8 ತಿಂಗಳ ಶ್ರಮ ಕೆಲವೇ ವಾರಗಳಲ್ಲಿ ನೀರುಪಾಲು! ಎದೆಗುಂದದೆ ಮತ್ತೆ ಅಜ್ನಾರ್ ನದಿ ಸ್ವಚ್ಛತೆಗೆ ಇಳಿದ ಬಿಟ್ಟು ತಬಾಹಿ

ಪರಿಸರ ಸಂರಕ್ಷಣೆಯ ಬಗ್ಗೆ ಬರೀ ಭಾಷಣ ಮಾಡುವವರ ಮಧ್ಯೆ, ಎಲೆಮರೆಕಾಯಿಯಂತೆ ನೂರಾರು ಟನ್ ಕಸ ಎತ್ತಿ ನದಿಯೊಂದಕ್ಕೆ ಮರುಜೀವ ನೀಡಿದ್ದ ಯುವಕನ ಶ್ರಮ ಕೇವಲ ಕೆಲವೇ ವಾರಗಳಲ್ಲಿ ನೀರಿನ ಪಾಲಾಗಿದೆ.

ಹೌದು, ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಅಜ್ನಾರ್ ನದಿಯನ್ನು ಸತತ ಎಂಟು ತಿಂಗಳುಗಳ ಕಾಲ ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದ 20 ವರ್ಷದ ಸುರೇಂದ್ರ ಸಿಂಗ್ ಚೌಧರಿ ಅಂದರೆ ಸೋಶಿಯಲ್‌ ಮಿಡಿಯಾದಲ್ಲಿ ಬಿಟ್ಟು ತಬಾಹಿ ಎಂದೇ ಖ್ಯಾತರಾಗಿರುವ ಅವರ ಕಣ್ಣೆದುರೇ ನದಿ ಮತ್ತೆ ಪ್ಲಾಸ್ಟಿಕ್ ಹಾಗೂ ತ್ಯಾಜ್ಯದಿಂದ ತುಂಬಿಹೋಗಿದೆ. ತಿಂಗಳ ಹಿಂದೆ ಏಕಾಂಗಿಯಾಗಿ ನದಿ ಸ್ವಚ್ಛ ಮಾಡಿದ ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಫೇಮಸ್‌ ಆಗಿದ್ದನು.

Bittu Tabahi Resumes Ajnar River Cleanup After 8 Months Hard Work Ruined Gets Ocean Cleanup Offer

ಯಾವುದೇ ಅತ್ಯಾಧುನಿಕ ಯಂತ್ರಗಳ ಸಹಾಯವಿಲ್ಲದೆ, ಕೇವಲ ತನ್ನ ಎರಡು ಕೈಗಳಿಂದಲೇ ನದಿಯ ಕಸವನ್ನ ಹೆಕ್ಕಿ ತೆಗೆದಿದ್ದ ಬಿಟ್ಟು ತಬಾಹಿಯವರ 8 ತಿಂಗಳ ಕಠಿಣ ಪರಿಶ್ರಮ ಕ್ಷಣಮಾತ್ರದಲ್ಲಿ ಮಣ್ಣುಪಾಲಾಗಿದೆ.

ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ನನ್ನ ಎಂಟು ತಿಂಗಳ ಶ್ರಮ ಹೀಗೆ ವ್ಯರ್ಥವಾಗುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸುರೇಂದ್ರ ಸಿಂಗ್ ಚೌಧರಿ ಎದುರಿಸಿದ ಸವಾಲು

ಜನರ ಈ ನಿರ್ಲಕ್ಷ್ಯದಿಂದ ನದಿ ಮತ್ತೆ ಕಲುಷಿತಗೊಂಡರೂ ಬಿಟ್ಟು ತಬಾಹಿ ತಮ್ಮ ಪ್ರಯತ್ನವನ್ನ ಕೈಬಿಟ್ಟಿಲ್ಲ. ಬರಿಗೈಯಲ್ಲಿ ಪ್ಲಾಸ್ಟಿಕ್ ಬಾಟಲಿ, ಕೊಳೆತ ವಸ್ತುಗಳನ್ನ ತೆಗೆಯುವಾಗ ಅವರು ಚರ್ಮದ ಸೋಂಕು ಹಾಗೂ ಗಾಯಗಳಿಗೂ ತುತ್ತಾಗಿದ್ದರು. ಪೂಜಾ ಸಾಮಗ್ರಿಗಳನ್ನ ನದಿಗೆ ಎಸೆಯುವುದನ್ನ ತಡೆಯಲು ಅವರು ಅವುಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕೆಲಸವನ್ನೂ ಮಾಡಿದ್ದರು.

ಆದರೂ ನದಿ ಕ್ಲೀನ್ ಆದ ಕೆಲವೇ ದಿನಗಳಲ್ಲಿ ಜನ ಮತ್ತೆ ಕಸ ಸುರಿಯಲು ಆರಂಭಿಸಿದ್ದಾರೆ. ನದಿ ದಂಡೆಯ ಮೇಲೆ ಕಸ ಹಾಕಲೆಂದು ಅವರು ಇಟ್ಟಿದ್ದ ದೊಡ್ಡ ಡಸ್ಟ್ ಬಿನ್ ಅನ್ನು ಕೂಡ ಕಿಡಿಗೇಡಿಗಳು ಒಡೆದು ನದಿಗೆ ಎಸೆದಿದ್ದಾರೆ.

ಇಷ್ಟೆಲ್ಲಾ ಆದ್ರೂ ಕೂಡ ಈಜು ಬಾರದಿದ್ದರೂ ನದಿಗಿಳಿದು ಮತ್ತೆ ಕಸದ ಚೀಲಗಳನ್ನ ಹೊರತೆಗೆಯುವ ಮೂಲಕ ತಮ್ಮ ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನದಿಗಿಳಿದಿರುವ ವಿಡಿಯೋ ಹಂಚಿಕೊಂಡಿರುವ ಅವರು, ಹೆಚ್ಚಿನ ಪ್ರಮಾಣದ ಕಸವನ್ನ ತ್ವರಿತವಾಗಿ ಹೊರತೆಗೆಯಲು ಸೂಕ್ತ ಸಲಹೆಗಳನ್ನ ಕೇಳಿ ತಮ್ಮ ಫಾಲೋವರ್ಸ್ ಬಳಿ ಮನವಿ ಮಾಡಿದ್ದಾರೆ.

ಬೆಂಗಳೂರಿನ ತುರಹಳ್ಳಿ ಅರಣ್ಯ ಸ್ವಚ್ಛತೆ

ಬಿಟ್ಟು ತಬಾಹಿ ಕೇವಲ ಅಜ್ನಾರ್ ನದಿಗೆ ಮಾತ್ರ ತಮ್ಮ ಸೇವೆಯನ್ನ ಸೀಮಿತಗೊಳಿಸಿಲ್ಲ. ಪರಿಸರದ ಮೇಲಿನ ಅಪಾರ ಕಾಳಜಿಯಿಂದಾಗಿ ಅವರು ದಕ್ಷಿಣ ಭಾರತಕ್ಕೂ ಆಗಮಿಸಿ ಕೆಲಸ ಮಾಡಿದ್ದಾರೆ.

ಬೆಂಗಳೂರಿನ ಕನಕಪುರ ರಸ್ತೆಯ ಬಳಿ ಇರುವ, ನಗರದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ತುರಹಳ್ಳಿ ಅರಣ್ಯ ಪ್ರದೇಶವನ್ನ ಕೂಡ ತಮ್ಮ 100 ಜನರ ತಂಡದೊಂದಿಗೆ ಸೇರಿ ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸಿಲಿಕಾನ್ ಸಿಟಿ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಆನಂದ್ ಮಹೀಂದ್ರ ಶ್ಲಾಘನೆ ಹಾಗೂ ದಿ ಓಷನ್ ಕ್ಲೀನಪ್ ಆಫರ್

ಬಿಟ್ಟು ತಬಾಹಿ ಅವರ ಈ ನಿಸ್ವಾರ್ಥ ಸೇವೆ ಕೇವಲ ಸ್ಥಳೀಯರನ್ನಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಣ್ಯರ ಗಮನ ಸೆಳೆದಿದೆ. ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರ ಅವರು ಈ ಯುವಕನ ನದಿ ಸ್ವಚ್ಛತೆಯ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಷ್ಟೇ ಅಲ್ಲದೆ, ಡಚ್ ಮೂಲದ ಪರಿಸರ ಸಂರಕ್ಷಣಾ ಸಂಸ್ಥೆ ದಿ ಓಷನ್ ಕ್ಲೀನಪ್‌ನ ಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ಅವರು ಕೂಡ ಬಿಟ್ಟು ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, "ನಮ್ಮೊಂದಿಗೆ ಬಂದು ಕೆಲಸ ಮಾಡಿ" ಎಂದು ಜಾಬ್ ಆಫರ್ ನೀಡಿದ್ದಾರೆ.

ಒಬ್ಬ ಯುವಕ ಎಷ್ಟೇ ಕಷ್ಟಪಟ್ಟು ನದಿ ಸ್ವಚ್ಛಗೊಳಿಸಿದರೂ, ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ ಬೆಳೆಯುವವರೆಗೂ ಯಾವುದೇ ನದಿಯನ್ನು ಉಳಿಸಲು ಸಾಧ್ಯವಿಲ್ಲ. ನದಿ, ಕೆರೆಗಳ ಸ್ವಚ್ಛತೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ದೈನಂದಿನ ಕರ್ತವ್ಯವಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+