ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ 100 ರೂ. ಬೆಳ್ಳಿ ನಾಣ್ಯ ಬಿಡುಗಡೆ
ನವದೆಹಲಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವದ ಭಾಗವಾಗಿ ಕೇಂದ್ರ ಸರ್ಕಾರವು 100 ರೂಪಾಯಿಯ ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಿದೆ. ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿಯೇ ಅವರ ಭಕ್ತರಿಗೆ ವಿಶೇಷ ನಾಣ್ಯಗಳ ಬಿಡುಗಡೆ ಮಾಡುವ ಮೂಲಕ ಕೇಂದ್ರ ಹಣಕಾಸು ಸಚಿವಾಲಯವು ಗುಡ್‌ನ್ಯೂಸ್ ಕೊಟ್ಟಿದೆ.
ಆನ್‌ಲೈನ್‌ನ ಮೂಲಕ ಈ ನಾಣ್ಯವನ್ನು ಪಡೆದುಕೊಳ್ಳಬಹುದಾಗಿದೆ. 100 ರೂಪಾಯಿ ನಾಣ್ಯದಲ್ಲಿ ಒಂದು ಕಡೆ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಎಂದು ಬರೆಯಲಾಗಿದ್ದು. ಮತ್ತೊಂದು ಕಡೆ ಸತ್ಯಸಾಯಿ ಬಾಬಾ ಅವರ ಫೋಟೋ ಇದೆ. ಇದರ ಮೂಲ ಬೆಲೆಯು ಒಂದು ನಾಣ್ಯಕ್ಕೆ 6,460 ರೂಪಾಯಿ ಇದೆ. ಇನ್ನು ಗ್ರಾಹಕರು ತಮ್ಮ ಡೇಟಾದಲ್ಲಿ (ಮಾಹಿತಿ) ಯಾವುದೇ ಬದಲಾವಣೆಗಳನ್ನು ಆರ್ಡರ್ ಮಾಡಿದ 48 ಗಂಟೆಗಳ ಒಳಗೆ ಇಮೇಲ್ ಮೂಲಕ ತಿಳಿಸಬೇಕು ([email protected]). ಆರ್ಡರ್ ಕಳುಹಿಸಿದ ನಂತರ ಶಿಪ್ಪಿಂಗ್ ವಿಳಾಸದಲ್ಲಿನ ಬದಲಾವಣೆಗಳು ಇರುವುದಿಲ್ಲ. ಇದು ಮುಂಗಡ ಬುಕಿಂಗ್ ವ್ಯವಸ್ಥೆ ಆಗಿದ್ದು, ನಾಣ್ಯ ಸಿಗಲು 30 ದಿನಗಳು ಆಗಲಿವೆ.

ಭಾರತೀಯ ಸ್ಪೀಡ್ ಪೋಸ್ಟ್ ಮೂಲಕ ಈ ನಾಣ್ಯಗಳು ಸಿಗಲಿವೆ. ಆರ್ಡರ್‌ಗಳನ್ನು ಅವು ಬರುವ ಅನುಕ್ರಮದಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಅಂದರೆ ಮೊದಲು ಬಂದವರಿಗೆ ಮೊದಲ ಆದ್ಯತೆ. ಆರ್ಡರ್(ಗಳನ್ನು) ತ್ವರಿತವಾಗಿ ಟ್ರ್ಯಾಕ್ ಮಾಡುವ ಯಾವುದೇ ವಿನಂತಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹಣಕಾಸು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಶತಮಾನೋತ್ಸವ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ನವೆಂಬರ್ 23, 1926 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. 14ನೇ ವಯಸ್ಸಿನಲ್ಲೇ ಅವರು ತಮ್ಮ ದೈವಿಕ ಧ್ಯೇಯವನ್ನು ಪ್ರಾರಂಭಿಸಿದರು.
ಶ್ರೀ ಸತ್ಯ ಸಾಯಿ ಬಾಬಾ ಎಲ್ಲಾ ಧರ್ಮಗಳ ಏಕತೆಯನ್ನು ಒತ್ತಿ ಹೇಳಿದ್ದರು. ಸತ್ಯ, ಸರಿಯಾದ ನಡವಳಿಕೆ, ಶಾಂತಿ, ಪ್ರೀತಿ ಮತ್ತು ಅಹಿಂಸೆಯ ಮಾನವೀಯ ಮೌಲ್ಯಗಳನ್ನು ಬೋಧಿಸಿದರು. ಅವರ ಸರಳ ಹಾಗೂ ಆಳವಾದ ಬೋಧನೆಗಳಲ್ಲಿ "ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ" ಮತ್ತು "ಎಂದಿಗೂ ಸಹಾಯ ಮಾಡಿ, ಎಂದಿಗೂ ನೋಯಿಸಬೇಡಿ" ಎಂಬ ಧ್ಯೇಯವಾಕ್ಯ ಸೇರಿತ್ತು. ಇದನ್ನೇ ಅವರು ಎಲ್ಲರಿಗೂ ಹೇಳಿದರು.
ಶ್ರೀ ಸತ್ಯಸಾಯಿ ಬಾಬಾ ಅವರು ಅವರ ಜೀವಮಾನದ ಪೂರ್ತಿ ಬಡವರಿಗೆ ಸಹಾಯ ಮಾಡುವುದರಲ್ಲೇ ಕಳೆದರು. ಸರ್ಕಾರವೊಂದು ಮಾಡಬೇಕಾದ ಕೆಲಸಗಳನ್ನು ಮಾಡಿ ಜನಸಾಮಾನ್ಯರು ಹಾಗೂ ಬಡವರಿಗೆ ಸಹಾಯ ಮಾಡಿದರು. ಶಿಕ್ಷಣ, ಆರೋಗ್ಯ ಹಾಗೂ ಅನ್ನಸಂತರ್ಪಣೆ ವಿಚಾರದಲ್ಲಿ ಅವರು ಮಾಡಿರುವ ಸೇವೆಗಳನ್ನು ಜನ ಇಂದಿಗೂ ಸ್ಮರಿಸುತ್ತಾರೆ. ಉಚಿತ ಆಸ್ಪತ್ರೆಗಳು, ಉಚಿತ ಶಿಕ್ಷಣ ಸಂಸ್ಥೆಗಳು ಮತ್ತು ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುವ ಬೃಹತ್ ಕುಡಿಯುವ ನೀರಿನ ಯೋಜನೆಗಳಂತಹ ಹಲವಾರು ಸಾಮಾಜಿಕ ಸೇವೆಗಳನ್ನು ಅವರು ಸಲ್ಲಿಸಿದ್ದಾರೆ.
ಮುಂದುವರಿದು ಬಡವರು ಮತ್ತು ನಿರ್ಗತಿಕರಿಗಾಗಿ ಬಾಬಾ ಅವರ ಹೃದಯ ಯಾವಾಗಲೂ ಮಿಡಿಯುತ್ತಿತ್ತು. ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳಲು ಅವರು ಅವಿಶ್ರಾಂತವಾಗಿ ಕೆಲಸ ಮಾಡಿದರು. ಶ್ರೀ ಸತ್ಯ ಸಾಯಿ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅವತಾರವೆಂದು ಪೂಜಿಸುತ್ತಾರೆ ಮತ್ತು ಅವರ ದೈವಿಕ ಬೋಧನೆಗಳು ತಮ್ಮ ಜೀವನಕ್ಕೆ ದಿಕ್ಕನ್ನು ಕಂಡುಕೊಂಡ ಅನೇಕರನ್ನು ಸ್ಪರ್ಶಿಸಿದವು, ಪ್ರೇರೇಪಿಸಿದವು ಮತ್ತು ಮಾರ್ಗದರ್ಶನ ಮಾಡಿದವು ಎಂದರೆ ತಪ್ಪಾಗಲಾರದು.
ಶ್ರೀ ಸತ್ಯ ಸಾಯಿ ಬಾಬಾ ಅವರ ಮಹಾಸಮಾಧಿಯ ನಂತರವೂ, ಅವರ ಭಕ್ತರು ಮತ್ತು ಅನುಯಾಯಿಗಳು ಅವರ ಬೋಧನೆಗಳನ್ನು ಅಭ್ಯಾಸ ಮಾಡುವುದನ್ನು ಮತ್ತು ಸಮುದಾಯ ಮತ್ತು ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದನ್ನು ಮುಂದುವರಿಸುತ್ತಿದ್ದಾರೆ. ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಮತ್ತು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ಪ್ರಾರಂಭಿಸಿದ ಧ್ಯೇಯವನ್ನು ನಿರ್ವಹಿಸುತ್ತವೆ. ಅವರ ನಿಸ್ವಾರ್ಥ ಪ್ರೀತಿ ಮತ್ತು ಸಾರ್ವತ್ರಿಕ ಆಧ್ಯಾತ್ಮಿಕ ಬೋಧನೆಗಳು ಲಕ್ಷಾಂತರ ಜನರನ್ನು ಸಾಮಾಜಿಕ ಸೇವೆಯ ಹಾದಿಯಲ್ಲಿ ಪ್ರೇರೇಪಿಸಿವೆ.
-
Gold Price: ಇರಾನ್ - ಅಮೆರಿಕ ಕದನ ವಿರಾಮದ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಏರಿಕೆ, ಮೂರು ವಾರಗಳ ನಂತರ ಬೆಲೆ ಏರಿಕೆ -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್












Click it and Unblock the Notifications