ಟಾಯ್ಲೆಟ್ ನಲ್ಲಿ ಕೊಚ್ಚಿ ಹೋದರೂ ಬದುಕುಳಿದ ನವಜಾತ ಶಿಶು!

Posted By:
Subscribe to Oneindia Kannada

ಭೋಪಾಲ್, ಆಗಸ್ಟ್ 19: ಶೌಚಕ್ಕೆಂದು ಹೋಗಿದ್ದ ತುಂಬು ಗರ್ಭಿಣಿಯೊಬ್ಬಳ ಗರ್ಭದಿಂದ ಜಾರಿದ ಮಗು, ಟಾಯ್ಲೆಟ್ ಬೇಸಿನ್ ಮೂಲಕ ಪೈಪ್ ನ ಮೂಲಕ ಹಾದು ಹೋಗಿ, ಸುಮಾರು 2 ಗಂಟೆಗಳ ನಂತರ ಅದನ್ನು ಹೊರತೆಗೆದಾಗಲೂ ಬದುಕುಳಿದ ಪವಾಡ ಸದೃಶ ಘಟನೆ ಇಲ್ಲಿನ ಶೆವೊಪುರ ಜಿಲ್ಲೆಯ ಬಂಗ್ರೋಡ್ ಎಂಬ ಹಳ್ಳಿಯಲ್ಲಿ ನಡೆದಿದೆ.

28 ವರ್ಷದ ಪಪಿತಾ ಗುರ್ಜಾರ್ ಎಂಬ ತುಂಬು ಗರ್ಭಿಣಿಯು ಶುಕ್ರವಾರ ಶೌಚಕ್ಕೆ ತೆರಳಿದ್ದರು. ಆದರೆ, ಆಗಲೇ ಆಕೆಯ ಗರ್ಭದಿಂದ ಮಗು ಜಾರಿ ಹೋಗಿ ಟಾಯ್ಲೆಟ್ ಬೇಸಿನ್ ಮೂಲಕ ಪೈಪ್ ನೊಳಕ್ಕೆ ಹೊರಟೇ ಹೋಗಿದೆ. ಅಚ್ಚರಿಯೆಂದರೆ, ಇದು ಆಕೆಗೆ ಗೊತ್ತೇ ಆಗಿಲ್ಲ!

ಅಚ್ಚರಿ ಆದರೂ ನಿಜ.. ಇಲ್ಲಿ ನಾಲ್ಕು ತಿಂಗಳ ಮಗು ಮಾತನಾಡುತ್ತಿದೆ!

ಹೊಟ್ಟೆಯಿಂದ ಏನೋ ಜಾರಿದಂತೆ ಭಾಸವಾದರೂ, ಆಕೆಗೆ ಮಗು ಹೋಗಿದ್ದು ಗೊತ್ತೇ ಆಗಿಲ್ಲ. ಶೌಚ ಮುಗಿಸಿ ಬಂದ ಆಕೆಗೆ ಕಿಬ್ಬೊಟ್ಟೆಯಲ್ಲಿ ಭಾರೀ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಇದನ್ನು ತನ್ನ ಪತಿ ಹಾಗೂ ಅತ್ತೆಯ ಮನೆಯವರಿಗೆ ಹೇಳಿದ್ದಾರೆ.

ಹಾಗಾಗಿ, ಆಕೆಯ ಅತ್ತೆ ಆ ಮಹಿಳೆಯನ್ನು ಮಲಗಿಸಿ ಪರೀಕ್ಷಿಸಲಾಗಿ ಹೊಟ್ಟೆಯಲ್ಲಿ ಮಗು ಇಲ್ಲದಿರುವ ಬಗ್ಗೆ ಗುಮಾನಿ ಬಂದಿದೆ. ಆದರೂ, ಆಕೆಯನ್ನು ತಕ್ಷಣವೇ ಆಕೆ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ವಿಜಯ್ ಪುರ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ, ಆಕೆಯ ನೋವನ್ನು ಕಂಡ ವೈದ್ಯರು ಪ್ರಸವದ ಸಮಯ ಹತ್ತಿರ ಬಂದಿದ್ದಾಗಿ ಪರಿಗಣಿಸಿ, ತಕ್ಷಣವೇ ಆಕೆಗೆ ಆಪರೇಷನ್ ಮಾಡಿ ಮಗು ಹೊರತಗೆಯಲು ಆಕೆಯನ್ನು ಶಸ್ತ್ರ ಚಿಕಿತ್ಸಾ ಕೊಠಡಿಗೆ ಕೊಂಡೊಯ್ದಿದ್ದಾರೆ. ಆದರೆ, ಅಲ್ಲಿ ಅವರಿಗೆ ಅಚ್ಚರಿ ಕಾಣಿಸಿದೆ. ಆಪರೇಷನ್ ಗೂ ಮುನ್ನ ಹೊಟ್ಟೆಯೊಳಗಿನ ಸಮಸ್ಯೆ ಅರಿಯಲು ಸ್ಕಾನಿಂಗ್ ಮಾಡಿದಾಗ, ಗರ್ಭಚೀಲದಲ್ಲಿ ಮಗುವೇ ಇಲ್ಲವೆಂದು ಗೊತ್ತಾಗಿ ಹೌಹಾರಿದ್ದಾರೆ!

ಮುಂಬೈನ 'ಒಂದು ರುಪಾಯಿ ಕ್ಲಿನಿಕ್'ನಲ್ಲಿ ಹೀಗೊಂದು ಸುಖ ಪ್ರಸವ

ಮುಂದಾನಾಯ್ತು... ಎಂಬುದನ್ನು ಮುಂದೆ ಓದಿರಿ.

ವೈದ್ಯರ ಸ್ಪಷ್ಟನೆ

ವೈದ್ಯರ ಸ್ಪಷ್ಟನೆ

ಹೊಟ್ಟೆಯಲ್ಲಿ ಮಗು ಇಲ್ಲದಿರುವ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಗಾಬರಿಯಾದ ಮನೆಯ ಸದಸ್ಯರು, ಶೌಚಕ್ಕೆ ಹೋಗಿ ಬಂದ ನಂತರ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಆಗ, ವೈದ್ಯರು ಕೆಲವರಿಗೆ ಶೌಚಕ್ಕೆ ಹೋದಾಗಲೇ ಪ್ರಸವ ಆಗುತ್ತದೆಂದು ತಿಳಿಸಿ, ಶೌಚಾಲಯದ ಪೈಪುಗಳಲ್ಲಿ ಹುಡುಕಾಟ ನಡೆಸಲು ಸೂಚಿಸಿದ್ದಾರೆ.

ಕಡೆಗೂ ಸಿಕ್ಕಿತು ಮಗು

ಕಡೆಗೂ ಸಿಕ್ಕಿತು ಮಗು

ತಕ್ಷಣವೇ ಮನೆ ಕಡೆಗೆ ಹೋದ ಆ ಕುಟುಂಬದ ಸದಸ್ಯರು, ಟಾಯ್ಲೆಟ್ ನೊಳಗೆ ಹೋಗಿ, ಬೇಸನ್ ಹಾಗೂ ಪೈಪ್ ಒಳಗೆ ಹುಡುಕಾಡಿದರೂ ಮಗು ಸಿಕ್ಕಿಲ್ಲ. ಆದರೂ, ಛಲ ಬಿಡದ ಅವರು, ಹಳ್ಳಿಯಲ್ಲಿನ ಕೂಲಿ ಕಾರ್ಮಿಕರನ್ನು ಕರೆಯಿಸಿ, ಮನೆಯ ಹಿಂದುಗಡೆಯಿಂದ ಶೌಚದ ಪೈಪುಗಳನ್ನು ನಿಧಾನವಾಗಿ ಒಡೆಸಿ ನೋಡಿದಾಗ, ಟಾಯ್ಲೆಟ್ ಪೈಪ್ ನಲ್ಲಿ ಮಗು ಸಿಲುಕಿದ್ದು ಪತ್ತೆಯಾಗಿದೆ. ಅಲ್ಲದೆ, ಬದುಕಿರುವುದೂ ಖಾತ್ರಿಯಾಗಿದೆ.

ಬಂದು ಆ್ಯಂಬುಲೆನ್ಸ್

ಬಂದು ಆ್ಯಂಬುಲೆನ್ಸ್

ತಕ್ಷಣವೇ, ಆ ಮನೆಯವರು ಫೋನಿನ ಮೂಲಕ ವಿಜಯ್ ಪುರ ಆರೋಗ್ಯ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಪಂದಿಸಿದ ವೈದ್ಯರು ಆಸ್ಪತ್ರೆಯ ಆ್ಯಂಬುಲೆನ್ಸ್ ಅನ್ನು ಹಳ್ಳಿಗೆ ಕಳುಹಿಸಿದ್ದಾರೆ. ಇತ್ತ, ಪೈಪ್ ನಿಂದ ಮಗುವನ್ನು ಹೊರತೆಗೆದ ಕುಟುಂಬದ ಸದಸ್ಯರು, ಆ ಮಗುವನ್ನು ಸ್ವಚ್ಛಗೊಳಿಸುವಷ್ಟರಲ್ಲಿ ಆ್ಯಂಬುಲೆನ್ಸ್ ಬಂದಿದೆ.

ತಾಯಿ-ಮಗು ಆಸ್ಪತ್ರೆಯಲ್ಲಿ!

ತಾಯಿ-ಮಗು ಆಸ್ಪತ್ರೆಯಲ್ಲಿ!

ಆ್ಯಂಬುಲೆನ್ಸ್ ನಲ್ಲಿ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ತಕ್ಷಣವೇ ವೈದ್ಯರು ಮಗುವಿಗೆ ಯಾವುದೇ ಸೋಂಕು ಆಗದ ರೀತಿಯಲ್ಲಿ ಕೆಲವಾರು ಔಷಧಿಗಳನ್ನು ನೀಡಿ, ಅದನ್ನು ತಾಯಿಯ ಮಡಿಲಿಗೆ ಅರ್ಪಿಸಿದ್ದಾರೆ. ಇದೀಗ, ತಾಯಿ- ಮಗು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮೃತ್ಯವನ್ನು ಗೆದ್ದು ಬಂದ ಈ ಮಗು ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bizarre incident that took place in Madhya Pradesh, an infant girl who was delivered in a lavatory bowl of a toilet was rescued alive from the sewage tank after two hours.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ