ಮುಂಬೈ-ಬೆಂಗಳೂರು 'ಆಕಾಶ' ವಿಮಾನಕ್ಕೆ ಹಕ್ಕಿ ಡಿಕ್ಕಿ: ಮುಂಬೈಗೆ ಮರಳಿದ ವಿಮಾನ
ಮುಂಬೈ, ಆಕ್ಟೋಬರ್15: ಎರಡು ತಿಂಗಳ ಹಿಂದೆ ಮೊದಲ ಹಾರಾಟ ನಡೆಸಿರುವ ಹೊಸ ಸಂಸ್ಥೆಯಾದ ಆಕಾಶ ಏರ್ ವಿಮಾನವು ಮುಂಬೈ-ಬೆಂಗಳೂರು ಮಾರ್ಗ ಮಧ್ಯ ಶುಕ್ರವಾರ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದಿದೆ. ನಂತರ ಸುಡುವ ವಾಸನೆಯ ಕಂಡು ಬಂದ ನಂತರ ವಿಮಾನವು ಟೇಕ್ ಆಫ್ ಆಗಿದೆ. ಈ ವೇಳೆ ಕೆಲವೇ ಕ್ಷಣಗಳಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಲು ಒತ್ತಾಯಿಸಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಆಕಾಶ್ ಏರ್ ವಿಮಾಕನಕ್ಕೆ ಹಕ್ಕಿಯೊಂದು ಆಕಾಶದಲ್ಲಿ ಡಿಕ್ಕಿಯಾಗಿ ಸಂಭವಹಿಸರುವ ಅವಘಡಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಬಂಧಪಟ್ಟ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ, ಆದರೆ ಈ ಘಟನೆ ಸಂಭವಹಿದ ವೇಳೆ ಆಕಾಶ್ ಏರ್ ಸಂಸ್ಥೆಯ ವಿಮಾನ ಯುಟರ್ನ್ ತೆಗೆದುಕೊಂಡು ಮರಳಿ ಮುಂಬೈನಲ್ಲಿ ಲ್ಯಾಂಡ್ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಆಕಾಶ ಏರ್ ಫ್ಲೈಟ್ ಕ್ಯೂಪಿ(1103) ವಿಮಾನ ಸುಮಾರು ಎರಡು ತಿಂಗಳ ಹಿಂದೆ ಆರಂಭಗೊಂಡಿರುವ ಈ ಹೊಸ ಸಂಸ್ಥೆಯ ವಿಮಾನವು ಮುಂಬೈನಿಂದ-ಬೆಂಗಳೂರಿಗೆ ಹಾರಾಟ ಆರಂಭಿಸಿದ ಆಕಾಶ ಏರ್ ಲೈನ್‌ನ ವಿಮಾನದ ಕ್ಯಾಬಿನ್‌ನಿಂದ ಏನೋ ಸುಟ್ಟ ವಾಸನೆ ಬರಲಾರಂಭಿಸಿದಾಗ ಕಲಕಿತು. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಶುಕ್ರವಾರ ವಿಮಾನವನ್ನು ತರಾತುರಿಯಲ್ಲಿ ಮತ್ತೆ ಮರಳಿ ಮುಂಬೈಗೆ ಇಳಿಸಿದ ಘಟನೆ ಈಗ ಬೆಳಕಿಗೆ ಬಂದಿದೆ. ಸಾವಿರಾರು ಅಡಿಯ ಮೇಲೆ ಹಾರುತ್ತಿದ್ದ ಹಕ್ಕಿ ಹಾರುವ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಯುಟರ್ನ್ ತೆಗೆದುಕೊಂಡಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ವಿಮಾನಯಾನ ನಿರ್ದೇಶನಾಲಯದಿಂದ ಘಟನೆಯ ಕುರಿತು ತನಿಖೆ
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಂಬಂಧಪಟ್ಟ ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಸಿಕ್ಕಿರುವ ಮಾಹಿತಿ ಪ್ರಕಾರ ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ ಫ್ಲೈಟ್ ಕ್ಯೂಪಿ (1103) ವಿಮಾನ ತನ್ನ ನಿಗದಿತ ವಿಮಾನದಲ್ಲಿ ಹೊರಟಿತ್ತು. ಆದರೆ ಪ್ರಯಾಣದ ಮಧ್ಯೆ ಕ್ಯಾಬಿನ್‌ನಲ್ಲಿ ಏನೋ ಸುಟ್ಟ ವಾಸನೆ ಬರುತ್ತಿತ್ತು. ಇದರಿಂದ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ. ಇದರಿಂದಾಗಿ ವಿಮಾನವನ್ನು ಮುಂಬೈಗೆ ವಾಪಸ್ ಕಳುಹಿಸಲಾಗಿದೆ.
ವಿಮಾನ ಲ್ಯಾಂಡ್ ಆದ ಬಳಿಕ ನಡೆಸಿದ ತಪಾಸಣೆ
ವಿಮಾನ ಲ್ಯಾಂಡ್ ಆದ ಬಳಿಕ ನಡೆಸಿದ ತಪಾಸಣೆಯಲ್ಲಿ ವಿಮಾನದ ಎಂಜಿನ್ ಸಂಖ್ಯೆ-1ರಲ್ಲಿ ಪಕ್ಷಿಯ ಅವಶೇಷಗಳು ಪತ್ತೆಯಾಗಿವೆ' ಎಂದು ಡಿಜಿಸಿಎ ಅಧಿಕಾರಿ ತಿಳಿಸಿದ್ದಾರೆ. "ಪಕ್ಷಿ ಡಿಕ್ಕಿ ಹೊಡೆದಿದ್ದರಿಂದ ಕ್ಯಾಬಿನ್‌ನಲ್ಲಿ ಸುಡುವ ವಾಸನೆ ಕಂಡುಬಂದಿದೆ." ಘಟನೆಯ ನಂತರ ವಿಮಾನದಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಅವರು ಹೇಳಿದರು.

ಘಟನೆಯ ಕುರಿತು ಏರ್‌ಲೈನ್ ವಕ್ತಾರರು, "ಅಕ್ಟೋಬರ್ 14 ರಂದು, ಮುಂಬೈನಿಂದ ಬೆಂಗಳೂರಿಗೆ ಹಾರುತ್ತಿದ್ದ ಆಕಾಶ ಏರ್ ಫ್ಲೈಟ್ ಕ್ಯೂಪಿ -1103, ಪಕ್ಷಿಯೊಂದಕ್ಕೆ ಡಿಕ್ಕಿ ಹೊಡೆದು, ಕ್ಯಾಬಿನ್‌ನಲ್ಲಿ ದುರ್ವಾಸನೆ ಬೀರಿತು ಮತ್ತು ವಿಮಾನವು ಮುಂಬೈಗೆ ಮರಳಿತು." ಮುಂಬೈನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು ಮತ್ತು ವಿಮಾನದ ವಿವರವಾದ ಪರೀಕ್ಷೆಯನ್ನು ನಡೆಸಲಾಯಿತು. ಈ ವರ್ಷ ಆಗಸ್ಟ್ 7ರಂದು ಆಕಾಶ ಏರ್ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.












Click it and Unblock the Notifications