ಎಚ್ಚರ! ನಿಮ್ಮ ಚಲನವಲನ ದಾಖಲಾಗುತ್ತಿರುತ್ತದೆ

By: ಡಾ. ಅನಂತ ಕೃಷ್ಣನ್
Subscribe to Oneindia Kannada

ಮೈಸೂರು, ಜನವರಿ, 03: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜ್ಞಾನ ಹಬ್ಬ. 'ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ 'ನ 103 ನೇ ಸಮಾವೇಶ ಮೈಸೂರಿನಲ್ಲಿ ನಡೆಯುತ್ತಿದೆ. ಸಮಾವೇಶದಲ್ಲಿ ನೀವು ಪಾಲ್ಗೊಂಡಿದ್ದೀರಾ? ನಿಮ್ಮನ್ನು 'ಕಪ್ಪು ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಪಡೆ ಗಮನಿಸುತ್ತಲೇ ಇರುತ್ತದೆ.

ಮಾನಸ ಗಂಗೋತ್ರಿ ಆವರಣದಲ್ಲಿ 75 ಜನರ ಕಾರ್ಯಪಡೆ ಸದಾ ಕಾರ್ಯನಿರ್ವಹಿಸುತ್ತಿದೆ. ಈ ಕಪ್ಪು ಬೌನ್ಸರ್ಸ್ ಎಲ್ಲರ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಎಲ್ಲ ಕಾರ್ಯಕ್ರಮಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗಲು ಅನುವು ಮಾಡುವುದೇ ತಂಡದ ಧ್ಯೇಯ.[ನರೇಂದ್ರ ಮೋದಿ ಭಾಷಣ, ಸಿಎಂ ಸಿದ್ದುಗೆ ನಿದ್ದೆಯೇ ಭೂಷಣ!]

Beware! Bouncers will keep a tab on you at 103ISC

ಜನಜಂಗುಳಿಯನ್ನು ನಿಯಂತ್ರಣ ಮಾಡುವುದು ತಂಡದ ಮುಖ್ಯ ಮೊದಲ ಉದ್ದೇಶ. ಯಾವುದೇ ಸಮಸ್ಯೆ ಆಗದಂತೆ ತಡೆಯಲು ಸಕಲ ಕ್ರಮ ತೆಗೆದುಕೊಂಡಿದ್ದೇವೆ ಎಂದು ಬೌನ್ಸರ್ಸ್ ತಂಡದ ಸದಸ್ಯರೊಬ್ಬರು ಒನ್ ಇಂಡಿಯಾದೊಂದಿಗೆ ಅಭಿಪ್ರಾಯ ಹಂಚಿಕೊಂಡರು.[ವಿಜ್ಞಾನ, ತಂತ್ರಜ್ಞಾನ ಬಡತನ ತೊಲಗಿಸಬೇಕು: ಮೋದಿ]

20 ರಿಂದ 27 ವರ್ಷದ ನಡುವಿನ ಯುವಕರ ತಂಡ ಇದಾಗಿದೆ. ಎಲ್ಲರ ಬಳಿಯೂ ವಾಕಿ-ಟಾಕಿಗಳಿದ್ದು ಮಾಹಿತಿಯ ಪ್ರವಾಹ ವೇಗವಾಗಿರುತ್ತದೆ. ಹಾಗಾಗಿ ಸಮಾವೇಶದಲ್ಲಿ ಪಾಲ್ಗೊಂಡವರ ಪ್ರತಿಯೊಂದು ನಡಾವಳಿಯೂ ದಾಖಲಾಗುತ್ತದೆ. ನರೇಂದ್ರ ಮೋದಿ ಅವರ ಕಾರಿಗೆ ಯುವಕನೊಬ್ಬ ಅಡ್ಡ ಬಂದ ಘಟನೆಯೂ ನಡೆದಿದೆ. ಹಾಗಾಗಿ ಇದಾದ ನಂತರ ಭದ್ರತೆಯನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bounces at a science meet? That's the breaking news from Mysuru, which is hosting a gen-next sci-tech event. To ensure better crowd-control mechanism, the organisers of 103rd Indian Science Congress (103ISC) have hired bouncers. Spotting black T-shirt and blue jeans, these 'muscle maniacs' are already in action at the Manasagangotri campus.
Please Wait while comments are loading...