ನನ್ನ ಪುಟ್ಟ ಮಗು ಅಪ್ಪ ಎಲ್ಲಿ ಅಂತ ಕೇಳದೇ ಫೋಟೋ ಮುಂದೆ ನಿಂತು ಕೈ ಮುಗಿತ್ತೆ- ಭರತ್ ಭೂಷಣ್ ಪತ್ನಿ ಸುಜಾತಾ
ಬೆಂಗಳೂರು ಏಪ್ರಿಲ್ 30: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 26 ಜನ ಭಾರತೀಯರಲ್ಲಿ ಬೆಂಗಳೂರಿನ ಮತ್ತೀಕೆರೆಯ ಭರತ್ ಭೂಷಣ್ ಕೂಡ ಒಬ್ಬರು. ಭರತ್ ಭೂಷಣ್ ಅವರಿಗೆ ಒಂದು ಪುಟ್ಟ ಮಗುವಿದೆ. ಆ ಮಗು ಹಾಗೂ ಪತ್ನಿ ಸುಜಾತಾ ಮುಂದೆ ಕ್ರೂರಿಗಳು ಭರತ್ ಭೂಷಣ್ ಅವರ ತಲೆಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಸುಜಾತಾ ಅವರಿಗೆ ಹೊರಬರಲು ಆಗುತ್ತಿಲ್ಲ. ಅಂದಿನ ಆ ದೃಶ್ಯ ಕಂಡು ಮಗು ರಾತ್ರಿಯಲ್ಲಿ ನಡುಗುತ್ತಿದೆ ಎಂದು ಸುಜಾತಾ ಭಾವುಕ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಹೌದು ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯಿಸಿದ ಸುಜಾತ ಪಹಲ್ಗಾಮ್‌ನಲ್ಲಿ ಪತಿ ಭರತ್ ಭೂಷಣ್ ಮೇಲೆ ಉಗ್ರರು ಗುಂಡು ಹಾರಿಸುವ ಆ ಕೊನೆ ಕ್ಷಣ ಹೇಗಿತ್ತು ಎಂದು ವಿವರಿಸಿದ್ದಾರೆ. ಸುಜಾತಾ ಹಾಗೂ ಭರತ್ ಅವರು ಮದುವೆ ಆಗಿ ನಾಲ್ಕೈದು ವರ್ಷ ಆಗಿದೆ. ಇವರಿಬ್ಬರಿಗೆ ಪುಟ್ಟ ಮಗನಿದ್ದಾನೆ. ಸುಜಾತಾ ಹಾಗೂ ಭರತ್ ಇಬ್ಬರೂ ಕೆಲಸದಲ್ಲಿ ಇರುವುದರಿಂದ ಬೇಸಿಗೆ ರಜೆಯಲ್ಲಿ ಬಿಡುವು ಮಾಡಿಕೊಂಡು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು.

ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುವ ಹಿಂದಿನ ದಿನ ಅವರು ಪಹಲ್ಗಾಮ್‌ಗೆ ತೆರಳಿದ್ದರು. ಪ್ರವಾಸಕ್ಕೆ ಹೋಗುವಾಗಲೆಲ್ಲಾ ಅವರು ಹಸಿರು ತಾಣಗಳು, ಪ್ರಶಾಂತವಾಗಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿರುವುದೇ ಹೆಚ್ಚು. ಈ ಹಿಂದೆ ಕೂರ್ಗ್, ಅಂಡಮಾನ್ ನಿಕೋಬಾರ್ ಹೋಗಿದ್ದರು. ಕಳೆದ ವರ್ಷ ಮನೆಯಲ್ಲಿ ಪೋಷಕರು ಕಾಶ್ಮೀರಕ್ಕೆ ಹೋಗಿದ್ದರು. ಕುಟುಂಬಸ್ಥರು ಕಾಶ್ಮೀರಕ್ಕೆ ಹೋದಾಗ ತುಂಬಾ ಬಿಸಿಲು ಇತ್ತು. ಹೀಗಾಗಿ ಸುಜಾತ ಹಾಗೂ ಭರತ್ ಏಪ್ರಿಲ್ ತಿಂಗಳಲ್ಲಿ ಹೋಗಲು ಪ್ಲ್ಯಾನ್ ಮಾಡಿದ್ದರು.
ಏಪ್ರಿಲ್ 18ರಂದು ಭರತ್ ಭೂಷಣ್, ಪತ್ನಿ ಸುಜಾತಾ ಹಾಗೂ ಮಗ ಅವಿಶ್ ಮೂರು ಜನ ಕಾಶ್ಮೀರ ಹೋದರು. ಏಪ್ರಿಲ್ 18ರಿಂದ ಏಪ್ರಿಲ್ 21ರವರೆಗೆ ಈ ದಂಪತಿ ತುಂಬಾ ಅದ್ಭುತವಾದ ಕ್ಷಣಗಳನ್ನು ಆನಂದಿಸಿದ್ದಾರೆ. ಏಪ್ರಿಲ್ 18ರಿಂದ ಶುರುವಾದ ಪ್ರಯಾಣ ಏಪ್ರಿಲ್ 23ಕ್ಕೆ ಮುಗಿಸಿ ಏಪ್ರಿಲ್ 24ಕ್ಕೆ ಭರತ್ ಭೂಷಣ್ ದಂಪತಿ ವಾಪಸ್ ಆಗಬೇಕಿತ್ತು. ಆದರೆ ಭರತ್ ಭೂಷಣ್ ಬೆಂಗಳೂರಿಗೆ ವಾಪಾಸ್ಸಾಗಿದ್ದು ಹೆಣವಾಗಿ.
ಭಾರತದ ಮಿನಿ ಸ್ವಿಡ್ಜರ್‌ಲ್ಯಾಂಡ್ ಅಂತಲೇ ಜನಪ್ರಿಯವಾಗಿರುವ ಪಹಲ್ಗಾಮ್‌ಗೆ ಭರತ್ ಭೂಷಣ್, ಪತ್ನಿ ಸುಜಾತಾ ಹಾಗೂ ಮಗ ಅವಿಶ್ ಏಪ್ರಿಲ್ 22ಕ್ಕೆ ತೆರಳಿರುತ್ತಾರೆ. ಆದರೆ ಭರತ್ ಭೂಷಣ್ ಅವರ ಪ್ರಯಾಣ ಇದೇ ಸ್ಥಳದಲ್ಲಿ ಕೊನೆಯಾಗುತ್ತೆ ಅನ್ನೋದು ಯಾರಿಗೂ ಕೂಡ ತಿಳಿದಿರಲಿಲ್ಲ. ಪಹಲ್ಗಾಮ್‌ನಲ್ಲಿ ಆದ ಆ ಕರಾಳ ಸಂದರ್ಭವನ್ನು ಪತ್ನಿ ಸುಜಾತಾ ಹಂಚಿಕೊಂಡಿದ್ದಾರೆ. ಕೊನೆಯದಾಗಿ ಭರತ್ ಭೂಷನ್ ಹೇಳಿದ ಮಾತನ್ನು ಸುಜಾತಾ ನೆನಪಿಸಿಕೊಂಡಿದ್ದಾರೆ.

ಭರತ್ ಭೂಷಣ್ ಸುಜಾತಾ ಪಹಲ್ಗಾಮ್‌ನಲ್ಲಿ ಕಾಶ್ಮೀರಿ ಉಡುಪು ಧರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೆಂಟ್ ಬಳಿ ಹೋಗಿರುತ್ತಾರೆ. ಆಗ ಏಕಾಏಕಿ ಬಂದ ಉಗ್ರರು ಅವರ ಹಿಂಬದಿಯಲ್ಲಿ ಇದ್ದ ಇಬ್ಬರು ಪುರುಷರನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಆಗ ಭರತ್ ಸುಜಾತಾ ಅವರಿಗೆ 'ಏನೂ ಆಗಲ್ಲ ಧೈರ್ಯದಿಂದ ಇರು' ಎಂದು ಹೇಳುತ್ತಲೇ ಇರುತ್ತಾರೆ.
ಆಗ ಉಗ್ರನೊಬ್ಬ ಇವರ ಬಳಿ ಬಂದಾಗ ಸುಜಾತಾ ಅವಿಶ್‌ನನ್ನು ಕೈಯಲ್ಲಿ ಹಿಡಿದುಕೊಂಡು ತಲೆ ಬಾಗಿ ಕುಳಿತಿರುತ್ತಾರೆ. ಹತ್ತಿರ ಬಂದ ಉಗ್ರನಿಗೆ 'ನನಗೆ ಪುಟ್ಟ ಮಗು ಇದೆ ನನ್ನ ಬಿಟ್ಟುಬಿಡಿ' ಎಂದು ಭರತ್ ಕೇಳುತ್ತಾರೆ. ಆದರೆ ರಕ್ತ ಕುಡಿಯೋ ಕ್ರೂರಿಗಳಿಗೆ ಅಮಾಯಕರ ಮಾತು ಎಲ್ಲಿಂದ ಕೇಳಬೇಕು. ಹತ್ತಿರ ಬಂದ ಉಗ್ರ ಭರತ್ ಭೂಷಣ್ ಹಣೆಗೆ ಗುಂಡು ಹಾರಿಸಿದ್ದಾನೆ. ಅಷ್ಟೇ ಮುಗಿತು, ಭರತ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಈ ದೃಶ್ಯವನ್ನು ಕಣ್ಣಾರೆ ಕಂಡ ಪತ್ನಿ ಸುಜಾತಾ ಹಾಗೂ ಮಗ ಅವಿಶ್ ಗಾಬರಿಗೊಂಡು ನಡುಗಿದ್ದಾರೆ. ಇಲ್ಲಿದ್ದರೆ ಸಾವು ಖಚಿತ ಎಂದು ಭಾವಿಸಿದ ಸುಜಾತಾ ಮಗುವನ್ನು ಎತ್ತುಕೊಂಡು ಭರತ್ ಅವರ ಬಳಿ ಇದ್ದ ಬ್ಯಾಗ್ ಹಾಗೂ ಪರ್ಸ್ ಅನ್ನು ತೆಗೆದುಕೊಂಡು ಅಲ್ಲಿಂದ ಹೊರಟಿದ್ದಾರೆ. ಕೂಡಲೆ ಮನೆಯವರಿಗೆ ವಿಷಯವನ್ನು ತಿಳಿಸಿದ್ದಾರೆ. ಮನೆಯವರು ಬಂದು ಸುಜಾತಾ ಅವರನ್ನು ಭೇಟಿ ಮಾಡುವವರೆಗೂ ಸುಜಾತಾ ಪ್ರಾಣದ ಬಗ್ಗೆ ಆಸೆಯನ್ನು ಬಿಟ್ಟುಬಿಟ್ಟಿದ್ದರು. ಸುಜಾತಾ ತುಂಬಾ ಹೆದರಿದ್ದರು. ಆದರೆ ಮಗನ ಮುಖ ನೋಡಿ ಅಲ್ಲಿಂದ ಹೊರಟು ಕಷ್ಟಪಟ್ಟು ಮನೆ ಸೇರಿದ್ದಾರೆ.
ಮತ್ತೊಂದು ವಿಚಾರ ಅಂದರೆ ಭರತ್ ಅವರಿಗೆ ಮಗನೊಂದಿಗೆ ಪ್ರವಾಸ ಹೋಗಬೇಕು ಅನ್ನೋ ಆಸೆ ಇತ್ತು. ಅಲ್ಲದೆ ತಂದೆಯನ್ನೂ ಕರೆದುಕೊಂಡು ಹೋಗಬೇಕು ಅನ್ನೋ ಆಸೆಯಿಂದ ಟಿಕೆಟ್ ಕೂಡ ಬುಕ್ ಮಾಡಿದ್ದರಂತೆ. ಇದೆಲ್ಲಾ ಘಟನೆಯನ್ನು ವಿಚಾರಿಸುವಾಗ ಸುಜಾತಾ ಕೈಗಳು ನಡಗಿವೆ. ಉಗ್ರರ ಅಟ್ಟಹಾಸಕ್ಕೆ ಭರತ್ ತಲೆ ಸೀಳಿಕೊಂಡು ನೀರಿನಂತೆ ರಕ್ತ ಚಿಮ್ಮಿತ್ತು. ಮೈಮೇಲೆ ರಕ್ತ ನೋಡಿ ಇನ್ನಷ್ಟು ಹೆದರಿ ಹೋಗಿದ್ದರು ಸುಜಾತಾ. ಜೀವನ ಪೂರ್ತಿ ಜೊತೆಯಾಗಿರುವ ಭರವಸೆ ನೀಡಿದ ಪತಿಯ ರಕ್ತ ನೀರಿನಂತೆ ಪತ್ನಿ ಮೇಲೆ ಬೀಳುವುದನ್ನು ಯಾರಾದರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯನಾ?
ಸುಜಾತಾ ಅವರಿಗೆ ಈಗಲೂ ಅವರ ಕಿವಿಯಲ್ಲಿ ಕೇಳಿಸುತ್ತಿರುವುದು ಭರತ್ ಅವರು ಹೇಳಿದ 'ಹೆದರಬೇಡ. ಏನೂ ಆಗಲ್ಲ, ಧೈರ್ಯವಾಗಿರು' ಅನ್ನೋ ಮಾತು ಮಾತ್ರ. ಕಣ್ಣಿಗೆ ಕಾಣಿಸುತ್ತಿರುವುದು ಹಣೆಗೆ ಗುಂಡು ತಗುಲಿದ ದೃಶ್ಯ. ಇಂತಹ ಸಾವು ಯಾವ ಶತ್ರುಗೂ ಕೂಡ ಬರಬಾರದು. ಇಂತಹ ಸಂದರ್ಭ ಯಾವ ಹೆಣ್ಣಿಗೂ ಎದುರಾಗಬಾರದು. ಪುಟ್ಟ ಮಗು ಪತ್ನಿ ಕಣ್ಣೆದುರು ಗಂಡನನ್ನು ಕೊಲ್ಲುವುದು ನಿಜಕ್ಕೂ ಹೇಡಿತನದ ಕೃತ್ಯ. ಭಾರತೀಯ ಸೇನೆ ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಭಾರತೀಯರನ್ನು ಕೊಂದ ಉಗ್ರ ಪಿಚಿಚಾಗಳ ಉಸಿರು ನಿಲ್ಲಿಸುವವರೆಗೂ ಭಾರತೀಯರ ಸಿಟ್ಟು ಕೋಪ ಕಡಿಮೆಯಾಗುವುದಿಲ್ಲ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications