ಪಂಜಾಬಿನಲ್ಲಿ ಶಸ್ತ್ರಚಿಕಿತ್ಸೆ ವ್ಯತ್ಯಯ 16 ಮಂದಿಗೆ ದೃಷ್ಟಿ ಹೀನತೆ
ಗುರುದಾಸ್‌ಪುರ್(ಪಂಜಾಬ್), ಡಿ.4: ಪಂಜಾಬಿನ ಗುರುದಾಸ್‌ಪುರ್ ಜಿಲ್ಲೆಯಲ್ಲಿ ಎನ್‌ಜಿಒ ಆಯೋಜಿಸಿದ್ದ ನೇತ್ರ ತಪಾಸಣಾ ಶಿಬಿರದಲ್ಲಿ ನಡೆಸಲಾದ ಸರ್ಜರಿ ವ್ಯತ್ಯಯವುಂಟಾಗಿದ್ದು, ಸುಮಾರು 60 ಮಂದಿ ದೃಷ್ಟಿ ಕಳೆದುಕೊಂಡ ಘಟನೆ ನಡೆದಿದೆ. ಬಿಲಾಸ್ ಪುರದ ಸಂತಾನಹರಣ ಚಿಕಿತ್ಸೆ ದುರಂತದ ಬೆನ್ನಲ್ಲೇ ಇದು ದೊಡ್ಡ ವೈದ್ಯಕೀಯ ಪ್ರಮಾದವಾಗಿದೆ.
ಅಮೃತಸರ ಮೂಲದ 16 ಮಂದಿ ಸೇರಿದಂತೆ ಒಟ್ಟು 60 ಮಂದಿ ಗುರುದಾಸ್ ಪುರದಲ್ಲಿ ನಡೆದ ಕಣ್ಣಿನ ಶಸ್ತ್ರಚಿಕಿತ್ಸೆ ಕ್ಯಾಂಪಿನಿಂದ ದೃಷ್ಟಿ ಕಳೆದುಕೊಂಡಿದ್ದಾರೆ. ಕಣ್ಣಿನ ಕ್ಯಾಟರ್ಯಾಕ್ಟ್ ಸರ್ಜರಿಗೊಳಲ್ಪಟ್ಟವರ ಸಂಖ್ಯೆ ಇನ್ನೂ ಸರಿಯಾಗಿ ಸಿಕ್ಕಿಲ್ಲ. ದೃಷ್ಟಿಹೀನತೆ ಅನುಭವಿಸಿದ ಸಂತ್ರಸ್ತರನ್ನು ಸದ್ಯಕ್ಕೆ ಅಮೃತಸರ ಮತ್ತು ಗುರುದಾಸ್‌ಪುರ್‌ನಲ್ಲಿರುವ ಇಎನ್‌ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮೃತಸರದ ಡೆಪ್ಯೂಟಿ ಕಮಿಷನರ್ ರವಿ ಭಗತ್ ಶಸ್ತ್ರಚಿಕಿತ್ಸೆಗೊಳಪಟ್ಟವರೆಲ್ಲರೂ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿರುವುದನ್ನು ದೃಢಪಡಿಸಿದ್ದಾರೆ. ಗುರುದಾಸ್ ಪುರದ ಶಿಬಿರದಲ್ಲಿ ನಡೆಸಲಾದ ಶಸ್ತ್ರಚಿಕಿತ್ಸೆ ಹಾಗೂ ಅಲ್ಲಿದ್ದ ವೈದ್ಯರುಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಡಿಸಿ ಭಗತ್ ಹೇಳಿದ್ದಾರೆ.
ಪ್ರಮಾದಕ್ಕೆ ಏನು ಕಾರಣ?: ಶಿಬಿರದಲ್ಲಿ ವೈದ್ಯರುಗಳು ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿ ಅಸುರಕ್ಷಿತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದಲೇ ಇಷ್ಟೊಂದು ಜನರು ದೃಷ್ಟಿ ಕಳೆದುಕೊಳ್ಳಬೇಕಾಗಿ ಬಂದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶಸ್ತ್ರಚಿಕಿತ್ಸೆಗೊಳಗಾದವರಲ್ಲಿ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಾಗೇ ಅಧಿಕವಾಗಿದ್ದಾರೆ. ಬಡ ಕುಟುಂಬಕ್ಕೆ ಸೇರಿದವರಾಗಿರುವ ಎಲ್ಲಾ ಸಂತ್ರಸ್ತರ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಲು ಮುಂದಾಗಿದೆ.
ಈ ಬಗ್ಗೆ ಅಮೃತಸರ ಆಸ್ಪತ್ರೆಯ ಸಿವಿಲ್ ಸರ್ಜನ್ ರಾಜೀವ್ ಭಲ್ಲಾ ಮಾತನಾಡಿದ್ದು, ಶಿಬಿರದಲ್ಲಿ ವೈದ್ಯರುಗಳು ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿ ಅಸುರಕ್ಷಿತ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದರಿಂದಲೇ ಇಷ್ಟೊಂದು ಜನರು ದೃಷ್ಟಿ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದ್ದಾರೆ.












Click it and Unblock the Notifications