Video: ಬಾರ್ ಗರ್ಲ್‌ಗಳ ನೃತ್ಯಕ್ಕೆ ವೇದಿಕೆ ಶೇಕ್.. ಶೇಕ್... :ಟಿನ್ ಶೆಡ್ ಕುಸಿದು ನೂರಾರು ಜನರಿಗೆ ಗಾಯ!
ಬಿಹಾರ ಸೆಪ್ಟೆಂಬರ್ 4: ಆರ್ಕೆಸ್ಟ್ರಾ ಕಾರ್ಯಕ್ರಮದ ವೇಳೆ ಟಿನ್ ಶೆಡ್ ಕುಸಿದು ಬಿದ್ದು ನೂರಾರು ಜನರು ಗಾಯಗೊಂಡ ಘಟನೆ ಬಿಹಾರದ ಸರನ್ ಜಿಲ್ಲೆಯ ಇಸುಪುರ್‌ನಲ್ಲಿ ನಡೆದಿದೆ. ಟಿನ್ ಶೆಡ್‌ನ ಬಾಲ್ಕನಿ ಮೇಲೆ ನಿಂತು ಹತ್ತಕ್ಲೂ ಹೆಚ್ಚು ಜನ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಆದರೆ ತಗಡಿನ ಶೆಡ್‌ನ ಬಾಲ್ಕನಿ ಭಾರ ತಾಳಲಾರದೆ ಏಕಾಏಕಿ ಕುಸಿದುಬಿದ್ದಿದೆ.
ಬಾಲ್ಕನಿಯಲ್ಲಿ ಕುಳಿತಿದ್ದವರು ಕೆಳಗೆ ನಿಂತಿದ್ದವರ ಮೇಲೆ ಶೆಡ್ ಸಮೇತ ಬಿದ್ದಿದ್ದಾರೆ. ಏಕಾಏಕಿ ಸಂಭವಿಸಿದ ಈ ಘಟನೆ ಬಳಿಕ ಗಾಬರಿಗೊಂಡ ಜನರ ನೂಕುನುಗ್ಗಲು ಉಂಟಾಗಿದೆ. ಈ ದುರಂತದಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಹತ್ತಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇಸುಪುರ್ ಮೇಳದಲ್ಲಿ ಮಂಗಳವಾರ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಹುಡುಗಿಯರು ಹಾಡುಗಳಿಗೆ ನೃತ್ಯ ಮಾಡುತ್ತಿದ್ದರು. ಈ ಕಾರ್ಯಕ್ರಮ ನೋಡಲು ಸಾವಿರಾರು ಜನರು ನೆರೆದಿದ್ದರು. ಕೆಳಗಿನ ಜಾಗ ತುಂಬಿದ ಕೂಡಲೇ ಟಿನ್ ಶೆಡ್ ನ ಬಾಲ್ಕನಿಯಲ್ಲಿ ಜನ ಕುಳಿತುಕೊಳ್ಳತೊಡಗಿದರು. ಅಷ್ಟೊಂದು ಜನರ ಭಾರವನ್ನು ತಾಳಲಾರದೆ ಬಾಲ್ಕನಿ ಕ್ಷಣಾರ್ಧದಲ್ಲಿ ಕುಸಿದುಬಿತ್ತು. ಘಟನೆಯ ನಂತರ ಗದ್ದಲ ಉಂಟಾಯಿತು. ಜನ ಕಿರುಚಾಡಲು ಆರಂಭಿಸಿದರು. ಈ ಅವಘಡದಲ್ಲಿ ಬಾಲ್ಕನಿ ಕೆಳಗೆ ನಿಂತಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಅಖಾರಾ ನಂಬರ್-1 ಪರ್ಸೌಲಿಯ ಬಾಬಾ ಲಾಲ್ದಾಸ್ ಮಥಿಯಾ ಕಾಂಪ್ಲೆಕ್ಸ್‌ನಲ್ಲಿ ಈ ದುರಂತ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ನೂರಾರು ಜನರನ್ನು ತಕ್ಷಣವೇ ಇಸುವಾಪುರ ಪಿಎಚ್‌ಸಿಗೆ (ಪ್ರಾಥಮಿಕ ಆರೋಗ್ಯ ಕೇಂದ್ರ) ದಾಖಲಿಸಲಾಯಿತು. ಈ ಪೈಕಿ ಹತ್ತು ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
बिहार के सारण से आया दिल दहला देने वाला वीडियो!
— AajTak (@aajtak) September 4, 2024
आर्केस्ट्रा देख रही हजारों की भीड़ पर गिरा छज्जा, ऊपर से धड़ाधड़ गिरे लोग, देखिए भयावह वीडियो। #ViralVideo #Bihar #Balcony #collapse pic.twitter.com/8SGkYj2BSw
ಆದರೆ, ಈ ಅವಘಡದಲ್ಲಿ ಯಾರೂ ಸಾವನ್ನಪ್ಪದಿರುವುದು ಸಮಾಧಾನದ ಸಂಗತಿ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಭೀಕರ ಅಪಘಾತವನ್ನು ಜನರು ವೀಕ್ಷಿಸಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಹತ್ತು ಜನರಿಗೆ ಗಂಭೀರ ಗಾಯ
ಈ ಅವಘಡದಿಂದ ಜಾತ್ರೆಯ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿದೆ. ಇಷ್ಟೊಂದು ಜನಸಂದಣಿಯನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಸಕಾಲದಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಬಹುಶಃ ಈ ಘಟನೆಯನ್ನು ತಪ್ಪಿಸಬಹುದಿತ್ತು. ಪ್ರಸ್ತುತ, ಘಟನೆಯ ನಂತರ ಈ ವಿಷಯವನ್ನು ಆಡಳಿತ ತನಿಖೆ ನಡೆಸುತ್ತಿದೆ.












Click it and Unblock the Notifications