ಬಗೆಹರಿದ ಬಿಹಾರ ಮೈತ್ರಿ ಕೂಟದ ಸೀಟು ಹಂಚಿಕೆ ಕಸರತ್ತು
ಪಾಟ್ನಾ, ಆಗಸ್ಟ್ 12 : ಭಾರೀ ಕುತೂಹಲ ಕೆರಳಿಸಿರುವ ಬಿಹಾರದಲ್ಲಿ ಚುನಾವಣಾ ಮೈತ್ರಿ ಮಾತುಕತೆ ಪೂರ್ಣಗೊಂಡಿದ್ದು, ಸೀಟು ಹಂಚಿಕೆ ಪ್ರಕ್ರಿಯೆಯೂ ಅಂತ್ಯಗೊಂಡಿದೆ. ಆರ್‌ಜೆಡಿ ಮತ್ತು ಜೆಡಿಯು ತಲಾ 100 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
ಬುಧವಾರ ಪಾಟ್ನಾದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಜೆಡಿಯು ಮಖ್ಯಸ್ಥ ನಿತೀಶ್ ಕುಮಾರ್, ಚುನಾವಣಾ ಮೈತ್ರಿಯ ಬಗ್ಗೆ ಮಾಹಿತಿ ನೀಡಿದರು. ಆಗಸ್ಟ್ 30ರಂದು ಗಾಂಧಿ ಮೈದಾನದಲ್ಲಿ 'ಬಿಹಾರ್ ಸ್ವಾಭಿಮಾನ ಸಮಾವೇಶ' ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿಹಾರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 243. ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 100, ಸಂಯುಕ್ತ ಜನತಾ ದಳ (ಜೆಡಿಯು) 100 ಹಾಗೂ ಕಾಂಗ್ರೆಸ್ ಪಕ್ಷ 40 ಸೀಟುಗಳನ್ನು ಹಂಚಿಕೆ ಮಾಡಿಕೊಂಡಿವೆ. [ಬಿಹಾರದ ಅದೃಷ್ಟವನ್ನು ಬಿಜೆಪಿ ಬದಲಾಯಿಸಲಿದೆ : ಮೋದಿ]
ಮೋದಿ ಆರೋಪಕ್ಕೆ ಉತ್ತರ : ಕಳೆದ ಭಾನುವಾರ ಬಿಹಾರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಆರೋಪಗಳನ್ನು ಮಾಡಿದ್ದಾರೆ. ಆ.30ರಂದು ಈ ಆರೋಪಗಳಿಗೆ ಉತ್ತರ ನೀಡಲಾಗುತ್ತದೆ ಎಂದು ಲಾಲೂ ಪ್ರಸಾದ್ ಯಾದವ್ ತಿಳಿಸಿದರು. [ನಿತೀಶ್ ಕುಮಾರ್ ಪ್ರಶ್ನೆಗೆ ಮೋದಿ ಖಡಕ್ ಉತ್ತರ]
ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರವನ್ನು ಅವಮಾನಿಸಿದ್ದಾರೆ. ಇದಕ್ಕೆ ಚುನಾವಣೆಯಲ್ಲಿಯೇ ಬಿಹಾರದ ಜನರು ಉತ್ತರ ಕೊಡುತ್ತಾರೆ. ನಾವೆಲ್ಲರೂ ಒಂದ್ದಾಗಿದ್ದೇವು, ಈಗ ಒಂದಾಗಿದ್ದೇವೆ. ಕೇಸರಿ ಪಕ್ಷಕ್ಕೆ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದರು.












Click it and Unblock the Notifications