Get Updates
Get notified of breaking news, exclusive insights, and must-see stories!

ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಇಡಿ ಮುಂದೆ ಹಾಜರಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್

ಪಾಟ್ನಾ, ಏಪ್ರಿಲ್. 11: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಏಪ್ರಿಲ್ 11 ರಂದು ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಉದ್ಯೋಗಕ್ಕಾಗಿ ಭೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಪುತ್ರ 33 ವರ್ಷದ ತೇಜಸ್ವಿ ಯಾದವ್ ಅವರು ಬೆಳಗ್ಗೆ 10.45 ರ ಸುಮಾರಿಗೆ ಕಾರ್ಕೇಡ್‌ನಲ್ಲಿ ಸೆಂಟ್ರಲ್ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡಿದ್ದರು. ಕಳೆದ ತಿಂಗಳು ಈ ಪ್ರಕರಣದಲ್ಲಿ ಸಿಬಿಐ ಅವರನ್ನು ವಿಚಾರಣೆ ನಡೆಸಿತ್ತು. ಸಿಬಿಐ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಇಡಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದೆ. ಮಂಗಳವಾರ ತೇಜಸ್ವಿ ಯಾದವ್ ಹೇಳಿಕೆಯನ್ನು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

Bihar Deputy CM Tejashwi Yadav appears before ED In Land for jobs scam case

ಮಾರ್ಚ್ 25 ರಂದು ತೇಜಸ್ವಿ ಯಾದವ್ ಅವರ ಸಹೋದರಿ ಮಿಸಾ ಭಾರ್ತಿ ಅವರನ್ನು ಸಹ ಇಡಿ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿತ್ತು. ಲಾಲು ಪ್ರಸಾದ್ ಮತ್ತು ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಎರಡೂ ಕೇಂದ್ರ ತನಿಖಾ ಏಜೆನ್ಸಿಗಳು ಇತ್ತೀಚೆಗೆ ಈ ಉದ್ಯೋಗಕ್ಕಾಗಿ ಭೂ ಹಗರಣದ ಪ್ರಕರಣದಲ್ಲಿ ಕ್ರಮ ಕೈಗೊಂಡು, ಆರ್‌ಜೆಡಿ ಮುಖ್ಯಸ್ಥರ ಕುಟುಂಬದ ವಿರುದ್ಧ ದಾಳಿ ನಡೆಸಿದ್ದವು.

ಜಾರಿ ನಿರ್ದೇಶನಾಲಯದ ಶೋಧದ ನಂತರ, ಒಂದು ಕೋಟಿಯ "ಲೆಕ್ಕದಲ್ಲಿಲ್ಲದ ನಗದು" ವಶಪಡಿಸಿಕೊಂಡಿದೆ ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ಪತ್ತೆಹಚ್ಚಿದೆ ಎಂದು ಹೇಳಿದೆ. ಲಾಲು ಪ್ರಸಾದ್ ಅವರ ಕುಟುಂಬ ಮತ್ತು ಅವರ ಸಹಚರರ ಪರವಾಗಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಹೆಚ್ಚಿನ ಹೂಡಿಕೆಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿದೆ.

Bihar Deputy CM Tejashwi Yadav appears before ED In Land for jobs scam case

ಕೇಂದ್ರದ ಯುಪಿಎ-1 ಸರಕಾರದಲ್ಲಿ ಲಾಲು ಪ್ರಸಾದ್ ರೈಲ್ವೇ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಹಗರಣ ಇದಾಗಿದೆ. ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಡಿ-1088 ನಲ್ಲಿರುವ ಆಸ್ತಿಯು ಎಬಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲಾದ ನಾಲ್ಕು ಅಂತಸ್ತಿನ ಬಂಗಲೆ ತೇಜಸ್ವಿ ಯಾದವ್ ಅವರದ್ದು ಎಂದು ಇಡಿ ಹೇಳಿದೆ. ಈ ಕಂಪನಿಯನ್ನು "ಫಲಾನುಭವಿ ಸಂಸ್ಥೆ" ಎಂದು ಇಡಿ ಕರೆದಿದೆ.

ಈ ಕಂಪನಿಯು ತೇಜಸ್ವಿ ಯಾದವ್ ಮತ್ತು ಅವರ ಕುಟುಂಬದಿಂದ "ಮಾಲೀಕತ್ವ ಮತ್ತು ನಿಯಂತ್ರಣದಲ್ಲಿದೆ" ಎಂದು ಇಡಿ ಹೇಳಿದ್ದು, ಈ ಮನೆಯನ್ನು ಕೇವಲ 4 ಲಕ್ಷ ರೂಪಾಯಿ ಮೌಲ್ಯದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತೋರಿಸಲಾಗಿದೆ. ಆದರೆ, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 150 ಕೋಟಿ ರೂಪಾಯಿಯಾಗಿದೆ.

"ಈ ಆಸ್ತಿಯನ್ನು ಖರೀದಿಸುವಲ್ಲಿ ಅಪಾರ ಪ್ರಮಾಣದ ಅಕ್ರಮ ಹಣ ಹಾಕಲಾಗಿದೆ ಎಂದು ಶಂಕಿಸಲಾಗಿದೆ ಮತ್ತು ಮುಂಬೈ ಮೂಲದ ಕೆಲವು ಘಟಕಗಳು, ರತ್ನಗಳು ಮತ್ತು ಆಭರಣ ವಲಯದಲ್ಲಿ ವ್ಯವಹರಿಸುವಾಗ ಈ ನಿಟ್ಟಿನಲ್ಲಿ ಅಕ್ರಮವಾಗಿ ಗಳಿಸಿದ ಅಪರಾಧದ ಆದಾಯವನ್ನು ಬಳಸಿಕೊಳ್ಳಲಾಗಿದೆ" ಇಡಿ ಆರೋಪಿಸಿತ್ತು.

ಈ ಆಸ್ತಿಯನ್ನು ಕಾಗದದ ಮೇಲೆ ಎಬಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಕಚೇರಿ ಎಂದು ಘೋಷಿಸಲಾಗಿದೆ. ಇದನ್ನು ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಪ್ರಸಾದ್ ಯಾದವ್ ಅವರು ಪ್ರತ್ಯೇಕವಾಗಿ ವಸತಿ ಆವರಣವಾಗಿ ಬಳಸುತ್ತಿದ್ದಾರೆ. ತನಿಖೆ ಸಮಯದಲ್ಲಿ, ತೇಜಸ್ವಿ ಪ್ರಸಾದ್ ಯಾದವ್ ಅವರು ಈ ಮನೆಯಲ್ಲಿ ತಂಗಿರುವುದು ಕಂಡುಬಂದಿದೆ ಮತ್ತು ಈ ಮನೆಯನ್ನು ಅವರ ವಸತಿ ಆಸ್ತಿಯಾಗಿ ಬಳಸುತ್ತಿರುವುದು ಕಂಡುಬಂದಿದೆ" ಎಂದು ಇಡಿ ತಿಳಿಸಿದೆ.

2004-09ರ ಅವಧಿಯಲ್ಲಿ ಭಾರತೀಯ ರೈಲ್ವೇಯ ವಿವಿಧ ವಲಯಗಳಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ವಿವಿಧ ವ್ಯಕ್ತಿಗಳನ್ನು ನೇಮಿಸಲಾಗಿದ್ದು, ಅದಕ್ಕೆ ಬದಲಾಗಿ ಸಂಬಂಧಪಟ್ಟವರು ತಮ್ಮ ಜಮೀನನ್ನು ಆಗಿನ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಅವರ ಕುಟುಂಬದ ಸದಸ್ಯರಿಗೆ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನೇಮಕಾತಿಗೆ ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆ ನೀಡಿಲ್ಲ. ಆದರೆ ಪಾಟ್ನಾದ ಕೆಲವು ನಿವಾಸಿಗಳನ್ನು ಮುಂಬೈ, ಜಬಲ್‌ಪುರ, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದ ವಿವಿಧ ವಲಯ ರೈಲ್ವೆಗಳಲ್ಲಿ ಕೆಲಸಕ್ಕೆ ನೇಮಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಅಭ್ಯರ್ಥಿಗಳು ನೇರವಾಗಿ ಅಥವಾ ಅವರ ಹತ್ತಿರದ ಕುಟುಂಬದ ಸದಸ್ಯರ ಮೂಲಕ, ಲಾಲು ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+