Operation Sindoor: ಭಾರತ ಮಾತೆಗೆ ಜಯವಾಗಲಿ... ಪಾಕಿಸ್ತಾನದ ಮೇಲೆ ದಾಳಿ ಮಾಡಿದ ನಂತರ ರಾಜನಾಥ್ ಉತ್ತರ!

ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಭಾರತೀಯ ಸೇನೆ ಗುಡುಗಿದೆ, ಹಾಗೇ ಭಾರತೀಯ ಸೇನೆ ಕೊಟ್ಟಿರುವ ಪೆಟ್ಟಿಗೆ ಪಾಕಿಸ್ತಾನ ಮಂಕಾಗಿ ಹೋಗಿದೆ. ಕಣಿವೆ ರಾಜ್ಯ ಕಾಶ್ಮೀರಕ್ಕೆ ನುಗ್ಗಿದ್ದ ಪಾಪಿ ಉಗ್ರರು ಮಾರಣಹೋಮ ನಡೆಸಿದ್ದರು. ಅಮಾಯಕ ಪ್ರವಾಸಿಗರ ಮೇಲೆ ದಾಳಿ ಮಾಡಿ, ಈ ರೀತಿ ರಕ್ತಪಾತ ನಡೆಸಿದ್ದರು ಪಾಪಿ ಉಗ್ರರು. ಇದಕ್ಕೆ ಇದೀಗ ರಿವೇಂಜ್ ತೆಗೆದುಕೊಂಡಿರುವ, ಆ ಮೂಲಕ ಸೂಕ್ತ ಉತ್ತರ ನೀಡಿರುವ ಭಾರತೀಯ ಸೇನೆ ತನ್ನ ಶಕ್ತಿ ತೋರಿಸಿದೆ. ಹೀಗಿದ್ದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿರುವುದು ಏನು ಗೊತ್ತೆ?

ಪಾಕಿಸ್ತಾನ ಉದ್ಧಾರ ಆಗುವ ಕೆಲಸಕ್ಕಿಂತ ಹಾಳು ಮಾಡುವ ಕೆಲಸವನ್ನೇ ಹೆಚ್ಚಿಸಿದೆ. ಪಾಕಿಸ್ತಾನ ಉಗ್ರರ ಕಾರ್ಖಾನೆ ಆಗಿ, ಪದೇ ಪದೇ ಅಲ್ಲಿಂದಲೇ ಉಗ್ರರು ನುಸುಳಿ ಬರ್ತಾ ಇದ್ದಾರೆ. ಈಗಲೂ ಪಾಕಿಸ್ತಾನದ ಮೂಲಕ ನುಗ್ಗಿ ಬಂದಿದ್ದ ಉಗ್ರರು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ದಾಳಿಯ ನಡೆಸಿ 26 ಜನರನ್ನ ಕೊಲೆ ಮಾಡಿದ್ದರು. ಏಪ್ರಿಲ್ 22ರ ಮಂಗಳವಾರ ಉಗ್ರರ ದಾಳಿಯಲ್ಲಿ 26 ಭಾರತೀಯರು ಬಲಿಯಾದ ಹಿನ್ನೆಲೆ ಭಾರತ ಸೇಡು ತೀರಿಸಿಕೊಳ್ಳಲು ಸಜ್ಜಾಗಿತ್ತು. ಆ ಸೇಡು ಇಂದು ಪೂರ್ಣಗೊಂಡಿದೆ. ಇದೇ ಸಮಯದಲ್ಲಿ ರಕ್ಷಣಾ ಸಚಿವರು ಕೂಡ ಮಹತ್ವದ ಹೇಳಿಕೆ ನೀಡಿದ್ದಾರೆ!

Bharat Mata ki Jai Rajnath Singh Commends Indian Army s Operation Sindoor Success

ಭಾರತ ಮಾತೆಗೆ ಜಯವಾಗಲಿ...

ಹೌದು, ಇದೀಗ ಭಾರತದ ಸೇನೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಂದ್ರೆ ಪಿಒಕೆ ಮೇಲೆ ದಾಳಿ ನಡೆಸಲಾಗಿದೆ. ಉಗ್ರರ ಫ್ಯಾಕ್ಟರಿಯಂತೆ ಆಗಿರುವ ಪಾಕಿಸ್ತಾನದ ಗಡಿ ಭಾಗದಲ್ಲಿ ಹೀಗೆ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ. ಪಾಪಿ ಪಾಕಿಸ್ತಾನ ಗಡಿಭಾಗದಲ್ಲಿ ಇರುವ ಉಗ್ರರ ಶಿಬಿರಗಳನ್ನ ಉಡಾಯಿಸಲಾಗಿದ್ದು, ಉಗ್ರರಿಗೆ ತಕ್ಕಪಾಠ ಕಲಿಸಿದ್ದಾರೆ ಭಾರತದ ಯೋಧರು. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 9 ಪ್ರದೇಶಗಳ ಮೇಲೆ ಈ ರೀತಿಯಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿ ಉಗ್ರರ ಬಿಡಾರಗಳನ್ನು ಉಡೀಸ್ ಮಾಡಿಬಿಟ್ಟಿದೆ ಭಾರತೀಯ ಸೇನೆ. ಹೀಗಿದ್ದಾಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಸಿಕ್ಕಿತು ತಕ್ಕ ಉತ್ತರ!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತು, ಮಹತ್ವದ ಪ್ರತಿಕ್ರಿಯೆ ನೀಡುತ್ತಾ 'ಭಾರತ ಮಾತೆಗೆ ಜಯವಾಗಲಿ...' ಎಂದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂಡಿಯನ್ ಆರ್ಮಿಯ ಕಾರ್ಯಾಚರಣೆ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಭಾರತ ಸರ್ಕಾರ ಹಲವು ಸುತ್ತಿನ ಸಭೆಗಳನ್ನ ನಡೆಸಿ ಪಾಪಿ ಪಾಕಿಸ್ತಾನದ ಉಗ್ರರ ವಿರುದ್ದ ಕ್ರಮಕ್ಕೆ ಸಂಪೂರ್ಣ ಸ್ವತಂತ್ರವನ್ನ ಸೇನೆಗೆ ನೀಡಿತ್ತು. ಭಾರತೀಯ ಸೇನೆ ಯಾವುದೇ ರೀತಿಯ ಕ್ರಮ ಕೈಗೊಳ್ಳಬಹುದು ಎನ್ನುವ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಭಾರತೀಯ ಸೇನೆ ಅದನ್ನ ಮಾಡಿ ತೋರಿಸಿದೆ.

ಒಟ್ನಲ್ಲಿ ಪಾಕಿಸ್ತಾನಕ್ಕೆ ಇದೀಗ ನೀಡಿರುವ ಏಟು ದೊಡ್ಡದಾಗಿದ್ದು, ಭಾರತೀಯ ಸೇನೆಯಿಂದ ಸಿಕ್ಕಿರುವ ಏಟಿಗೆ ಪಾಕಿಸ್ತಾನ ನಲುಗಿ ಹೋಗಿದೆ. ಅಲ್ಲದೆ ಯಾವುದೇ ಕ್ಷಣದಲ್ಲಿ ಪಾಕಿಸ್ತಾನದ ಕಡೆಯಿಂದ ಕೂಡ ದಾಳಿ ನಡೆಯುವ ಸಾಧ್ಯತೆ ಇದ್ದು, ಭಾರತೀಯ ಸೇನೆ ಅಲರ್ಟ್ ಆಗಿದೆ. ಅಲ್ಲದೆ ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+