ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್
ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರವು ಶುಭಸುದ್ದಿ ನೀಡುತ್ತಲೇ ಇದೆ. ಹಾಗೆಯೇ ಇದೀಗ ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಉನ್ನತ ಮಟ್ಟದ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ನೀಡುವ ಸಲುವಾಗಿ 2024-25ನೇ ಸಾಲಿನ ಪ್ರಧಾನ ಮಂತ್ರಿ ಇಂಟರ್ನ್ ಶಿಪ್ ಯೋಜನೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈ ಯೋಜನೆಯಡಿ ಒಂದು ಕೋಟಿ ಯುವಕ/ಯುವತಿಯರಿಗೆ ಇಂಟರ್ನ್ ಶಿಪ್ ಮೂಲಕ ಕೌಶಲ್ಯವನ್ನು ವೃದ್ಧಿಸಲು ಅವಕಾಶ ಕಲ್ಪಿಸಲಾಗಿದೆ. ಅಸಕ್ತಿ ಇರುವ ಅಭ್ಯರ್ಥಿಗಳು www.pmintership.mca.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಏಪ್ರಿಲ್ 15ರ ಒಳಗಾಗಿ ಅರ್ಹತೆ ಆಧಾರದ ಮೇಲೆ ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ಆಸಕ್ತಿ ಇರುವ ಯುವಕ/ಯುವತಿಯರ ವಯಸ್ಸು 21 ರಿಂದ 24 ಇರಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, B.A, B.Sc, BBA, B.com, BCA, B.Pharmacy ಇತ್ಯಾದಿ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು.
ಅರ್ಹತೆಗಳ ವಿವರ
1. ಕುಟುಂಬದ ವಾರ್ಷಿಕ ಆಧಾಯವು 2023-24ಕ್ಕೆ 8ಲಕ್ಷ ಮೀತಿಗೆ ಒಳಪಟ್ಟಿರಬೇಕು.
2. ಕುಂಟುಂಬದ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಲ್ಲದೇ ಸರ್ಕಾರಿ ಸ್ವಾಯಿತ್ಯ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು.
3. ಇಂಟರ್ಶಿಪ್ ತರಬೇತಿಯು 12 ತಿಂಗಳಿಗೆ ಅವಧಿ ಇರುತ್ತದೆ.
4. ತರಬೇತಿ ಸರಿಯಾಗಿ ಹಾಜರಾದ ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ ಮಾಸಿಕ 5,000 ರೂಪಾಯಿ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುವುದು.
5. ಇಂಟರ್ಶಿಪ್ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು.
6. ಇಂಟರ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ 6,000 ರೂಪಾಯಿ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ನೋಂದಾಯಿಸಿಕೊಂಡು ಇಂಟರ್ನ್‌ಶಿಪ್ ಪ್ರಯೋಜನ ಪಡೆಯಲು ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಿತಾಂಶ ಯಾವಾಗ?: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1ರಂದು ಪ್ರಾರಂಭವಾಗಿದ್ದು, ಮಾರ್ಚ್ 20ವರೆಗೆ ನಡೆದಿತ್ತು. ಇನ್ನು ಇದೀಗ ಫಲಿತಾಂಶ ಯಾವಾಗ ಎನ್ನುವ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಹಾಗಾದ್ರೆ ಪಲಿತಾಂಶ ವೀಕ್ಷಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಪ್ರಕಾರ, ಈ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿಲ್ಲ. ಮತ್ಯಾವಾಗ ಪ್ರಕಟ ಮಾಡಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ ಗಮನಿಸಿ.
ಇದೀಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಮೌಲ್ಯಮಾಪನ ಮುಗಿದ ಬಳಿಕ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ 1ರಂದು ಪ್ರಾರಂಭವಾಗಿ ಮಾರ್ಚ್ 20ವರೆಗೆ ನಡೆದಿತ್ತು. ಎಲ್ಲಾ ಪರೀಕ್ಷಾ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಪರೀಕ್ಷೆಗಳು ನಡೆದಿದ್ದವು.
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆಯ ನಿಖರ ದಿನಾಂಕ ಇನ್ನೂ ಅಂತಿಮ ಆಗಿಲ್ಲ. ಪ್ರಸ್ತುತ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವ ಕಾರಣದಿಂದ ಫಲಿತಾಂಶ ಬರುವುದು ವಿಳಂಬವಾಗಬಹುದು. ಕಳೆದ ವರ್ಷ ಏಪ್ರಿಲ್ 10ರಂದು ಫಲಿತಾಂಶ ಘೋಷಣೆ ಮಾಡಲಾಗಿತ್ತು. ಈ ವರ್ಷವೂ ಇದೇ ರೀತಿ ಆಗಬಹುದು. ಆದ್ದರಿಂದ ಮುಂದಿನ ವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications