ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: 'ಅಪ್ಪು ಮತ್ತು ಪಪ್ಪು (ರಾಹುಲ್ ಗಾಂಧಿ) ಅವರಿಂದ ಗೊಂದಲದ ವಾತಾವರಣ ಸೃಷ್ಟಿ'
Bihar Election Result 2025: ಬಿಹಾರ ವಿಧಾಸಭೆಯ 243 ಕ್ಷೇತ್ರಗಳಿಗೆ ಎರಡು ಚುನಾವಣೆ ನಡೆದಿದ್ದು, ಇಂದು (ನವೆಂಬರ್ 14) ಮತ ಎಣೆಕೆ ನಡೆಯುತ್ತಿದೆ. ಇದೀಗ ಉಪಮುಖ್ಯಮಂತ್ರಿ ಅವರು ನಮ್ಮದೆ ಸರ್ಕಾರ ಮತ್ತೆ ರಚನೆ ಆಗಲಿದೆ ಎನ್ನುವ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ರಾವುಲ್ ಗಾಂಧಿ ಅವರ ಕಾಲೆಳೆಯುವ ಹೇಳಿಕೆಯೊಂದನ್ನು ನೀಡಿ ಗಮನ ಸೆಳೆದಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನೆವಂಬರ್ 6ರಂದು ನಡೆದಿದ್ದು, ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಿತು. ಅಂದು ಸಂಜೆ ಸುದ್ದಿ ಸಂಸ್ಥೆಗಳು ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸಹ ಹೊರಬಿದ್ದಿದ್ದವು. ಬಹುತೇಕ ಎಕ್ಸಿಟ್ ಪೋಲ್‌ಗಳಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಇದೀಗ ಚುನಾವಣೆ ಆಯೋಗದಿಂದ ಅಧಿಕೃತ ಮತ ಎಣೆಕೆ ಕಾರ್ಯ ನಡೆಯುತ್ತಿದ್ದು, ಎಲ್ಲರ ಚಿತ್ತ ಇದರತ್ತ ನೆಟ್ಟಿದೆ.

ಬಿಹಾರದ ಲಖಿಸರಾಯ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿಂಗ್ ಅವರು ಮಾತನಾಡಿದ್ದು, "ನಾವು ನಿರೀಕ್ಷಿಸಿದ್ದೆಲ್ಲ ಈಗ ಫಲಿತಾಂಶಗಳಲ್ಲಿ ಕಾಣಿಸುತ್ತಿದೆ. ಬಿಹಾರದ ಜನರು ಮೋದಿ ಮತ್ತು ನಿತೀಶ್ ಕುಮಾರ್ ಮೇಲೆ ಇಟ್ಟಿರುವ ನಂಬಿಕೆ ದೇಶಕ್ಕೆ ಹೊಸ ದಿಕ್ಕನ್ನು ನೀಡಲಿದೆ. ಅಪ್ಪು ಮತ್ತು ಪಪ್ಪು ಯೋಚಿಸದೆ ಗೊಂದಲದ ವಾತಾವರಣವನ್ನು ಸೃಷ್ಟಿಸಿದರು. ಆದ್ದರಿಂದ ಯಾರೂ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಮ್ಮ ಫಲಿತಾಂಶಗಳು ಎಕ್ಸಿಟ್ ಪೋಲ್‌ಗಿಂತ ಉತ್ತಮ ಆಗಿರುತ್ತವೆ", ಎಂದು ಹೇಳಿದರು.
ಸಚಿವ ಅಶೋಕ್ ಚೌಧರಿ ಅವರು ಮತಾನಡಿದ್ದು, "ಎಕ್ಸಿಟ್ ಪೋಲ್‌ಗಳಲ್ಲಿ ತೋರಿಸಿದ್ದಕ್ಕಿಂತ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ನಾವು 2/3 ಬಹುಮತದೊಂದಿಗೆ ಗೆಲ್ಲುತ್ತೇವೆ" ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಇಂದಿನ ಚುನಾವಣೆ ಆಯೋಗದ ಫಲಿತಾಂಶದಲ್ಲಿ ಯಾರ ಭವಿಷ್ಯ ಏನಾಗಲಿದೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications