ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಸೇರಿ ನಾಲ್ವರಿಗೆ ಭಾರತರತ್ನ ಪ್ರಶಸ್ತಿ?

By Mahesh
|
Google Oneindia Kannada News

ನವದೆಹಲಿ, ಆ.10: ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ 'ಭಾರತ ರತ್ನ' ಪದಕಗಳನ್ನು ತಯಾರಿಸಿಕೊಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನರೇಂದ್ರ ಮೋದಿ ಸರ್ಕಾರ ಕೇಳಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ,ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಾಲ್ವರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಟಂಕಶಾಲೆಯಲ್ಲಿ ತಯಾರಾಗುವ ಭಾರತ ರತ್ನ ಪದಕ ಯಾರ ಕೊರಳಿಗೆ ಏರಲಿದೆ ಎಂಬುದರ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಬಿಜೆಪಿಯ ಅತ್ಯುನ್ನತ ನಾಯಕ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ದೇಶದ ಪರಮೋಚ್ಚ ನಾಗರಿಕ ಪುರಸ್ಕಾರ ನೀಡಿ ಗೌರವಿಸುವುದು ಮೋದಿ ಅವರ ಕನಸಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್, ಶಿಕ್ಷಕ ತಜ್ಞ ಮದನ್ ಮೋಹನ್ ಮಾಳವೀಯ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರಿಗೂ ಭಾರತ ರತ್ನ ಪ್ರಶಸ್ತಿ ಮರಣೋತ್ತರವಾಗಿ ಲಭಿಸುವ ಸೂಚನೆ ಸಿಕ್ಕಿದೆ.

The Narendra Modi government is likely to confer the Bharat Ratna, the country's highest civilian honour, on more than one person on this Independence Day.The government reportedly ordered five Bharat Ratna medals from the Reserve Bank of India mint.

ಕಳೆದ ವಾರಾಂಭದಲ್ಲಿ ಕೇಂದ್ರ ಗೃಹ ಸಚಿವಾಲಯ ರಿಸರ್ವ್‌ ಬ್ಯಾಂಕ್‌ ಎದುರು ಐದು ಭಾರತ ರತ್ನ ಪದಕಗಳಿಗೆ ಬೇಡಿಕೆ ಇಟ್ಟಿದೆ ಎಂದು ರಾಷ್ಟ್ರೀಯ ದಿನಪತ್ರಿಕೆ ವರದಿ ಮಾಡಿದೆ. ಇದರಿಂದಾಗಿ ಈ ವರ್ಷ ಒಬ್ಬರಿಗಿಂತ ಹೆಚ್ಚು ಮಂದಿಗೆ ಭಾರತ ರತ್ನ ಸಿಗಬಹುದು, ಈ ಕುರಿತು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಅಥವಾ ನಂತರ ಘೋಷಣೆ ಹೊರಬೀಳಬಹುದು ಎನ್ನಲಾಗಿದೆ.

ಹಿಂದೂ ಪುರಾಣಕತೆಗಳನ್ನು ಜನಪ್ರಿಯಗೊಳಿಸಿದ ಗೀತಾ ಪ್ರಸ್‌ನ ಸಂಸ್ಥಾಪಕ ಹನುಮಾನ್‌ ಪ್ರಸಾದ್‌ ಪೊದ್ದಾರ್‌, ಪ್ರಸಿದ್ಧ ಕಲಾವಿದ ರಾಜಾ ರವಿ ವರ್ಮಾ, ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆಗಳಿವೆ.

1992ರಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮರಣೋತ್ತರವಾಗಿ ಭಾರತ್ ರತ್ನ ಪ್ರಶಸ್ತಿ ನೀಡಲು ಅಂದಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಅದರೆ, ನೇತಾಜಿ ಅವರ ಸಾವಿನ ನಿಗೂಢತೆ ಇನ್ನೂ ಬಯಲಾಗದ ಕಾರಣ ಮರಣೋತ್ತರ ಪ್ರಶಸ್ತಿ ಘೋಷಣೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ನೇತಾಜಿ ಕುಟುಂಬದವರು ಪ್ರಶಸ್ತಿ ಸ್ವೀಕರಿಸಲು ಸಿದ್ದವಿಲ್ಲ ಎಂಬ ಸಂದೇಶ ಕಳಿಸಿದರು.

ಯುಪಿಎ 2 ಸರ್ಕಾರ ತನ್ನ ಅವಧಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್ ಆರ್ ರಾವ್ ಅವರಿಗೆ ಭಾರರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸಚಿನ್ ಅವರ ಬದಲಿಗೆ ಧ್ಯಾನ್ ಚಂದ್ ಹೆಸರು ಮೊದಲಿಗೆ ಪರಿಗಣಿಸಲಾಗಿತ್ತು. ಅದರೆ, ಕೊನೆ ಗಳಿಗೆಯಲ್ಲಿ ಹೊಸ ವಿಭಾಗವನ್ನು ಸೃಷ್ಟಿಸಿ ಸಚಿನ್ ಹೆಸರು ಸೇರ್ಪಡೆ ಮಾಡಲಾಯಿತು ಎಂಬ ವಿವಾದವೂ ಇದೆ. ಈಗ ಎನ್ ಡಿಎ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಲು ಮುಂದಾಗಿರುವುದು ಚರ್ಚೆಗೆ ಕಾರಣವಾಗಿದ್ದು, ಇದು ರಾಜಕೀಯ ಉದ್ದೇಶಿತ ಎಂದು ವಿಪಕ್ಷಗಳು ಕೂಗಾಡಿವೆ.

English summary
The Narendra Modi government is likely to confer the Bharat Ratna, the country's highest civilian honour, on more than one person on this Independence Day.The government reportedly ordered five Bharat Ratna medals from the Reserve Bank of India mint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X