ಕ್ಯಾಂಡಿ ಕ್ರಶ್ ಆಡಿಯೇ ವಿಶ್ವ ದಾಖಲೆ ಬರೆದ 19ರ ಯುವಕ: 22,222ನೇ ಲೆವೆಲ್ ತಲುಪಿದ ಶುಭಂ!

ಸ್ಮಾರ್ಟ್‌ಫೋನ್ ಬಳಸುವ ಬಹುತೇಕರು ತಮ್ಮ ಬಿಡುವಿನ ವೇಳೆಯಲ್ಲಿ ಕ್ಯಾಂಡಿ ಕ್ರಶ್ ಆಡಿರುತ್ತಾರೆ. ಕೆಲವರು ಒಂದೆರಡು ಲೆವೆಲ್ ಆಡಿ ಬಿಟ್ಟರೆ, ಇನ್ನು ಕೆಲವರಿಗೆ ಇದೊಂದು ವ್ಯಸನದಂತಾಗಿರುತ್ತದೆ. ಆದರೆ, ಇಲ್ಲೊಬ್ಬ ಯುವಕ ಕೇವಲ ಟೈಂಪಾಸ್‌ಗಾಗಿ ಈ ಗೇಮ್ ಆಡದೆ, ಸತತವಾಗಿ ಆಡುವ ಮೂಲಕ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿದ್ದಾನೆ ನೋಡಿ.

ಹೌದು, ಬಿಹಾರದ 19 ವರ್ಷದ ಯುವಕ ಶುಭಂ ಕುಮಾರ್ ಈ ಜನಪ್ರಿಯ ಕ್ಯಾಂಡಿ ಕ್ರಶ್ ಗೇಮ್‌ನಲ್ಲಿ ಯಾರು ಊಹಿಸದಷ್ಟು ಹಂತವನ್ನ ತಲುಪುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದ್ದಾನೆ. ಆತನ ಈ ಸಾಧನೆ ಈಗ ಸೋಶಿಯಲ್‌ ಮಿಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಟ್ರೆಂಡಿಂಗ್‌ನಲ್ಲಿದೆ.

Bihar Teen Shubham Kumar Sets Candy Crush World Record By Reaching Highest Level 22 222 in 2026

ಕ್ಯಾಂಡಿ ಕ್ರಶ್ ವಿಶ್ವ ದಾಖಲೆ ನಿರ್ಮಿಸಿದ ಬಿಹಾರದ ಯುವಕ

ಬಿಹಾರದ ದಿಗ್ವಾರಾ ಮೂಲದ 19 ವರ್ಷದ ಶುಭಂ ಕುಮಾರ್ ಈ ಸಾಧನೆ ಮಾಡಿದ ಯುವಕ. ಅಕ್ಟೋಬರ್ 5, 2026ರಂದು ಆತ ಕ್ಯಾಂಡಿ ಕ್ರಶ್ ಗೇಮ್‌ನಲ್ಲಿ ಬರೋಬ್ಬರಿ 22,222ನೇ ಲೆವೆಲ್ ತಲುಪಿದ್ದಾನೆ. ಈ ಮೂಲಕ ಜಗತ್ತಿನ ಯಾವುದೇ ಆಟಗಾರ ಮಾಡದಂತಹ ವಿನೂತನ ದಾಖಲೆಯೊಂದನ್ನ ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ.

ಈ ಸಾಧನೆಯನ್ನ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿದೆ. ಈ ಹಿಂದೆ ಅಕ್ಟೋಬರ್ 2024 ರಲ್ಲಿ ಕೆನಡಾದ ಕ್ರಿಸ್ಟೋಫರ್ ಬುಲ್ಲಿ ಎಂಬುವವರು 15,066ನೇ ಲೆವೆಲ್ ತಲುಪಿ ದಾಖಲೆ ಬರೆದಿದ್ದರು. ಇದೀಗ ಶುಭಂ ಕುಮಾರ್ ಆ ಹಳೆಯ ದಾಖಲೆಯನ್ನ ಧೂಳಿಪಟ ಮಾಡಿ ಹೊಸ ಇತಿಹಾಸ ಬರೆದಿದ್ದಾನೆ.

ತನ್ನ ಈ ವಿಶ್ವ ದಾಖಲೆಯ ಕುರಿತು ಮಾತನಾಡಿರುವ ಶುಭಂ ಕುಮಾರ್, ತನಗೆ ಈ ಗೇಮ್ ಆಡುವುದು ಎಂದರೆ ತುಂಬ ಇಷ್ಟ ಎಂದಿದ್ದಾನೆ. ಆತ ಪ್ರತಿದಿನ ಸತತವಾಗಿ 40 ಲೆವೆಲ್‌ಗಳನ್ನಾ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದನು. ಸತತ ಪ್ರಯತ್ನದ ಫಲವಾಗಿ ತನ್ನ ಮೊಬೈಲ್ ಫೋನ್‌ನಲ್ಲಿ 22,222ನೇ ಹಂತವನ್ನ ಯಶಸ್ವಿಯಾಗಿ ತಲುಪಿದ್ದಾನೆ.

2012ರಲ್ಲಿ ಸ್ವೀಡಿಷ್ ಡೆವಲಪರ್ 'ಕಿಂಗ್' ಸಂಸ್ಥೆಯು ಫೇಸ್‌ಬುಕ್‌ಗಾಗಿ ಪರಿಚಯಿಸಿದ್ದ ಈ ಉಚಿತ ವಿಡಿಯೋ ಗೇಮ್, ಬಣ್ಣ ಬಣ್ಣದ ಟೈಲ್ಸ್‌ಗಳನ್ನ ಮ್ಯಾಚ್ ಮಾಡುವ ಸರಳ ಆಟವಾದರೂ, ಮುಂದಿನ ಹಂತಗಳಿಗೆ ಹೋದಂತೆ ಅತ್ಯಂತ ಕಠಿಣವಾಗುತ್ತಾ ಹೋಗುತ್ತದೆ. ಇಂತಹ ಕಠಿಣ ಹಂತಗಳನ್ನ ಶುಭಂ ಒಬ್ಬನೇ ಆಡಿ ಮುಗಿಸಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಗತ್ತಿನಾದ್ಯಂತ ಕೋಟ್ಯಂತರ ಬಾರಿ ಡೌನ್‌ಲೋಡ್ ಆಗಿರುವ ಈ ಗೇಮ್‌ನಲ್ಲಿ ಸಾವಿರಾರು ಲೆವೆಲ್‌ಗಳಿವೆ. ಸಾಮಾನ್ಯವಾಗಿ ಆಟಗಾರರು ಕೆಲವು ನೂರು ಲೆವೆಲ್ ದಾಟುವಷ್ಟರಲ್ಲಿ ಸುಸ್ತಾಗಿ ಆಟವನ್ನ ಕೈಬಿಡುತ್ತಾರೆ. ಆದರೆ ಶುಭಂ ತೋರಿದ ಅಸಾಧಾರಣ ತಾಳ್ಮೆ ಅವನನ್ನ ವಿಶ್ವದಾಖಲೆಯ ಶಿಖರಕ್ಕೇರಿಸಿದೆ.

ವೈರಲ್ ನ್ಯೂಸ್: ನೆಟ್ಟಿಗರ ಪ್ರತಿಕ್ರಿಯೆ

ಶುಭಂ ಕುಮಾರ್ ಈ ದಾಖಲೆ ಬರೆದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಆತನ ಏಕಾಗ್ರತೆ ಹಾಗೂ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಈ ಸಾಧನೆಯನ್ನ ಲೇವಡಿ ಮಾಡಿದ್ದಾರೆ. "ಬಿಹಾರದ ಜನರಿಗೆ ಜಗತ್ತು ಇನ್ನೂ ಸಿದ್ಧವಾಗಿಲ್ಲ" ಎಂದು ಎಕ್ಸ್ ಬಳಕೆದಾರರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಇದೇ ವಯಸ್ಸಿನಲ್ಲಿ ಚೀನಾದ ವಿದ್ಯಾರ್ಥಿಗಳು ರೋಬೋಟ್ ತಯಾರಿಸುತ್ತಿದ್ದಾರೆ, ನಮ್ಮಲ್ಲಿ ಗೇಮ್ ಆಡಿ ದಾಖಲೆ ಮಾಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಯುವಕನ ಶಿಕ್ಷಣ ಹಾಗೂ ಉದ್ಯೋಗದ ಬಗ್ಗೆಯೂ ಹಲವರು ಪ್ರಶ್ನಿಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಈ ಘಟನೆಯನ್ನ ತಳುಕು ಹಾಕಿದ್ದಾರೆ. "ಜೀವನದಲ್ಲಿ ನಾಲ್ಕು ಹಂತಗಳಿವೆ: ಈಸಿ, ಮೀಡಿಯಂ, ಹಾರ್ಡ್ ಮತ್ತು ಬಿಹಾರ್" ಎಂಬ ಮೀಮ್ಸ್ ಕೂಡ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+