ವಿಡಿಯೋ: ಬಿಹಾರ ಜಲ ಪ್ರಳಯದ ನಡುವ ಮನಕಲಕುವ ದೃಶ್ಯ

Posted By:
Subscribe to Oneindia Kannada

ಪಾಟ್ನ, ಆಗಸ್ಟ್ 18: ಜಲ ಪ್ರಳಯದಿಂಡ ಬಿಹಾರ ತತ್ತರಿಸುತ್ತಿದೆ. ಅರಾರಿಯಾ ಜಿಲ್ಲೆಯಲ್ಲಿ ಪ್ರವಾಹದ ನಡುವೆ ಸೇತುವೆ ದಾಟುತ್ತಿದ್ದ ಕುಟುಂಬವೊಂದು ನೀರು ಪಾಲಾದ ದೃಶ್ಯ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮಸ್ಥರು ಸೇತುವೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗುವಾಗ ಈ ದುರ್ಘಟನೆ ನಡೆದಿದೆ. ಇನ್ನೇನು ಸೇತುವೆಯ ಇನ್ನೊಂದು ತುದಿ ತಲುಪುವಷ್ಟರಲ್ಲಿ ಒಂದೇ ಕುಟುಂಬ ಮೂವರು ನೀರುಪಾಲಾಗಿದ್ದಾರೆ.

Bihar: Viral video shows how 3 of a family get washed away with a bridge in Araria

ಘಟನೆ ವಿವರ: ಅರಾರಿಯಾ ಜಿಲ್ಲೆಯಲ್ಲಿನ ಗ್ರಾಮವೊಂದರಲ್ಲಿ ಪ್ರವಾಹ ಸ್ಥಿತಿ ತೀವ್ರವಾಗಿತ್ತು. ಗ್ರಾಮದ ಜನರು ಸೇತುವೆ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ನೀರಿನ ರಭಸಕ್ಕೆ ಶಿಥಿಲಗೊಂಡ ಸೇತುವೆ ಕುಸಿದು ಮೂವರು ನೀರುಪಾಲಾಗಿದ್ದು, ಇದು ವಿಡಿಯೋದಲ್ಲಿ ಸೆರೆಯಾಗಿದೆ.

ಬಿಹಾರದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, 119 ಮಂದಿ ಇಲ್ಲಿ ತನಕ ಬಲಿಯಾಗಿದ್ದಾರೆ. ಮಳೆಯ ದೆಸೆಯಿಂದ ಸುಮಾರು 16 ಜಿಲ್ಲೆಗಳಲ್ಲಿ 98 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 124ರಸ್ತೆಗಳು ಹಾನಿಗೊಂಡಿವೆ. ಪೂರ್ವ ವಲಯದ ಸುಮಾರು 39 ರೈಲುಗಳು ಸ್ಥಗಿತಗೊಂಡಿವೆ. ಆಗಸ್ಟ್ 20ರ ತನಕ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.


ಪ್ರವಾಹ ಪೀಡಿತರ ನೆರವಿಗಾಗಿ 104 ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಪ್ರಕಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three people including two children got washed away along with a bridge in Araria district of Bihar on August 13. The video, captured by a local, has gone viral on social media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X