ಬಿಜೆಪಿ ಪಾಲಿಗೆ ಬಿಹಾರ ಗ್ಯಾರಂಟಿ? ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಎಡವಿದ್ದು ಎಲ್ಲಿ? Bihar Election 2025
ಬಿಹಾರ ಚುನಾವಣೆ ಮುಕ್ತಾಯವಾಗಿದೆ, 2025 ಬಿಹಾರ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆಯಲು ಕಾರಣ ಒಂದಿತ್ತು. ಸತತವಾಗಿ ಅಧಿಕಾರ ಪಡೆಯುತ್ತಿರುವ, ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಈ ಬಾರಿ ವಿಪಕ್ಷಗಳು ಶಾಕ್ ಕೊಡುತ್ತವಾ? ಎಂಬ ಚರ್ಚೆಯೂ ನಡೆದಿತ್ತು. ಆದರೆ ಚುನಾವಣೆ ಮುಗಿದ ನಂತರ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಇದೀಗ ಬೇರೆಯದ್ದೇ ಉತ್ತರ ಹೇಳುತ್ತಿವೆ. ಹಾಗಾದರೆ, ಬಿಜೆಪಿ ಪಾಲಿಗೆ ಬಿಹಾರ ಗ್ಯಾರಂಟಿ? ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಎಡವಿದ್ದು ಎಲ್ಲಿ?
ಬಿಹಾರ ವಿಧಾನಸಭೆಯಲ್ಲಿ ಒಟ್ಟಾರೆ 243 ಸ್ಥಾನಗಳು ಇದ್ದು, ಈ 243 ಸ್ಥಾನಗಳಿಗೆ 2 ಹಂತದಲ್ಲಿ ಮತದಾನ ನಡೆಸಲಾಗಿತ್ತು. 3-4 ತಿಂಗಳಿಂದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾರಿ ಆರೋಪ & ಪ್ರತ್ಯಾರೋಪ ಸೇರಿ ಮತದಾರರನ್ನ ಸೆಳೆಯುವ ತಂತ್ರಗಳೇ ಬಿಹಾರದಲ್ಲಿ ಸೌಂಡ್ ಮಾಡಿವೆ. ಇಂದು ಅದಕ್ಕೆಲ್ಲಾ ತೆರೆ ಬಿತ್ತು, ಮತದಾನ ಮುಕ್ತಾಯ ಆಗುತ್ತಿದ್ದಂತೆ ಹೊರ ಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಗೆಲುವಿನ ಕುರಿತು ಭವಿಷ್ಯ ನುಡಿದಿವೆ. ಭಾರಿ ಕುತೂಹಲ ಕೆರಳಿಸಿದ್ದ ಈ ಪ್ರಮುಖ ಚುನಾವಣೆಯಲ್ಲಿ ಕಾಂಗ್ರೆಸ್ & ಆರ್‌ಜೆಡಿ ಎಡವಿದ್ದು ಎಲ್ಲಿ?

ಬಿಜೆಪಿ ಪಕ್ಕಾ ಅಲರ್ಟ್ ಆಗಿತ್ತು!
ಜೆಡಿಯು ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಬಿಜೆಪಿ ನಾಯಕರು ಬಿಹಾರ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಹಠದಲ್ಲಿ ಹಲವು ವರ್ಷಗಳಿಂದಲೇ ಪ್ಲಾನ್ ಮಾಡುತ್ತಿದ್ದರು. ಅದರಲ್ಲೂ ಕೇಂದ್ರ ಸರ್ಕಾರ ಬಿಹಾರಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡುತ್ತಾ, ಬಿಹಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಲ ತುಂಬಿತ್ತು. ಇದನ್ನು ಕೂಡ ಚುನಾವಣೆಯಲ್ಲಿ ಪ್ರಮುಖ ಅಸ್ತ್ರ, ಪ್ರಚಾರದ ಭಾಗ ಮಾಡಿಕೊಂಡಿದ್ದರು ನಾಯಕರು.
ಕಾಂಗ್ರೆಸ್ & ಆರ್‌ಜೆಡಿ ಎಡವಿದ್ದು ಎಲ್ಲಿ?
ವಿರೋಧ ಪಕ್ಷಗಳ ಒಕ್ಕೂಟ ಈ ಬಾರಿಯಾದ್ರೂ ಎನ್‌ಡಿಎ ಒಕ್ಕೂಟವನ್ನ ಬಿಹಾರದಲ್ಲಿ ಸೋಲಿಸಲು ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರುವುದು ಚುನಾವಣೋತ್ತರ ಸಮೀಕ್ಷೆಗಳು, ಅಷ್ಟಕ್ಕೂ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾದರೆ ಅದು ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಭಾರಿ ದೊಡ್ಡ ಹಿನ್ನಡೆ ಉಂಟುಮಾಡಲಾಗಿದೆ.
ಇನ್ನು ಬಿಹಾರದಲ್ಲಿ ಆರ್‌ಜೆಡಿ ಪಕ್ಷದಲ್ಲಿ ಮೂಡಿದ್ದ ಗೊಂದಲ ಹಾಗೂ ಆಡಳಿತ ವಿರೋಧಿ ಅಲೆ ವಿಚಾರವನ್ನ ಸೂಕ್ತ ರೀತಿಯಲ್ಲಿ ಜನರ ಮುಂದಿಡಲು ಕಾಂಗ್ರೆಸ್ & ಆರ್‌ಜೆಡಿ ನಾಯಕರು ಸೋತರು ಎಂಬ ಚರ್ಚೆ ಕೂಡ ಶುರುವಾಗಿದೆ. ಇಷ್ಟೆಲ್ಲದರ ನಡುವೆ ರಿಯಲ್ ರಿಸಲ್ಟ್ ತಿಳಿಯಲು ಫಲಿತಾಂಶ ಹೊರ ಬೀಳುವ ತನಕ ಕಾದು ನೋಡಬೇಕಿದೆ. ಹಾಗೇ ಬಿಹಾರ ಫಲಿತಾಂಶ ಮತ್ತಷ್ಟು ಕುತೂಹಲ ಕೆರಳಿಸುವ ಮುನ್ಸೂಚನೆ ನೀಡಿದೆ.












Click it and Unblock the Notifications