Get Updates
Get notified of breaking news, exclusive insights, and must-see stories!

13 ಗಂಟೆಗಳ ಕಾರ್ಯಾಚರಣೆ ನಂತರ ನಂದಿದ ಭೋಪಾಲ್‌ನ ಸಾತ್ಪುರ ಭವನದ ಆರು ಅಂತಸ್ತಿನ ಕಟ್ಟಡದ ಬೆಂಕಿ!

ಭೋಪಾಲ್‌, ಜೂನ್. 13: ಭೋಪಾಲ್‌ನ ಸಾತ್ಪುರ ಭವನದಲ್ಲಿ ಸಂಭವಿಸಿದ ಭಾರೀ ಬೆಂಕಿಯನ್ನು 13 ಗಂಟೆಗಳ ಅಗ್ನಿಶಾಮಕ ಕಾರ್ಯಾಚರಣೆಯ ನಂತರ ಕೊನೆಗೂ ನಂದಿಸಲಾಗಿದೆ. ಸೋಮವಾರ ಸಂಜೆಯಿಂದಲೇ ಹೊತ್ತಿ ಉರಿಯುತ್ತಿದ್ದ ಬೆಂಕಿ ಮಂಗಳವಾರ ಬೆಳಗಿನ ಜಾವದ ಹೊತ್ತಿಗೆ ನಂದಿಸಲಾಗಿದೆ. ಬೆಂಕಿ ಹರಡುವ ಮುನ್ನ ಅಧಿಕಾರಿಗಳು ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

"ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸಿಐಎಸ್‌ಎಫ್ ಮತ್ತು ಸೇನೆ ಸೇರಿದಂತೆ ಎಲ್ಲಾ ಏಜೆನ್ಸಿಗಳು ಬೆಂಕಿಯನ್ನು ನಂದಿಸಲು ಒಗ್ಗೂಡಿ ಅದನ್ನು ನಿಯಂತ್ರಿಸಿದ್ದಾರೆ" ಎಂದು ಭೋಪಾಲ್ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಗಿರಿಜನ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡದ ಮೂರನೇ ಮಹಡಿಯಲ್ಲಿ ಸೋಮವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ಘಟನೆಗೆ ಎಸಿಯಲ್ಲಿನ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ನಂಬಲಾಗಿದೆ. ಆದರೆ ನಿಖರವಾದ ಕಾರಣವನ್ನು ನಿರ್ಧರಿಸಲು ವಿಚಾರಣೆ ನಡೆಸಲಾಗುವುದು. ಅದೃಷ್ಟವಶಾತ್ ಎಲ್ಲಾ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಹಾನಿ ನಡೆದಿಲ್ಲ. ಇದೊಂದು ದುರದೃಷ್ಟಕರ ಘಟನೆ ಎಂದು ಕರೆದಿರುವ ಮಧ್ಯಪ್ರದೇಶದ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ, ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Bhopal’s Satpura Bhawan fire doused after 13 hours of firefighting

"ಇದೊಂದು ದುರದೃಷ್ಟಕರ ಘಟನೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಆಡಳಿತ ನಿರತವಾಗಿದೆ. ಸಿಎಂ ಕೂಡ ಪ್ರಧಾನಿಯವರೊಂದಿಗೆ ಮಾತನಾಡಿದ್ದಾರೆ. ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು" ಎಂದು ಮಧ್ಯಪ್ರದೇಶದ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ ತಿಳಿಸಿದ್ದಾರೆ.

ಭೋಪಾಲ್‌ನ ಸಾತ್ಪುರ ಭವನದ ಆರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಅದು ತ್ವರಿತವಾಗಿ ಆರನೇ ಮಹಡಿಗೆ ವ್ಯಾಪಿಸಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳನ್ನು ತಕ್ಷಣವೇ ಸ್ಥಳಕ್ಕೆ ರವಾನಿಸಲಾಯಿತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸಂಪರ್ಕಿಸಿ ವಾಯುಪಡೆಯಿಂದ ನೆರವು ಕೋರಿದರು. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯನ್ನು ತಿಳಿಸಿ ಅಗತ್ಯ ನೆರವು ಕೋರಿದ್ದರು.

ರಕ್ಷಣಾ ಸಚಿವರ ಸೂಚನೆಗಳನ್ನು ಅನುಸರಿಸಿ, ಅಗ್ನಿಶಾಮಕ ಕಾರ್ಯಾಚರಣೆಗಾಗಿ ಐಎಎಫ್ ನ ಎಎನ್ 32 ಮತ್ತು ಎಂಐ-15 ವಿಮಾನಗಳನ್ನು ಭೋಪಾಲ್‌ಗೆ ಕಳುಹಿಸಲಾಯಿತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಕರೆ ಮಾಡಿ ಬೆಂಕಿ ಅವಘಡದ ಬಗ್ಗೆ ಮಾಹಿತಿ ನೀಡಿದ್ದರು.

ಅವ್ಯವಹಾರದ ಆರೋಪ ಹೊರಿಸಿದ ಕಾಂಗ್ರೆಸ್

ಪ್ರತಿಪಕ್ಷ ಕಾಂಗ್ರೆಸ್ ನಾಯಕರು "ಚುನಾವಣಾ ವರ್ಷದಲ್ಲಿ" ಬೆಂಕಿ ಅವಘಡದ ಸಮಯವನ್ನು ಪ್ರಶ್ನಿಸಿದ್ದಾರೆ. ಇದು ಹಗರಣಗಳ ಪುರಾವೆಗಳನ್ನು ನಾಶಮಾಡುವ ಸಂಚು ಎಂದು ಆರೋಪಿಸಿದ್ದಾರೆ. "ಮಧ್ಯಪ್ರದೇಶದಲ್ಲಿ ಸರ್ಕಾರಿ ಕಡತಗಳು ಉರಿಯಲಾರಂಭಿಸಿದವು. ಚುನಾವಣೆಗೂ ಮುನ್ನ ಶುರುವಾದ ಈ ಬೆಂಕಿ ಬಿಜೆಪಿ ಸರಕಾರಕ್ಕೆ ರಣಕಹಳೆ ಮೊಳಗಿದೆ ಎನ್ನುವುದನ್ನು ತೋರಿಸುತ್ತದೆ. ಭ್ರಷ್ಟಾಚಾರದ ಕಡತಗಳು ಉರಿಯಲಾರಂಭಿಸಿವೆ" ಎಂದು ಪಕ್ಷವು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+