• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನ 20 ಕ್ಷೇತ್ರಗಳಲ್ಲಿ ಹಾಲಿ ಮಾಜಿ ಶಾಸಕರ ಮಕ್ಕಳಿಗೆ ಟಿಕೆಟ್

|
Google Oneindia Kannada News

ಗಾಂಧಿನಗರ, ನವೆಂಬರ್ 21: ಭಾರತದಲ್ಲಿ ಪ್ರಜಾಪ್ರಭುತ್ವ ಪದ್ಧತಿ ಜಾರಿಗೆ ಬಂದು ದಶಕಗಳೇ ಕಳೆದಿದ್ದರೂ, ರಾಜಪ್ರಭುತ್ವದ ಕರಿನೆರವು ರಾಜಕೀಯದಿಂದ ದೂರ ಸರಿದಿಲ್ಲ. ಗುಜರಾತ್ ವಿಧಾನಸಭಾ ಚುನಾವಣೆ ಕೂಡ ಇಂಥದೊಂದು ವಂಶಾವಳಿ ಆಡಳಿತಕ್ಕೆ ಹೊರತಾಗಿಲ್ಲ.

ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಒಟ್ಟು 182 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪುತ್ರರನ್ನು ಅಖಾಡಕ್ಕೆ ಇಳಿಸಲು ಅಣಿಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ನಿಂದ 13 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರೆ, ಭಾರತೀಯ ಜನತಾ ಪಕ್ಷವು ಏಳು ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ.

ಜೈ ಮೋದಿ ಎಂದವರಿಗೆ ಕೇಜ್ರಿವಾಲ್ ನೀತಿಪಾಠ!ಜೈ ಮೋದಿ ಎಂದವರಿಗೆ ಕೇಜ್ರಿವಾಲ್ ನೀತಿಪಾಠ!

ವಿಶ್ಲೇಷಕರ ಪ್ರಕಾರ, ರಾಜಕೀಯ ಪಕ್ಷಗಳು ಕೆಲವು ಬಾರಿ ಪ್ರಬಲ 'ಗೆಲುವಿನ' ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕಾಗುತ್ತದೆ. ಈ ನಾಯಕರು ವರ್ಚಸ್ಸು ಹೊಂದಿರುವ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರೇ ಇರುವುದಿಲ್ಲ. ಬುಡಕಟ್ಟು ನಾಯಕ ಮತ್ತು ಹತ್ತು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಮೋಹನ್‌ ಸಿನ್ಹಾ ರಥ್ವಾ ಮಾತೃಪಕ್ಷದೊಂದಿಗಿನ ದಶಕಗಳ ಹಳೆಯ ಸಂಬಂಧವನ್ನು ಕಡಿದು ಕಳೆದ ತಿಂಗಳು ಬಿಜೆಪಿ ಸೇರಿದಾಗ, ಆಡಳಿತ ಪಕ್ಷವು ಛೋಟಾ ಉದೇಪುರ್ ಕ್ಷೇತ್ರದಿಂದ ಅವರ ಮಗ ರಾಜೇಂದ್ರ ಸಿನ್ಹ್ ರಥ್ವಾ ಅವರನ್ನು ಕಣಕ್ಕಿಳಿಸುವ ಮೂಲಕ ಅವರನ್ನು ಗೌರವಿಸಿತು.

ಗುಜರಾತಿನಲ್ಲಿ ಹೇಗಿದೆ ಪುತ್ರರ ಪೈಪೋಟಿ?

ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಮೀಸಲಾದ ಕ್ಷೇತ್ರವು ರಾಜೇಂದ್ರ ಸಿನ್ಹ್ ಮತ್ತು ಕಾಂಗ್ರೆಸ್‌ನ ಮಾಜಿ ರೈಲ್ವೇ ಸಚಿವ ನರನ್ ರಥ್ವಾ ಪುತ್ರ ಸಂಗ್ರಾಮ್‌ಸಿನ್ಹಾ ರಥ್ವಾ ನಡುವೆ ನೇರ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಅಹಮದಾಬಾದ್ ಜಿಲ್ಲೆಯ ಸನಂದ್ ಕ್ಷೇತ್ರದ ಹಾಲಿ ಶಾಸಕ ಕನು ಪಟೇಲ್, ಮಾಜಿ ಕಾಂಗ್ರೆಸ್ ಶಾಸಕ ಕರಣ್ ಸಿಂಗ್ ಪಟೇಲ್ ಅವರ ಪುತ್ರರಾಗಿದ್ದಾರೆ. 2017ರಲ್ಲಿ ಬಿಜೆಪಿಗೆ ಸೇರಿದ ಪಟೇಲ್, ಅವರ ಮಗ ಮತ್ತೆ ಸಾನಂದ್‌ನಿಂದ ಸ್ಪರ್ಧಿಸಲು ದಾರಿ ಮಾಡಿಕೊಟ್ಟರು.

ಅದೇ ಸ್ಥಾನದಿಂದ ಕಾನು ಪಟೇಲ್ ಅವರನ್ನು ಬಿಜೆಪಿ ಮತ್ತೊಮ್ಮೆ ಕಣಕ್ಕಿಳಿಸಿದೆ. ಥಸ್ರಾದಿಂದ ಬಿಜೆಪಿಯ ಅಭ್ಯರ್ಥಿ ಯೋಗೇಂದ್ರ ಪರ್ಮಾರ್ ಅವರು ಎರಡು ಬಾರಿ ಶಾಸಕರಾದ ರಾಮಸಿಂಹ ಪರ್ಮಾರ್ ಅವರ ಪುತ್ರರಾಗಿದ್ದಾರೆ, ಅವರು 2017 ರಲ್ಲಿ ಪಕ್ಷವನ್ನು ತೊರೆಯುವ ಮೊದಲು 2007 ಮತ್ತು 2012 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು, ಆದರೆ ಬಿಜೆಪಿ ಅಭ್ಯರ್ಥಿಯಿಂದ ಸೋಲಿಸಲ್ಪಟ್ಟರು. ಅಹಮದಾಬಾದ್‌ನ ಡ್ಯಾನಿಲಿಮ್ಡಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್‌ನ ಶಾಸಕರಾಗಿರುವ ಶೈಲೇಶ್ ಪರ್ಮಾರ್ ಅವರು ಮಾಜಿ ಶಾಸಕ ಮನುಭಾಯ್ ಪರ್ಮಾರ್ ಅವರ ಪುತ್ರರಾಗಿದ್ದಾರೆ.

ಶೈಲೇಶ್ ಮೇಲೆ ಕಾಂಗ್ರೆಸ್ ನಂಬಿಕೆ

ಮುಂಬರುವ ಗುಜರಾತ್ ಚುನಾವಣೆಯಲ್ಲಿ ಶೈಲೇಶ್ ಮೇಲೆ ಕಾಂಗ್ರೆಸ್ ಮತ್ತೊಮ್ಮೆ ನಂಬಿಕೆ ಇಟ್ಟಿದೆ. ಅಂತಹ ಮತ್ತೊಬ್ಬ ಸ್ಪರ್ಧಿ ಮಾಜಿ ಗುಜರಾತ್ ಮುಖ್ಯಮಂತ್ರಿ ಶಂಕರ್ ಸಿನ್ಹ ವಘೇಲಾ ಅವರ ಪುತ್ರ ಮಹೇಂದ್ರ ಸಿನ್ಹಾ ವಘೇಲಾ ಆಗಿದ್ದಾರೆ. ಮಹೇಂದ್ರಸಿನ್ಹ್ ಕಳೆದ ತಿಂಗಳು ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಿದ್ದು ಬಯಾದ್ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಅವರು 2012 ಮತ್ತು 2017ರ ನಡುವೆ ಕಾಂಗ್ರೆಸ್ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದರು, 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಳೆದ ತಿಂಗಳಷ್ಟೇ ಕಾಂಗ್ರೆಸ್ಸಿಗೆ ವಾಪಸ್ ಆಗಿದ್ದರು.

ಬಾರ್ಡೋಲಿಯಿಂದ ತುಷಾರ್ ಚೌಧರಿ ಸ್ಪರ್ಧೆ

ಮಾಜಿ ಮುಖ್ಯಮಂತ್ರಿ ಅಮರಸಿಂಹ ಚೌಧರಿ ಅವರ ಪುತ್ರ ತುಷಾರ್ ಚೌಧರಿ, ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾದ ಬಾರ್ಡೋಲಿಯಿಂದ ಕಾಂಗ್ರೆಸ್‌ನ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಅವರು 2004-09 ರ ನಡುವೆ ಮಾಂಡ್ವಿ ಮತ್ತು 2009 ರಿಂದ 2014 ರವರೆಗೆ ಬಾರ್ಡೋಲಿಯ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಪೋರಬಂದರ್ ಸ್ಥಾನದಿಂದ (ದಿವಂಗತ) ವಿಠ್ಠಲ್ ರಾಡಾಡಿಯಾ ಅವರ ಪುತ್ರ ಜಯೇಶ್ ರಾಡಾಡಿಯಾ 2009ರ ಉಪಚುನಾವಣೆಯಲ್ಲಿ ಧೋರಾಜಿ ಅಸೆಂಬ್ಲಿಯಲ್ಲಿ ಗೆದ್ದಿದ್ದರು. 2012ರ ವಿಧಾನಸಭೆ ಚುನಾವಣೆಯಲ್ಲಿ ಜೆಟ್‌ಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಜಯೇಶ್ ಮತ್ತು ಅವರ ತಂದೆ 2013 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಜೆಟ್‌ಪುರದಿಂದ ರಾಡಾಡಿಯಾ ಜೂನಿಯರ್ ಸ್ಪರ್ಧೆ

2017ರ ಚುನಾವಣೆಯಲ್ಲಿ ರಾಡಾಡಿಯಾ ಜೂನಿಯರ್ ಜೆಟ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ವಿಜಯ್ ರೂಪಾನಿ ನೇತೃತ್ವದ ಸಂಪುಟದಲ್ಲಿ ಅವರು ಸಚಿವರಾದರು. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಬಿಜೆಪಿ ಅವರನ್ನು ಜೆಟ್‌ಪುರದಿಂದ ಕಣಕ್ಕಿಳಿಸಿದೆ.

"ಎಲ್ಲಾ ರಾಜಕೀಯ ಪಕ್ಷಗಳಲ್ಲಿ ರಾಜಕೀಯವನ್ನು ತಮ್ಮ ಪರಂಪರೆ ಎಂದು ಪರಿಗಣಿಸುವ ಹಲವಾರು ಕುಟುಂಬಗಳಿವೆ. ಅಂತಹ ಕುಟುಂಬಗಳು ಆಯಾ ಸ್ಥಾನಗಳಲ್ಲಿ ಭಾರಿ ಪ್ರಭಾವವನ್ನು ಬೀರುತ್ತವೆ ಮತ್ತು ಚುನಾವಣಾ ಫಲಿತಾಂಶವನ್ನು ನಿಯಂತ್ರಿಸಬಹುದು" ಎಂದು ರಾಜಕೀಯ ವಿಶ್ಲೇಷಕ ರವೀಂದ್ರ ತ್ರಿವೇದಿ ಹೇಳಿದ್ದಾರೆ. ಅಂತಹ ನಾಯಕರಿಗೆ ಆಯ್ಕೆಯನ್ನು ಹುಡುಕಲು ಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅವರು ತಮ್ಮ ಆತ್ಮೀಯರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

"ಅವರು ಸತತವಾಗಿ ಗೆಲ್ಲುತ್ತಲೇ ಇರುತ್ತಾರೆ ಮತ್ತು ಪಕ್ಷಗಳು ಪರ್ಯಾಯವನ್ನು ಕಂಡುಕೊಳ್ಳಲು ವಿಫಲವಾದ ಕಾರಣ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಅವರನ್ನು ಬದಲಾಯಿಸಿದಾಗಲೂ ಅದು ಅವರ ಪುತ್ರರು, ಪುತ್ರಿಯರು ಅಥವಾ ಹೆಂಡತಿಗೆ ಟಿಕೆಟ್ ನೀಡಬೇಕಾಗುತ್ತದೆ.

ಗುಜರಾತ್ ವಿಧಾನಸಭಾ ಚುನಾವಣೆ ಯಾವಾಗ?

ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ.

ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಅದೇ ರೀತಿ ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
BJP and Congress have fielded sons of sitting and former MLAs in at least 20 constituencies in Gujarat Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X