ಫೆ. 10 ರಂದು ಹುಲಿಗೆಮ್ಮ ದೇಗುಲದಲ್ಲಿ 'ಭಾರತ ಹುಣ್ಣಿಮೆ'

Posted By:
Subscribe to Oneindia Kannada

ಕೊಪ್ಪಳ, ಫೆ. 06: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 10 ರಂದು ಭಾರತ ಹುಣ್ಣಿಮೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಭಾರತ ಹುಣ್ಣಿಮೆಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಗಂಗಾದೇವಿಯವರಿಗೆ ಪೂಜೆ, ರಾತ್ರಿ 9-30 ಗಮಟೆಗೆ ಕ್ಷೇತ್ರಪಾಲ ಅಜ್ಜಪ್ಪ ದೇವರಿಗೆ ಗುಗ್ಗರಿ ಮುಟಿಗಿ ಪೂಜೆ, ರಾತ್ರಿ 9:45 ಗಂಟೆಗೆ ಮಾತಂಗಿ ದೇವಿಯವರಿಗೆ ಕ್ಷೀರ ಸಮರ್ಪಣೆ, ರಾತ್ರಿ 10 ಗಂಟೆಗೆ ಪೂಜಾರರರಿಗೆ ಗುಗ್ಗರಿ ಮುಟಿಗಿ ಉಡಿ ತುಂಬುವುದು ನಂತರ ಭಕ್ತಾದಿಗಳಿಗೆ ಗುಗ್ಗರಿ ಮುಟಿಗಿ ಪ್ರಸಾದ ವಿತರಣೆ ಜರುಗಲಿದೆ.

Bharatha Hunnime in Hulagi of Koppal district

ಭಕ್ತಾದಿಗಳು ಭಾರತ ಹುಣ್ಣಿಮೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A special religious programme 'Bharata Hunnime' is organised in Koppala Taluk's Hulagi temple on Februvary 10, 2017. Temple authority has requested the all the devotees are requested to attend the programme.
Please Wait while comments are loading...