ನಿತೀಶ್ ಕುಮಾರ್‌ಗೆ ಆಘಾತ, ಸಿಎಂ ಸ್ಥಾನದಿಂದ ಗೇಟ್‌ಪಾಸ್ ಗ್ಯಾರಂಟಿ? Bihar Results
ಬಿಹಾರ ಚುನಾವಣೆ ಫಲಿತಾಂಶ ಭರ್ಜರಿಯಾಗಿ ಬಂದಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಬಿಹಾರದ ಮತದಾರರು ಜೈ ಎಂದಿದ್ದಾರೆ. ಹಾಗೇ ಬಿಹಾರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ರಚನೆ ಆಗಲಿದೆ, ಆ ಮೂಲಕ ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಲೆಕ್ಕಾಚಾರ ಇದ್ದಾಗಲೇ ದಿಢೀರ್ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಹಬ್ಬಿದೆ. ಅಂದಹಾಗೆ ನಿತೀಶ್ ಕುಮಾರ್‌ಗೆ ಆಘಾತ, ಸಿಎಂ ಸ್ಥಾನದಿಂದ ಗೇಟ್‌ಪಾಸ್ ಗ್ಯಾರಂಟಿ?
ಅಂದಹಾಗೆ ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆ ಬಹುದೊಡ್ಡ ತಿರುವು ಪಡೆದುಕೊಂಡಿದೆ. ಬಿಹಾರ ವಿಧಾನಸಭೆ ಚುನಾವಣೆ 2025 ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಈ ಚುನಾವಣೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಪಾಲಿಗೆ ದೊಡ್ಡ ಆಘಾತವನ್ನೇ ನೀಡಿದೆ. ಅಂದಹಾಗೆ ಈ ಚುನಾವಣೆಯಲ್ಲಿ ಗೆದ್ದು ಬೀಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಒಕ್ಕೂಟವು ಹೀನಾಯ ಸೋಲಿನ ಕಡೆಗೆ ಮುಖ ಮಾಡಿದೆ. ಮತ್ತೊಂದು ಕಡೆಯಲ್ಲಿ ಏನೆಲ್ಲಾ ಸರ್ಕಸ್ ಮಾಡಿ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನ ಮಾಡಿದರೂ ಅದು ಫಲ ನೀಡಲೇ ಇಲ್ಲ ವಿಪಕ್ಷಗಳಿಗೆ. ಆದರೆ ಇನ್ನೊಂದು ಕಡೆ ಎನ್‌ಡಿಎ ಒಕ್ಕೂಟ ಗೆದ್ದು ಬೀಗಿದ್ದರೂ, ನಿತೀಶ್ ಕುಮಾರ್ ಅವರದ್ಧೇ ಹೊಸ ತಲೆನೋವಾಗುವ ಸಾಧ್ಯತೆ ಇದೆ!

ಸಿಎಂ ಸ್ಥಾನದಿಂದ ಗೇಟ್‌ಪಾಸ್ ಗ್ಯಾರಂಟಿ?
ಹೌದು, ನಿತೀಶ್ ಕುಮಾರ್ ಬಿಹಾರ ಸಿಎಂ ಆಗಿ ಸತತವಾಗಿ ಅಧಿಕಾರದಲ್ಲಿ ಇದ್ದಾರೆ. ಹೀಗಿದ್ದಾಗ ಪದೇ ಪದೇ ಕಿರಿಕ್ ಕೂಡ ನಡೆಯುತ್ತಲೇ ಇದೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ನಡುವೆ ಪದೇ ಪದೇ ಕಿರಿಕ್ ಆಗುತ್ತಲೇ ಇದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಹೀಗಿದ್ದಾಗ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ಸುಮಾರು 90 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಜಯದ ಹೊಸ್ತಿಲಲ್ಲಿ ಇದೆ.
80 ಸ್ಥಾನಗಳಲ್ಲಿ ಜೆಡಿಯು ಹವಾ...
ಆದರೆ ಜೆಡಿಯು 80 ಸ್ಥಾನಗಳಲ್ಲಿ ಗೆಲ್ಲಲು ಮುಂದೆ ನುಗ್ಗಿದ್ದು, ಹೀಗೆ ಪರಿಸ್ಥಿತಿ ಇದ್ದರೂ, ಬಿಜೆಪಿ ಪಾಲಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಕಿರಿಕ್ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಹಾಗೇ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ಅವರನ್ನು ಕೆಳಗೆ ಇಳಿಸುವ ಪ್ರಯತ್ನ ಆಗುತ್ತಾ? ಎಂಬ ಚರ್ಚೆ ಕೂಡ ಜೋರಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ಸರ್ಕಾರ ರಚನೆ ಮಾಡೋದಕ್ಕೆ ಎನ್‌ಡಿಎ ಮಿತ್ರ ಪಕ್ಷಗಳು ಸಜ್ಜಾಗಿವೆ.












Click it and Unblock the Notifications