ಬಾಲಕಿಗೆ ಕಿರುಕುಳ ನೀಡಿದ ಬಿಜೆಪಿ ಶಾಸಕನ ಅಮಾನತು

Posted By:
Subscribe to Oneindia Kannada

ಪಾಟ್ನ, ಜುಲೈ 24: ದೆಹಲಿಯಲ್ಲಿ ಮಹಿಳೆಗೆ ಬೆದರಿಕೆ ಹಾಕಿ ಎಎಪಿ ಶಾಸಕರೊಬ್ಬರು ಬಂಧನಕ್ಕೊಳಗಾಗಿದ್ದರೆ, ಬಿಹಾರದಲ್ಲಿ ಬಿಜೆಪಿ ಶಾಸಕರೊಬ್ಬರು ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿ ಬಂಧನಕ್ಕೊಳಗಾಗಿದ್ದಾರೆ. ಕೂಡಲೇ ಪಕ್ಷದಿಂದ ಅವರನ್ನು ಉಚ್ಚಾಟಿಸಲಾಗಿದೆ.

ಬಿಹಾರದಲ್ಲಿ ಬಿಜೆಪಿ ಶಾಸಕ ಟುನ್ನಾಜಿ ಪಾಂಡೆ ಅವರನ್ನು ಭಾನುವಾರ ಬೆಳಗ್ಗೆ ಹಾಜಿಪುರ ರೈಲ್ವಿ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಹಾಜಿಪುರ ರೈಲ್ವೆ ನಿಲ್ದಾಣದ ಉಸ್ತುವಾರಿ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ತಿಳಿಸಿದ್ದಾರೆ. ಬಂಧನಕ್ಕೊಳಗಾದ ಶಾಸಕ ಪಾಂಡೆರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ.

ಬಂಧನವಾದ ಬಳಿಕ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಘೋಷಿಸಿದ್ದಾರೆ. [ಮಹಿಳೆಗೆ ಬೆದರಿಕೆ, ಎಎಪಿ ಶಾಸಕ ಅಮಾನುತುಲ್ಲಾ ಬಂಧನ]

Bihar BJP MLC suspended for misbehaving with woman in train

ಪೂರ್ವಾಂಚಲ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾನುವಾರ ನಸುಕಿನಲ್ಲಿ ಬಿಜೆಪಿ ಎಂಎಲ್ ಸಿ ಪಾಂಡೆ ಅವರು ತನ್ನ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದರು ಎಂದು ಬಾಲಕಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಳು. ಗೋರಖ್ ಪುರಕ್ಕೆ ತನ್ನ ತಂದೆ ಜತೆ ಬಾಲಕಿ ತೆರಳುತ್ತಿದ್ದರು. ಬಿಜೆಪಿ ಎಂಎಲ್ ಸಿ ಸರನ್ ನಿಂದ ದುರ್ಗಾಪುರಕ್ಕೆ ಹೋಗುತ್ತಿದ್ದರು.

ಈ ಹಿಂದೆ ಜೆಡಿಯು ಶಾಸಕ ಸರ್ಫರಾಜ್ ಆಲಂ ಅವರು ದೆಹಲಿಯ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhartiya Janata Party lawmaker Tunnaji Pandey, who was arrested on Sunday morning, has been suspended from the party, said Senior state BJP leader Sushil Kumar Modi. Mr. Pandey was arrested for misbehaving with a woman in train.
Please Wait while comments are loading...