Bihar Poll: ಬಿಹಾರ 2ನೇ ಹಂತದ ಮತದಾನ, ಕ್ಷೇತ್ರಗಳು-ಮುಖಾಮುಖಿ ಪಕ್ಷಗಳು, ಪ್ರಚಾರ ಭರಾಟೆ ವಿವರ

ಪಾಟ್ನಾ, ನವೆಂಬರ್ 06: ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗಿದೆ. ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದ ಮತದಾನ ನಡೆಯಲಿದೆ. ಇಂದು ಗುರುವಾರ ನವೆಂಬರ್ 06ರಂದು ಮೊದಲ ಹಂತದ ಮತದಾನ ನಡೆದಿದೆ. ಎರಡನೇ ಹಂತದ ಪ್ರಚಾರ ಕಾರ್ಯ ಚುರುಕುಗೊಂಡಿದ್ದು, ನವೆಂಬರ್ 11ರಂದು ನಡೆಯಲಿದೆ. ಅಖಾಡದಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ನಾಯಕರು ತಮ್ಮ ಅಭ್ಯರ್ಥಿಗಳ ಪರ ಹಿರಿಯ ನಾಯಕರು ಪ್ರಚಾರಕ್ಕೆ ಇಳಿದಿದ್ದು, ಮುಖಾ ಮುಖಿ ಆಗಿದ್ದಾರೆ. ಭರ್ಜರಿ ಪ್ರಚಾರ ನಡೆಯುತ್ತಿದೆ.

ಬಿಹಾರದ ಅರಾರಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಅಧಿಕಾರಾವಧಿಯಲ್ಲಿ ಬಿಹಾರದಲ್ಲಿ ಕಾನೂನುಬಾಹಿರ ಅಪರಾಧಗಳು ಹೆಚ್ಚಾಗಿದ್ದವು. ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗಿತ್ತು ಎಂದು ಅವರು ದೂರಿದರು. ರಾಜ್ಯಾದ್ಯಂತ ಒಟ್ಟು ಎಷ್ಟು ಎಕ್ಸ್‌ಪ್ರೆಸ್‌ವೇಗಳು, ಸೇತುವೆಗಳು, ಕ್ರೀಡಾ ಸಂಕೀರ್ಣಗಳು ಮತ್ತು ಪ್ರವಾಸಿ ಸರ್ಕ್ಯೂಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಎಂದು ಅವರು ಆರೋಪಿಸಿದರು.

Bihar Assembly Elections 60 13 Percentage Voting in First Phase Next Phase on Nov 11th

ಆರ್‌ಜೆಡಿಯ ಆಳ್ವಿಕೆಯ 1990 ರಿಂದ 2005 ರ ಅವಧಿಯಲ್ಲಿ ಬಿಹಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಇದು ಬಿಹಾರವನ್ನು ಸಂಪೂರ್ಣವಾಗಿ ಹಾಳುಮಾಡಿತು. ಅಭಿವೃದ್ಧಿಗೆ, ರಾಜ್ಯಕ್ಕಿದ್ದ ಹೆಸರಿಗೆ ಅಡಚಣೆ, ಕಪ್ಪುಚುಕ್ಕೆ ತಂಡೊಡ್ಡಿತು.

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು,ಹೆಚ್ಚಿನ ಮತದಾರರ ಮತದಾನವನ್ನು ಶ್ಲಾಘಿಸಿದರು. ಮತದಾನ ಎಲ್ಲ ಹಕ್ಕು. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಚಲಾಯಿಸಬೇಕು. ಎಲ್ಲರೂ ಮತದಾನ ಮಾಡಬೇಕು ಎಂದು ಅವರು ಕರೆ ಜನರನ್ನು ಒತ್ತಾಯಿಸಿದರು.

60.13 % ಮತದಾನ, ನ.11ಕ್ಕೆ ಎರಡನೇ ಹಂತದ ಮತದಾನ

ಇಂದು ಬಿಹಾರದಲ್ಲಿ 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಸಂಜೆ 5 ಗಂಟೆ ಹೊತ್ತಿಗೆ 60.13 % ಮತದಾನ ನಡೆದಿದೆ. ಸಂಜೆ 6 ಗಂಟೆಯ ಮತದಾನ ಪ್ರಮಾಣವನ್ನು ಕೇಂದ್ರ ಚುನಾವಣೆ ಆಯೋಗದ ಅಧಿಕಾರಿಗಳು ಅಪ್ಡೇಟ್ ಮಾಡಲಿದ್ದಾರೆ. ನವೆಂಬರ್ 11ರಂದು ಉಳಿದ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಅದಕ್ಕಾಗಿ ಭಾರತೀಯ ಜನತಾ ಪಕ್ಷ ಮತ್ತು ಜನತಾದಳ (ಯುನೈಟೆಡ್) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ರಾಷ್ಟ್ರೀಯ ಜನತಾದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ (ಅಥವಾ ಮಹಾ ಮೈತ್ರಿಕೂಟ) ಮತ್ತು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ನಡುವಿನ ತೀವ್ರ ಪೈಪೋಟಿ ಏರ್ಪಟ್ಟಿದೆ. ಪಕ್ಷದ ನಾಯಕರು, ಸ್ಟಾರ್ ಪ್ರಚಾರಕರು ಭರ್ಜರಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+