Tirupati Tirumala: ತಿರುಮಲಕ್ಕೆ ತೆರಳುವ ಶ್ರೀವಾರಿ ಭಕ್ತರಿಗೆ ಬಿಗ್ ರಿಲೀಫ್: ದಲ್ಲಾಳಿಗಳ ವಂಚನೆಗೆ ಕಡಿವಾಣ
ತಿರುಪತಿ ತಿಮ್ಮಪ್ಪ ನಿತ್ಯ ಸಾವಿರಾರು ಭಕ್ತರನ್ನು ಸೆಳೆಯುವ ಶ್ರೀಮಂತ ದೇವರು. ಬೇಡಿದ ವರವನ್ನು ನೀಡುವ ಏಳು ಬೆಟ್ಟಗಳ ಒಡೆಯನಿಗೆ ನಿತ್ಯ ಸಾವಿರಾರು ಭಕ್ತರು ಗಂಟೆಗಟ್ಟಲೆ ಕಾದು ನಿಂತು ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಇದರಿಂದ ಶ್ರೀವಾರಿಯನ್ನು ಕಾಣುವುದು ಸುಲಭವಲ್ಲ. ಇದೇ ಒಂದು ಕಾರಣದಿಂದ ಮದ್ಯವರ್ತಿಗಳು ಭಕ್ತರಿಗೆ ವಂಚಿಸುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಕಡಿವಾಣ ಹಾಕಲು ಟಿಟಿಡಿ ನಿರ್ಧರಿಸಿದೆ.
ಹೌದು.. ತಿರುಪತಿಗೆ ಭೇಟಿ ನೀಡುವವರು ದಲ್ಲಾಳಿಗಳಿಂದ ಮೋಸ ಹೋಗುವ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಈ ವಿಷಯಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಗಂಭೀರವಾಗಿ ಪರಿಗಣಿಸಿದೆ. ತಿರುಮಲದಲ್ಲಿ ದಲ್ಲಾಳಿಗಳ ಮೇಲೆ ನಿಗಾ ಇಡಲು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ತಿರುಮಲ ಶ್ರೀವಾರಿಯ ಭಕ್ತರನ್ನು ವಂಚಿಸುತ್ತಿರುವ ದಲ್ಲಾಳಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾಲಕಾಲಕ್ಕೆ ಕಾನೂನು ಕ್ರಮ ಜರುಗಿಸುವಂತೆ ಟಿಟಿಡಿ ಇಒ ಜೆ.ಶ್ಯಾಮಲಾ ರಾವ್ ಅವರು ಜಿಲ್ಲಾ ಎಸ್ಪಿಗೆ ಸೂಚನೆ ನೀಡಿದ್ದಾರೆ. ತಿರುಪತಿ ಟಿಟಿಡಿ ಆಡಳಿತ ಭವನದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್, ಟಿಟಿಡಿ ಕಣ್ಗಾವಲು ಮತ್ತು ಭದ್ರತಾ ವಿಭಾಗದ ಅಧಿಕಾರಿಗಳೊಂದಿಗೆ ಇಒ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಒ ತಿರುಮಲ ಶ್ರೀಗಳ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಬೇಕಾಗುವ ವಸತಿ, ದರ್ಶನ, ಆರ್ಜಿತ ಸೇವಾ ಟಿಕೆಟ್ ವಿಚಾರದಲ್ಲಿ ಭಕ್ತರನ್ನು ವಂಚಿಸುತ್ತಿರುವ ಹಲವು ದಲ್ಲಾಳಿಗಳನ್ನು ನಿರ್ಲಕ್ಷಿಸಬಾರದು. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಲು ಸೈಬರ್ ಕ್ರೈಮ್ ತಂಡವನ್ನು ಸ್ಥಾಪಿಸುವಂತೆ ಇಒ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಪೊಲೀಸ್ ಇಲಾಖೆ ತಿರುಮಲದಲ್ಲಿ ದಲ್ಲಾಳಿಗಳಿಗೆ ಸಂಬಂಧಿಸಿದ ಪ್ರಕರಣಗಳ ಹಂತಗಳನ್ನು ಆನ್‌ಲೈನ್ ಮೂಲಕ, ದಾಖಲಾತಿಗಳ ಮೂಲಕ ಇತ್ಯಾದಿಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರಿಸಿತು. ಕಳ್ಳತನ ಪ್ರಕರಣಗಳು, ಮದ್ಯಪಾನ, ನಕಲಿ ವೆಬ್‌ಸೈಟ್‌ಗಳ ಬಗ್ಗೆ ಈ ಸಭೆಯಲ್ಲಿ ಪೊಲೀಸರು ವಿವರಿಸಿದರು.

ಇದಾದ ಬಳಿಕ ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ದಲ್ಲಾಳಿಗಳಿಗೆ ಇನ್ನೊಂದು ವಾರದೊಳಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಇಒ ತಿಳಿಸಿದರು. ಅಲ್ಲದೆ ಇಂತಹ ಪ್ರಕರಣಗಳ ತ್ವರಿತ ಪರಿಹಾರಕ್ಕಾಗಿ ಟಿಟಿಡಿ ವಿಜಿಲೆನ್ಸ್ ಮತ್ತು ಪೊಲೀಸ್ ಇಲಾಖೆಗಳು ಆಗಾಗ್ಗೆ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.











Click it and Unblock the Notifications