ರೇಪ್ ಅಂದ್ರೆ ಏನು ಗೊತ್ತಾ ಅಂತ ಹುಡ್ಗೀರನ್ನು ಕೇಳಿದ ಎಂಎಲ್ಎ !!

Posted By:
Subscribe to Oneindia Kannada

ಪಾಟ್ನಾ, ಜ. 11: "ಒಂದು ಹುಡುಗಿ ಅತ್ಯಾಚಾರಕ್ಕೊಳಗಾಗಿದ್ದಾಳೆ ಅಂತ ಹೇಗೆ ಹೇಳ್ತೀರಿ? ಅಸಲಿಗೆ ರೇಪ್ ಅಂದ್ರೆ ಏನು ಗೊತ್ತಾ? ಹಾಗಾದಾಗ ರಕ್ತ ಎಲ್ಲಿಂದ ಬರುತ್ತೆ ಹೇಳಿ ನೋಡೋಣ?'' ಇಂಥ ಪ್ರಶ್ನೆಗಳನ್ನು ಜನಪ್ರತಿನಿಧಿಯೊಬ್ಬರು ಕಾಲೇಜು ಹುಡುಗಿಯನ್ನು ಕೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಅಂದಹಾಗೆ, ಇವರು ಬಿಹಾರದ ರೋಹ್ಟಾಸ್ ಜಿಲ್ಲೆಯ ಚೆನಾರಿ ಎಂಬ ತಾಲೂಕಿನ ಶಾಸಕರು. ಹೆಸರು ಲಲನ್ ಪಾಸ್ವಾನ್. ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯ (ಆರ್ ಎಲ್ ಎಸ್ ಪಿ) ನಾಯಕರೂ ಆಗಿದ್ದಾರೆ.

Bihar MLA asks controversial questions to school girls over rape case

ಬುಧವಾರ ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ಇವರು, ಹಾಸ್ಟೆಲ್ ನಲ್ಲಿರುವ 11ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯರ ಬಳಿ ಇಂಥ ಪ್ರಶ್ನೆಗಳನ್ನು ಕೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಜ. 8ರಂದು ಬೆಳಗ್ಗೆ ಅದೇ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಬಾಲಕಿಯರ ಶವ, ಹಾಸ್ಟೆಲ್ ನಿಂದ ತುಸು ದೂರ ಪತ್ತೆಯಾಗಿತ್ತು. ರಕ್ತ ಸಿಕ್ತವಾಗಿ, ಬಟ್ಟೆ ಹರಿದಿದ್ದರಿಂದಾಗಿ ಅದು ಅತ್ಯಾಚಾರವೆಂದೇ ಭಾಸವಾಗುವಂತಿತ್ತು.

ಪ್ರಕರಣದ ಹಿನ್ನೆಲೆಯಲ್ಲೇ ಹಾಸ್ಟೆಲ್ ಗೆ ಎಂಎಲ್ ಎ ಮಹಾಶಯರು ಭೇಟಿ ನೀಡಿದ್ದು. ಹಾಸ್ಟೆಲ್ ನ ಭದ್ರತೆ ಪರಿಶೀಲಿಸಲು ಬಂದಿರುವುದಾಗಿ ತಿಳಿಸಿದ್ದ ಎಂಎಲ್ ಎ ಸಾಹೇಬ್ರು, ಅಲ್ಲಿನ ಹುಡುಗಿಯರ ಬಳಿ ಪ್ರಕರಣದ ತನಿಖೆಯನ್ನೇ ಶುರು ಮಾಡಿದ್ದಾರೆ.

ಮೊದಲೇ ಭೀತಿಗೊಳಗಾಗಿದ್ದ ಹುಡುಗಿಯರ ಬಳಿಗೆ ತೆರಳಿ, ರೇಪ್ ಅಂದ್ರೆ ಏನು ಗೊತ್ತಾ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕೊಳಪಡಿಸಿರುವುದು ವಿವಾದವೆಬ್ಬಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lalan Paswan was caught on camera asking schoolgirls, “How can you tell she was raped... Where was blood coming from?” ಬಿಹಾರದ ವೈಶಾಲಿ ಜಿಲ್ಲೆಯಲ್ಲಿರುವ ದಲಿತ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ್ದ ಬಿಹಾರದ ರೋಹ್ಟಾಸ್ ಜಿಲ್ಲೆಯ ಚೆನಾರಿ ಎಂಬ ತಾಲೂಕಿನ ಶಾಸಕ ಲಲನ್ ಪಾಸ್ವಾನ್ ಬಾಲಕಿಯರ ಬಳಿ ರೇಪ್ ಅಂದ್ರೆ ಏನು ಗೊತ್ತಾ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಅವರನ್ನು ಮುಜುಗರಕ್ಕೊಳಪಡಿಸಿರುವುದು ವಿವಾದವೆಬ್ಬಿಸಿದೆ.rape, bihar, ಅತ್ಯಾಚಾರ, ಬಿಹಾರ
Please Wait while comments are loading...