Online Gaming Ad: ಬಾಲಿವುಡ್ ನಟನಿಗೆ ಭಿಕ್ಷೆ ಬೇಡಿ ಹಣ ನೀಡಲು ನಾಸಿಕ್ ವ್ಯಕ್ತಿ ಪ್ರತಿಭಟನೆ
ಮುಂಬೈ, ಜುಲೈ 24: ಬಾಲಿವುಡ್ ಸೆಲೆಬ್ರಿಟಿಗಳ ಕುರಿತು ಕೆಲವರು ತಮ್ಮ ನಿರಾಶೆ ವ್ಯಕ್ತಪಡಿಸಿದ್ದನ್ನು ನಾವು ನೋಡಿದ್ದೇವೆ. ಇಲ್ಲೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್‌ಗೆ ಬಿಕ್ಷೆ ಬೇಡಿ ಹಣ ಕೊಡುತ್ತೇನೆ ಎಂದು ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ ಅಲ್ಲದೇ ಧ್ವನಿ ವರ್ಧಕ ಮೂಲಕ ಘೋಷಣೆ ಮಾಡುತ್ತಾ ಸಂಚರಿಸಿದ ವಿಡಿಯೋ ವೈರಲ್ ಆಗಿದೆ.
ಮಹಾರಾಷ್ಟ್ರದಲ್ಲಿ ನಡೆದ ಇತ್ತೀಚಿನ ಘಟನೆಯು ಅತ್ಯಂತ ವಿಲಕ್ಷಣವಾದ ಪ್ರತಿಭಟನೆಗಳ ಪಟ್ಟಿಯಲ್ಲಿ ಈ ಪ್ರತಿಭಟನೆಯು ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ವ್ಯಕ್ತಿಯೊಬ್ಬರು ನಟ ಅಜಯ್ ದೇವಗನ್‌ಗಾಗಿ ಹಣ ಸಂಗ್ರಹಿಸಲು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ. ಕಾರಣ? ಏನೆಂದು ತಿಳಿಯಲು ಮುಂದೆ ಓದಿ.

ನಟ ಅಜಯ್ ದೇವಗನ್ ಅವರು ಹಲವಾರು ಚಿತ್ರಗಳನ್ನು ಸಾಕಷ್ಟು ಹಣ ಮಾಡಿದ್ದಾರೆ. ಅದು ಸಾಲದೆಂಬಂತೆ ಅನೇಕ ಬ್ರಾಂಡ್‌ಗಳ ರಾಯಭಾರಿ ಆಗಿಯೂ ನಟಿಸಿದ್ದಾರೆ. ಇದರೊಂದಿಗೆ ಅವರು ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನ ಜಾಹೀರಾತುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಅವರು ಯುವ ಪೀಳಿಗೆಗಳನ್ನು ಅಂತಹ ಗೇಮಿಂಗ್ ಆಡಲು ಪ್ರಚೋದಿಸುತ್ತಿದ್ದಾರೆ. ಇದು ನಾಸಿಕ್ ಪ್ರತಿಭಟಿಸುತ್ತಿರುವ ವ್ಯಕ್ತಿಯ ಅಸಮಾಧಾನಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ನಾಸಿಕ್‌ನ ಜನನಿಬಿಡ ರಸ್ತೆಯ ಮಧ್ಯದಲ್ಲಿ ಅಪರಿಚಿತ ವ್ಯಕ್ತಿ ತನ್ನ ಸ್ಕೂಟರ್ ಅನ್ನು ನಿಲ್ಲಿಸುತ್ತಿರುವುದನ್ನು ನೋಡುತ್ತಿರುವ ವೀಡಿಯೊ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಪ್ರತಿಭಟಿಸುತ್ತಿರುವ ವ್ಯಕ್ತಿ ಅಜಯ್ ದೇವಗನ್ ಭಾವಚಿತ್ರವಿರುವ ನಾಮ ಫಲಕವನ್ನು ಹಿಡಿದು "ಅಜಯ್ ದೇವಗನ್ ಕೆ ಲಿಯೇ ಭಿಕ್ ಮಾಂಗೋ ಆಂದೋಲನ್!"ಎಂದು ಧ್ವನಿ ವರ್ಧಕ ಮೂಲಕ ಘೋಷಿಸುವುದು ಕಾಣುತ್ತದೆ.
Video | This unidentified person from Nashik is so pissed by actor Ajay Devgan promoting online gaming ads, that he's collecting 'alms' for the actor. pic.twitter.com/iX361tEq1j
— MUMBAI NEWS (@Mumbaikhabar9) July 23, 2023
"ನಾನು ಆನ್‌ಲೈನ್ ಗೇಮಿಂಗ್ ಮತ್ತು ಅದರ ಜಾಹೀರಾತುಗಳ ವಿರುದ್ಧ ಪ್ರತಿಭಟಿಸುತ್ತಿದ್ದೇನೆ. ಈ ಖ್ಯಾತನಾಮರು ದೇವರ ದಯೆಯಿಂದ ಉತ್ತಮ ಸ್ಥಿತಿಯಲ್ಲಿದ್ದಾರೆ. ಹೀಗಿದ್ದರೂ ಅವರು ಅವರು ಯುವಜನರ ಮೇಲೆ ಕೆಟ್ಟ ಪ್ರಭಾವ ಬೀರುವ ಆನ್‌ಲೈನ್ ಗೇಮಿಂಗ್ ಅನ್ನು ಪ್ರಚಾರ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನಟರ ಈ ನಡೆಯಿಂದ ನಾನು ಈ 'ಭೀಕ್ ಮಾಂಗೋ ಆಂದೋಲನ' ನಡೆಸಲು ನಿರ್ಧರಿಸಿದೆ. ಗೇಮಿಂಗ್ ಜಾಹೀರಾತು ಅವರು ಬಿಡಬೇಕು, ಅದರಿಂದ ಅವರಿಗೆ ಸಿಗುತ್ತಿದ್ದ ಹಣವನ್ನು ನಾನು ಬೀದಿಗಳಲ್ಲಿ ಭಿಕ್ಷೆ ಬೇಡಿ ಸಂಗ್ರಹಿ ಅವರಿಗೆ ನೀಡುತ್ತೇನೆ ಎಂದು ಮನವಿ ಮಾಡಿದ್ದಾರೆ.
ನಿಮಗೆ ಹೆಚ್ಚಿನ ಹಣ ಬೇಕಾದರೆ, ನಾನು ಇನ್ನೂ ಹೆಚ್ಚು ಹಣವನ್ನು ಭಿಕ್ಷೆ ಭೇಡಿ ತಂಡು ಕೊಡುತ್ತೇನೆ. ಆದರೆ ತಾವು ದಯಮಾಡಿ ಇಂತಹ ಜಾಹೀರಾತುಗಳನ್ನು ಪ್ರೋತ್ಸಾಹಿಸಬೇಡಿ ಎಂದು ಅವರು ಮಹಾತ್ಮ ಗಾಂಧಿ ಸ್ಮರಿಸಿ ಅವರಿಗೆ ಮನವಿ ಮಾಡಿದರು.
ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡಿದ್ದು, ಕೆಲವೇ ಕ್ಷಣಗಳಲ್ಲಿ ನೆಟಿಜನ್‌ಗಳ ಗಮನ ಸೆಳೆದಿದೆ.
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ












Click it and Unblock the Notifications