು ಸ್ಪರ್ಧಿಸಲಿದ್ದು ಕೊರಟ್ಲಾ ಕ್ಷೇತ್ರದಿಂದ ಧರ್ಮಪುರಿ ಅರವಿಂದ್ ಸ್ಪರ್ಧೆ ಪಕ್ಕಾ ಆಗಿದೆ ಹಾಗೂ ಗೋಶಾಮಹಲ್ ಕ್ಷೇತ್ರದಿಂದ ಟಿ. ರಾಜಾ ಸಿಂಗ್‌ಗೆ ಟಿಕೆಟ್ ನೀಡಲಾಗಿದೆ. ಈ ಮಧ್ಯೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಕರೀಂನಗರ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ತೆಲಂಗಾಣ ವಿಧಾಸಭೆಯಲ್ಲಿ ಒಟ್ಟು 119 ಸ್ಥಾನ ಇದ್ದು, ತೆಲಂಗಾಣ ವಿಧಾನಸಭೆಗೆ ಇದೇ ನವೆಂಬರ್ 30ಕ್ಕೆ ಚುನಾವಣೆ ನಡೆಯಲಿದೆ. ಹಾಗೇ ಡಿ.3ರಂದು ಮತ ಎಣಿಕೆ ಕೂಡ ನಡೆದು, ಫಲಿತಾಂಶ ಹೊರಬೀಳಿದೆ. ಹೀಗಾಗಿ ಬಿಜೆಪಿ ನಾಯಕರು ಈಗ ಸಾಕಷ್ಟು ಲೆಕ್ಕಾಚಾರವನ್ನು ಹಾಕಿ ತಮ್ಮ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಆದರೆ ಕಮಲ ಪಾಳಯದ ತಂತ್ರ ವರ್ಕೌಟ್ ಆಗುತ್ತಾ? ಬಿಆರ್‌ಎಸ್ ಮತ್ತೊಮ್ಮೆ ತೆಲಂಗಾಣ ವಿಧಾನಸಭೆ ಗೆದ್ದು ಬೀಗುತ್ತಾ? ಕಾಂಗ್ರೆಸ್‌ಗೆ ಅದೃಷ್ಟ ಒಲಿಯುತ್ತಾ? ಇದನ್ನೆಲ್ಲಾ ತೆಲಂಗಾಣದ ಮತದಾರ ಡಿಸೈಡ್ ಮಾಡಿ, ಮತದಾನ ಮಾಡಲಿದ್ದಾನೆ. ಹೀಗಾಗಿ ಫಲಿತಾಂಶ ಬರುವ ತನಕ ಕಾದು ನೋಡಬೇಕಿದೆ.












Click it and Unblock the Notifications