ಪತ್ರಕರ್ತನ ಕೊಲೆ: ಸಿಎಂ ರಾಜೀನಾಮೆ ಕೊಟ್ಟು ಪ್ರಧಾನಿ ಹುದ್ದೆಗೆ ಪ್ರಯತ್ನಿಸಲಿ: ಗಿರಿರಾಜ್ ಸಿಂಗ್
ನವದೆಹಲಿ, ಆಗಸ್ಟ್ 18: ಪತ್ರಕರ್ತರು ಮತ್ತು ಪೊಲೀಸರಿಗೆ ರಕ್ಷಣೆ ಇಲ್ಲದಾಗಿದೆ. ಹತ್ಯೆ ಪ್ರಕರಣ ಸಂಬಂಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೊದಲು ರಾಜೀನಾಮೆ ನೀಡಿ ನಂತರ ಪ್ರಧಾನಿಯಾಗುವ ಸ್ಪರ್ಧೆಯತ್ತ ಗಮನ ಹರಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಅವರ ರಾಜ್ಯದಲ್ಲಿ ಪತ್ರಕರ್ತರು, ಪೊಲೀಸ್ ಸಿಬ್ಬಂದಿಗೆ ಸುರಕ್ಷತೆ ಇಲ್ಲದಾಗಿದೆ. ಅಷ್ಟೇ ಯಾಕೆ ಒಬ್ಬ ಮಹಿಳಾ ಶಾಸಕಿ ಸುರಕ್ಷಿತವಾಗಿಲ್ಲ. ಪತ್ರಕರ್ತರೊಬ್ಬರು ಕೊಲೆ ಘಟನೆ ಬೆನ್ನಲ್ಲೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ದೆಹಲಿಗೆ ಭೇಟಿ ನೀಡಿ ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಮಾತನಾಡುತ್ತಾರೆ. ಪ್ರಧಾನಿ ಹುದ್ದೆಗೆ ಪೈಪೋಟಿ ಕೊಡುವ ಮೊದಲು ರಾಜೀನಾಮೆ ಕೊಡಲಿ ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.

ಇಂದು ಶುಕ್ರವಾರ ಬಿಹಾರದ ಅರಾರಿಯಾದಲ್ಲಿ ದುಷ್ಕರ್ಮಿಯೊಬ್ಬರು ಪತ್ರಕರ್ತರನ್ನು ಅವರ ನಿವಾಸದಲ್ಲಿಯೇ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಇದೆಲ್ಲ ಗಮನಿಸಿದರೆ ಬಿಹಾರದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.
ಪ್ರಧಾನಿ ರೇಸಿನ ಸಿಎಂಗೆ ರಾಜ್ಯ ನಿರ್ವಹಣೆ ಅಸಾಧ್ಯವಾಗಿದೆ
ರಾಜ್ಯದಲ್ಲಿ ಮತ್ತೊಂದು ಜಂಗಲ್ ರಾಜ್ಯ ಅನ್ನು ಬಿಹಾರ ಸಹಿಸುವುದಿಲ್ಲ ಎಂದು ಸಿಎಂ ನಿತೀಶ್ ಕುಮಾರ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ನಿಮಗೆ ಬಿಹಾರ ರಾಜ್ಯವನ್ನು ನಿರ್ವಹಿಸಲು ಆಗುತ್ತಿಲ್ಲ ಆದರೆ ನೀವು ಪ್ರಧಾನಿಯಾಗುವ ರೇಸ್‌ನಲ್ಲಿದ್ದೀರಿ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ ಅಂಶಗಳನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಳ್ಳಿ ಹಾಕಿದರು. ಪೊಲೀಸ್ ಸಿಬ್ಬಂದಿಯ ಸಾವಿನ ಘಟನೆಯನ್ನು ನೀವು ಹೇಗೆ ನಿರಾಕರಿಸಬಹುದು, ಆದರೆ ಪತ್ರಕರ್ತರು ಮಹಿಳಾ ಶಾಸಕಿಯೇ? ಬಿಹಾರದ ಜನರು ಅಪರಾಧದ ಅಂಶಗಳನ್ನು ನೋಡುತ್ತಾರೆಯೆ ಎಂದು ತಿಳಿಸಿದ್ದರು.
ತನಿಖೆ ಕೈಗೊಳ್ಳುವ ಭರವಸೆ ನೀಡಿದ ಸಿಎಂ
ಇನ್ನು ಪತ್ರಕರ್ತರೊಬ್ಬರ ಕೊಲೆ ಪ್ರಕರಣ ಕುರಿತು ಸುದ್ದಿಗಾರರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಕ್ರಿಯಿಸಿ, ಇಂತಹ ಕೊಲೆ ನಡೆದಿರುವುದು ದುರದೃಷ್ಟಕರ ಸಂಗತಿ ಎಂದರು. ಯಾರೋ ಒಬ್ಬ ವ್ಯಕ್ತಿಯನ್ನು ಈ ರೀತಿ ಹತ್ಯ ಮಾಡುವುದು ಎಂದರೆ ಏನು?. ಇಂತಹ ಘಟನೆಗಳು ಆಗದಂತೆ ಸರ್ಕಾರ ಎಚ್ಚರ ವಹಿಸುವ ಜತೆಗೆ ಸದರಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಕರಣ ಸಂಬಂಧ ಮಾತನಾಡಿದ ಬಿಹಾರದ ಮತ್ತೊಬ್ಬ ನಾಯಕ ತೇಜಸ್ವಿ ಯಾದವ್ ಅವರು, NCRB ಹೇಳಿರುವ ಅಂಕಿ ಅಂಶಗಳ ಪ್ರಕಾರ ಕೊಲೆ, ಅಪಹರಣ, ಅತ್ಯಾಚಾರ ಇಲ್ಲವೇ ಲೂಟಿಯಂತಹ ಘಟನೆಗಳೇ ಆಗಿರಲಿ ಈ ಅಪರಾಧಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಹೆಚ್ಚು. ಇದೆಲ್ಲವೂ ನಡೆಯುತ್ತಿರುವುದು ದೇಶದ ರಾಜಧಾನಿ ದೆಹಲಿಯಲ್ಲಿ ಎಂಬುದು ವಿಶೇಷ. ಪ್ರಧಾನಮಂತ್ರಿಗಳು, ರಾಷ್ಟ್ರಪತಿಗಳು ಬದುಕಿದ್ದು, ದೆಹಲಿ ಪೊಲೀಸರು ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತಾರೆ ಎಂದು ಅವರು ಲೇವಡಿ ಮಾಡಿದರು.












Click it and Unblock the Notifications