ಗುಜರಾತ್: ಸಿಎಂ ಆಗಿ ಭೂಪೇಂದ್ರ ಪಟೇಲ್, ಸಚಿವರಾಗಿ 16 ಶಾಸಕರು ಪ್ರಮಾಣವಚನ ಸ್ವೀಕಾರ
ಅಹಮದಾಬಾದ್ ಡಿಸೆಂಬರ್ 12: ಗುಜರಾತ್‌ನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಿದರು. ಭೂಪೇಂದ್ರ ಪಟೇಲ್ ಸತತ ಎರಡನೇ ಬಾರಿಗೆ ರಾಜ್ಯದ ಸಿಎಂ ಆದರು. ಇದೇ ವೇದಿಕೆಯಲ್ಲಿ ಇತರ 16 ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರಾದ ಪ್ರಫುಲ್ಲ ಪನ್ಸೇರಿಯಾ, ಭಿಖುಸಿಂಗ್ ಪರ್ಮಾರ್, ಕುನ್ವರ್ಜಿ ಹಲ್ಪಾಟಿ, ಕುನ್ವರ್ಜಿಭಾಯಿ ಮೋಹನ್‌ಭಾಯ್ ಬವಾಲಿಯಾ, ಡಾ ಕುಬೇರ್ ದಿಂಡೋರ್, ಬಾನುಬೆನ್ ಬಬಾರಿಯಾ, ಹರ್ಷ ಸಾಂಘವಿ, ಜಗದೀಶ್ ವಿಶ್ವಕರ್ಮ, ಪರ್ಷೋತ್ತಂಬಾಯಿ ಓಧವ್ಜಿಭಾಯಿ ಸೋಲಂಕಿ, ಬಚುಭಾಯಿ ಖಬಾದ್ ಮತ್ತು ಮುಖೇಶ್ಭಾಯ್ ಜಿನಾಭಾಯ್ ಪಟೇಲ್ ಸೇರಿದಂತೆ ಒಟ್ಟು ಬಿಜೆಪಿಯ 16 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಈ ಸಮಾರಂಭದಲ್ಲಿ ಭೂಪೇಂದ್ರ ಪಟೇಲ್ ಕುಟುಂಬಸ್ಥರು ಭಾಗಿಯಾಗಿದ್ದರು. ಜೊತೆಗೆ ಬಿಜೆಪಿ ಹಿರಿಯ ನಾಯಕರು, ಗಣ್ಯರು ಪಾಲ್ಗೊಂಡು ಶುಭಕೋರಿದರು.

1.ನರೇಶ್ ಪಟೇಲ್- ಗಾಂದೇವಿ
2.ಬಚುಭಾಯಿ ಖಬಾದ್ ದೇವಗಢ್- ಬರಿಯಾ
3.ಪರಶೋತ್ತಮ್ ಸೋಲಂಕಿ- ಭಾವನಗರ (ಗ್ರಾಮೀಣ)
4.ಹರ್ಷ ಸಂಘವಿ- ಮಜೂರ
5.ಜಗದೀಶ್ ವಿಶ್ವಕರ್ಮ- ನಿಕೋಲ್
6.ಋಷಿಕೇಶ್ ಪಟೇಲ್- ವಿಸ್ನಗರ
7.ರಾಘವಜಿ ಪಟೇಲ್- ಜಾಮ್‌ನಗರ (ಗ್ರಾಮೀಣ)

8.ಬಲವಂತ್ ಸಿಂಗ್ ರಜಪೂತ್- ಸಿಧ್ಪುರ್
9.ಮುಖೇಶಭಾಯಿ ಝಿನಾಭಾಯಿ ಪಟೇಲ್- ಓಲ್ಪಾದ್
10.ಕುವರ್ಜಿಭಾಯಿ ನರ್ಶಿಭಾಯಿ ಹಲ್ಪತಿ- ಮಾಂಡವಿ (ST)
11.ಕನುಭಾಯಿ ದೇಸಾಯಿ- ಪರಡಿ
12.ಕುಂವಾಜಿಭಾಯ್ ಮೋಹನ್ ಭಾಯಿ -ಬವಲಿಯಾ ಜಸ್ದನ್
13.ಡಾ ಕುಬೇರ್ ದಿಂಡೋರ್- ಸಂತ್ರಂಪುರ (ST)

14.ಭಾನುಬೆನ್ ಬಬಾರಿಯಾ- ರಾಜ್‌ಕೋಟ್ (ಗ್ರಾಮೀಣ) (SC)
15.ಮುಲುಭಾಯ್ ಬೇರಾ- ಖಂಬಾಲಿಯಾ
16.ಭಿಕುಭಾಯಿ ಚತುರ್ಸಿಂಹ ಪರಮಾರ್- ಮೋದಸಾ
ಬಿಜೆಪಿ ತನ್ನ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ (16) ಮತ್ತು ಆಮ್ ಆದ್ಮಿ ಪಕ್ಷವನ್ನು (ಐದು) ಸೋಲಿಸಿತು. ಸಿಎಂ ಭೂಪೇಂದ್ರ ಪಟೇಲ್ ಘಟ್ಲೋಡಿಯಾದಲ್ಲಿ 1.92 ಲಕ್ಷ ಮತಗಳಿಂದ ಗೆದ್ದಿದ್ದಾರೆ.
ಮುಖ್ಯಮಂತ್ರಿ ಪಟೇಲರ ಹೊಸ ಸಂಪುಟಕ್ಕೆ ಬೇರೆ ಯಾರು ಸೇರಬಹುದು?
ಮುಖ್ಯಮಂತ್ರಿ ಪಟೇಲ್ ರ 2.0 ಕ್ಯಾಬಿನೆಟ್ ವಿವಿಧ ಜಾತಿ ಮತ್ತು ಜಿಲ್ಲೆಗಳ ಶಾಸಕರ ಮಿಶ್ರಣವಾಗಿದೆ ಎಂದು ಮೂಲಗಳು ತಿಳಿಸಿದ್ದು, ತನಗೆ ಮತ ಹಾಕಿದ ಸಮುದಾಯಗಳನ್ನು ಸಂತೋಷವಾಗಿಡಲು ಬಿಜೆಪಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿದು ಬಂದಿದೆ. ಇದು 25-28 ಸಚಿವರನ್ನು ಹೊಂದಿರುತ್ತದೆ.

ಅಲ್ಪೇಶ್ ಠಾಕೋರ್ ಅವರಂತಹ ಹೊಸ ಮುಖಗಳನ್ನು ನಂತರ ಸೇರಿಸಿಕೊಳ್ಳಬಹುದು ಎಂದು ಪಕ್ಷದ ಪದಾಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ. ಠಾಕೋರ್ ಗಾಂಧಿನಗರದ (ದಕ್ಷಿಣ) ಒಬಿಸಿ ನಾಯಕರಾಗಿದ್ದು, ಅವರು 2019 ರಲ್ಲಿ ಬಿಜೆಪಿಗೆ ಸೇರುವ ಮುನ್ನ ರಾಧನ್‌ಪುರದ ಕಾಂಗ್ರೆಸ್ ಶಾಸಕರಾಗಿದ್ದರು. ಶಂಕರ್ ಚೌಧರಿ (ಆರೋಗ್ಯ), ಪೂರ್ಣೇಶ್ ಮೋದಿ (ರಸ್ತೆ ಮತ್ತು ಸಾರಿಗೆ) ಮತ್ತು ಜಿತು ವಘಾನಿ (ಶಿಕ್ಷಣ) ರಂತಹ ಮಾಜಿ ಮಂತ್ರಿಗಳು ನಂತರ ಸಂಪುಟ ಸೇರ್ಪಡೆಗೊಳ್ಳಬಹುದು ಎನ್ನಲಾಗುತ್ತಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್, 'ನಾನು ಅತ್ಯಂತ ಕಿರಿಯ ಶಾಸಕ. ನಾನು ಪಕ್ಷಕ್ಕಾಗಿ ಮಾತ್ರ ಕೆಲಸ ಮಾಡುತ್ತೇನೆ. ಯಾರನ್ನು ಸಂಪುಟದಲ್ಲಿ ಇರಿಸಬೇಕು ಎಂಬುದನ್ನು ಬಿಜೆಪಿ ನಿರ್ಧರಿಸುತ್ತದೆ. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ' ಎಂದು ಹೇಳಿದರು.












Click it and Unblock the Notifications