Bihar Caste Census: ಬಿಹಾರ ಜಾತಿ ಗಣತಿ ವರದಿ ಮಂಡನೆ, ಬಡತನ, ಅಂಕಿ-ಸಂಖ್ಯೆ ತಿಳಿಯಿರಿ
ನವದೆಹಲಿ, ನವೆಂಬರ್ 07: ಬಿಹಾರ ರಾಜ್ಯ ವಿಧಾನಸಭೆಯಲ್ಲಿ ಜಾತಿ ಸಮೀಕ್ಷೆಯ ವಿವರವಾದ ವರದಿ ಮಂಡಿಸಲಾಗಿದೆ. ಈ ವರದಿ ಪ್ರಕಾರ ರಾಜ್ಯದಲ್ಲಿ ವಾಸಿಸುವ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಟುಂಬಗಳು ಬಡತನದಲ್ಲಿಯೇ ಬದುಕುತ್ತಿದ್ದಾರೆ. ಈ ಬಡಕುಟುಂಬಗಳು ಅತ್ಯಧಿಕ ಕಡಿಮೆ ಆದಾಯ ಗಳಿಸುತ್ತಿವೆ ಎಂಬುದು ಸೇರಿದಂತೆ ಹಲವು ಅಂಶಗಳು ಬಹಿರಂಗಗೊಂಡಿವೆ.
ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಸಮೀಕ್ಷೆ ವರದಿ ಮಂಡಿಸಿದರು. ಬಿಹಾರದಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಲ್ಲಿ ಬಡವರಿದ್ದು, ಅವರು ಮಾಸಿಕ 6,000 ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

ಮೇಲು ಜಾತಿಗಳಲ್ಲಿ ಸಹ ಗಣನೀಯ ಬಡತನ ಇರುವುದು ಕಂಡು ಬಂದಿದೆ. ಆದರೆ ಬಡತನದ ಪ್ರಮಾಣ ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಲ್ಲಿ ನಿರೀಕ್ಷಿತಲೂ ಹೆಚ್ಚಾಗಿರುವುದು ವರದಿಯಿಂದ ಗೊತ್ತಾಗಿದೆ.
2.97 ಕೋಟಿ ಕುಟುಂಬಗಳಿರುವ ಬಿಹಾರ
ಬಿಹಾರ ರಾಜ್ಯದಲ್ಲಿ ಸುಮಾರು 2.97 ಕೋಟಿ ಕುಟುಂಬಗಳು ನೆಲೆಸಿವೆ. ಇದರಲ್ಲಿ 94 ಲಕ್ಷಕ್ಕಿಂತಲೂ ಅಧಿಕ ಜನರು ಅಂದರೆ ಶೇಕಡಾ 34.13ರಷ್ಟು ಮಂದಿ ಬಡವರಿದ್ದಾರೆ. ಮತ್ತೊಂದು ಪ್ರತ್ಯೇಕ ಸಂಶೋಧನೆ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಿಹಾರಿ ನಿವಾಸಿಗಳು ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ ಮತ್ತು ಉನ್ನತ ಶಿಕ್ಷಣಕ್ಕಾಗಿ ಬಿಹಾರದಿಂದ ಹೊರಗಿದ್ದಾರೆ.
ಇತರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿರುವವರು ಸುಮಾರು 46 ಲಕ್ಷ ಬಿಹಾರಿ ಜನರಿದ್ದಾರೆ. ಇದರಲ್ಲಿ 2.17 ಲಕ್ಷ ಜನರು ವಿದೇಶಗಳಲ್ಲಿ ನೆಲೆ ಕಂಡು ಕೊಂಡವರಿದ್ದಾರೆ. ಬಿಹಾರ ಬಿಟ್ಟು ಅನ್ಯ ರಾಜ್ಯಗಳಲ್ಲಿ ಶಿಕ್ಷಣ (ವ್ಯಾಸಂಗ) ಪಡೆಯುತ್ತಿರುವವ ಸಂಖ್ಯೆ ಸರಿಸುಮಾರು 5.52 ಲಕ್ಷ, 27,000 ಮಂದಿ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅ.2 ರಂದು ವರದಿ ಅಂಶಗಳು ಬಿಡುಗಡೆ
ಬಿಹಾರ ರಾಜ್ಯದ ಈ ಜಾತಿ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶಗಳನ್ನು ಕಳೆದ ತಿಂಗಳು ಅಕ್ಟೋಬರ್ 2 ರಂದು ಬಿಡುಗಡೆ ಮಾಡಲಾಗಿತ್ತು. ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಈ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಾಗ್ದಾಳಿ ನಡೆಸಿದ್ದರು. ಅದರ ಪ್ರತಿಫಲವೆಂಬಂತೆ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು.
ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗದ (ಇಬಿಸಿ) ಜನರಿದ್ದಾರೆ ಎಂದು ಜಾತಿ ಗಣತಿಯ ಪ್ರಾಥಮಿಕ ಸಂಶೋಧನೆ ತಿಳಿಸಿವೆ. ಮೇಲ್ಜಾತಿಗಳ ಜನಸಂಖ್ಯೆ ಶೇಕಡಾ 10 ರಷ್ಟಿದೆ.
ಬಿಹಾರದ ಮೇಲುಜಾತಿಗಳಲ್ಲಿ ಬಡತನದ ಪ್ರಮಾಣವು ಶೇಕಡಾ 25 ಕ್ಕಿಂತ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅತ್ಯಂತ ಸುಸ್ಥಿತಿಯಲ್ಲಿರುವ ಹಿಂದೂ ಮೇಲ್ಜಾತಿಯವರು ಸಂಖ್ಯಾತ್ಮಕವಾಗಿ ಸಣ್ಣ ಸಣ್ಣ ಉದ್ಯೋಗ ಹೊಂದಿದ್ದಾರೆ. ಒಟ್ಟು ಶೇಕಡಾ 13.83 ಕುಟುಂಬಗಳು ಬಡತನದಲ್ಲಿವೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications