ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ವಿವಾದ ಈಗ ಅಂತ್ಯ
ರಾಮೇಶ್ವರಂ, ಜುಲೈ 31: ಪ್ರಧಾನಿ ನರೇಂದ್ರ ಮೋದಿ ಅವರು 'ಭಾರತ ರತ್ನ' ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಮಾರಕವನ್ನು ಜುಲೈ 27ರಂದು ಲೋಕಾರ್ಪಣೆ ಮಾಡಿದ ಸುದ್ದಿ ಓದಿರಬಹುದು. ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ಇಟ್ಟಿದ್ದು ಟೀಕೆಗೆ ಗುರಿಯಾಗಿತ್ತು.
ಆದರೆ, ವಿವಾದ ತಾರಕಕ್ಕೇರುವ ಮುನ್ನವೇ ಎಚ್ಚೆತ್ತುಕೊಂಡ ಕಲಾಂ ಅವರ ಕುಟುಂಬ, ಭಗವದ್ಗೀತೆ ಪಕ್ಕದಲ್ಲಿ ಕುರಾನ್ ಹಾಗೂ ಬೈಬಲ್ ಇರಿಸಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಯ ಅಧಿಕಾರಿಗಳು ಕಲಾಂ ಪ್ರತಿಮೆಯ ಬಳಿ ಭಗವದ್ಗೀತೆ ಇಟ್ಟಿದ್ದರಲ್ಲಿ ಯಾವುದೇ ದುರುದ್ದೇಶವಿರಲಿಲ್ಲ. ಈಗ ಅಲ್ಲಿ ಕುರ್ ಆನ್ ಮತ್ತು ಬೈಬಲ್ ಪವಿತ್ರ ಗ್ರಂಥಗಳನ್ನು ಇಟ್ಟಿದ್ದೇವೆ. ಸದ್ಯದಲ್ಲೇ ತಮಿಳು ಗ್ರಂಥ ತಿರುಕ್ಕುರಳ್ ಇಡುತ್ತೇವೆ' ಎಂದು ಕಲಾಂ ಅವರ ಸಂಬಂಧಿಗಳಾದ ಶೇಖ್ ದಾವೂದ್ ಮತ್ತು ಸಲೀಂ ಹೇಳಿದ್ದಾರೆ.
ಸ್ಮಾರಕದ ಅಧಿಕಾರಿಗಳ ಅನುಮತಿ ಇಲ್ಲದೆಯೇ ಕುರಾನ್ ಮತ್ತು ಬೈಬಲ್ ಪುಸ್ತಕಗಳನ್ನು ಇರಿಸಲಾಗಿದೆ ಎಂದು ಹಿಂದೂ ಮಕ್ಕಳ್ ಕಟ್ಚಿ ಸಂಘಟನೆ ಮುಖಂಡ ಕೆ. ಪ್ರಭಾಕರನ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಸ್ಮಾರಕದಲ್ಲಿ ಕಲಾಂ ಅವರು ವೀಣೆ ನುಡಿಸುವ ಪ್ರತಿಮೆ(ಸುಮಾರು 15 ಕೋಟಿ ರು ವೆಚ್ಚ) 900ಕ್ಕೂ ಹೆಚ್ಚು ಪೇಂಟಿಂಗ್ ಗಳು ಹಾಗೂ 200ಕ್ಕೂ ಅಪರೂಪದ ಫೋಟೋಗಳಿವೆ.
ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತವಾಗಿತ್ತು: 'ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಆದ್ದರಿಂದ ಕಲಾಂ ಅವರ ಆದರ್ಶಗಳನ್ನು ಅನುಸರಿಸಿ, ಗೌರವಿಸಿ, ಪ್ರತಿಮೆ ಏಕೆ ನಿರ್ಮಿಸಬೇಕು' ಎಂದು ಕೆಲ ಇಸ್ಲಾಮ್ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ, ಕಲಾಂ ಅವರ ಸೋದರ ಮೊಹಮ್ಮದ್ ಅವರ ಅನುಮತಿ ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಯಿತು.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications