ಬೆಂಗಳೂರು-ವಾರಣಾಸಿ ರೈಲು ಪ್ರಯಾಣ: ವೇಳಾಪಟ್ಟಿ, ನಿಲುಗಡೆ ಮತ್ತು ಟಿಕೆಟ್ ಬುಕ್ಕಿಂಗ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿ
ಬೆಂಗಳೂರು: ಉತ್ತರ ಭಾರತದ ಪ್ರಮುಖ ಧಾರ್ಮಿಕ ಸ್ಥಳವಾದ ವಾರಣಾಸಿಗೆ (ಕಾಶಿ) ಯಾತ್ರೆ ಹಿಂದೂಗಳ ಪಾಲಿಗೆ ಅತ್ಯಂತ ಪ್ರವಿತ್ರವೆಂದು ಪರಿಗಣಿಸಲಾಗಿದೆ. ಇಲ್ಲಿಗೆ ಕರ್ನಾಟಕದಿಂದಲೂ ಅಪಾರ ಭಕ್ತರು ತೆರಳುತ್ತಾರೆ. ಕಾಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ಎಕ್ಸ್‌ಪ್ರೆಸ್ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನಿಂದ ಒಟ್ಟು ಆರು ಎಕ್ಸ್‌ಪ್ರೆಸ್ ರೈಲುಗಳ ಸೇವೆ ಲಭ್ಯವಿದೆ. ಈ ರೈಲುಗಳು ಉತ್ತರ ಭಾರತದ ಬೇರೆ ಬೇರೆ ನಗರಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಹಾದು ಪ್ರಯಾಗ್‌ರಾಜ್ ಮಾರ್ಗವಾಗಿ ವಾರಣಾಸಿಯತ್ತ ಸಾಗುವ ಸಾಪ್ತಾಹಿಕ ರೈಲು ಇವಾಗಿವೆ. ಯಾರೆಲ್ಲ ಕಾಶಿ ಯಾತ್ರೆಗೆ ಪ್ಲಾನ್ ಮಾಡಿದ್ದೀರಿ ಅವರೆಲ್ಲ ಈ ರೈಲುಗಳ ಸೇವೆ ಪಡೆಯಬಹುದಾಗಿದೆ. ಬೆಂಗಳೂರು-ವಾರಣಾಸಿ ರೈಲುಗಳು, ವೇಳಾಪಟ್ಟಿ, ನಿಲುಗಡೆ, ರೈಲು ಕಾರ್ಯಾಚರಣೆಯ ಅನುಕೂಲಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದ ಯಾತ್ರಾರ್ಥಿಗಳು ನೀವು ಕಾಶಿಗೆ ತೆರಳಬೇಕಾದರೆ ಈ ರೈಲುಗಳನ್ನು ಬಳಸಿ ವಾರಣಾಸಿಗೆ ಹೋಗಬಹುದು. ಗಮನಿಸಬೇಕಾದ ಅಂಶವೆಂದರೆ ವಿಶೇಷ ಸಂದರ್ಭದಲ್ಲಿ ವಾರಣಾಸಿ ರೈಲು ನಿಲ್ದಾಣಕ್ಕೆ ನೇರವಾಗಿ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಪ್ರಸ್ತುತದಲ್ಲಿ ಇಲ್ಲಿ ನೀಡಲಾಗಿರುವ ಆರು ರೈಲುಗಳು ವಾರಣಾಸಿ ಜಂಕ್ಷನ್ (BSB) ಅಥವಾ ವಾರಣಾಸಿ ಕಂಟೋನ್ಮೆಂಟ್ ನಲ್ಲಿ ನಿಲುಗಡೆ ನೀಡುವುದಿಲ್ಲ. ಬದಲಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (DDU) ನಿಲ್ದಾಣದಲ್ಲಿ ನಿಲುಗಡೆ ನೀಡುತ್ತವೆ. ಅಲ್ಲಿ ಇಳಿದು ನೀವು ಕಾಶಿಗೆ ತೆರಳಬಹುದಾಗಿದೆ.

ಬೆಂಗಳೂರಿನಿಂದ ವಾರಣಾಸಿಗೆ ಹೊರಡುವ ರೈಲುಗಳ ವಿವರ
1. ಮೈಸೂರು - ವಾರಣಾಸಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22687) ವಾರದಲ್ಲಿ ಎರಡು ದಿನ ಸಂಚಾರ ಮಾಡುತ್ತದೆ. ಮೈಸೂರಿನಿಂದ ಬರುವ ಈ ರೈಲು ಬೆಂಗಳೂರು ಮಾರ್ಗವಾಗಿ ಸೇವೆ ನೀಡುತ್ತದೆ. ಮಂಗಳವಾರ ಮತ್ತು ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (ಮೆಜೆಸ್ಟಿಕ್) ಬೆಂಗಳೂರಿನಿಂದ (SBC) ಬೆಳಗ್ಗೆ 10.20 ಗಂಟೆಗೆ ತೆರಳುತ್ತದೆ.
2. ಸಂಗಮಿತ್ರ ಎಕ್ಸ್‌ಪ್ರೆಸ್ (12295) ರೈಲು ಪ್ರತಿದಿನ ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಗ್ಗೆ 09:15ಕ್ಕೆ ಹೊರಡುತ್ತದೆ. ಹಲವು ಗಂಟೆಗಳ ಪ್ರಯಾಣದ ಬಳಿಕ ವಾರಣಾಸಿ ಹತ್ತಿರದ ಡಿಡಿಯು ಜಂಕ್ಷನ್ ನಿಲ್ದಾಣ ತಲುಪುತ್ತದೆ. ಅಲ್ಲಿಂದ ನೀವು ಸುಮಾರು ಅರ್ಧ ಗಂಟೆ ಪ್ರಯಾಣದ ಮೂಲಕ ವಾರಣಾಸಿ ಕಾಶಿ ವಿಶ್ವನಾಥನ ಮಂದಿರಕ್ಕೆ ಹೋಗಬಹುದಾಗಿದೆ.
3. ಬಾಗ್ಮತಿ ಎಕ್ಸ್‌ಪ್ರೆಸ್ ಸಾಪ್ತಾಹಿಕ ರೈಲು (12578) ಪ್ರತಿ ಶುಕ್ರವಾರ ಮಧ್ಯಾಹ್ನ 01:50 ಗಂಟೆಗೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ನಿರ್ಗಮಿಸುತ್ತದೆ. ಈ ರೈಲು ಒಟ್ಟು 55 ಗಂಟೆಗಳಲ್ಲಿ 3000 ಕಿಲೋ ಮೀಟರ್ ಸಂಚಾರ ಮಾಡುತ್ತದೆ. ಇಲ್ಲಿಂದ ಹೊರಟ ಮೂರನೇ ದಿನಕ್ಕೆ ದರ್ಭಂಗಾ ತಲುಪುತ್ತದೆ. ಕಾಶಿಗೆ ತೆರಳುವವರು ಇಲ್ಲಿನ ಡಿಡಿಯು ಜಂಕ್ಷನ್ ನಿಲ್ದಾಣದಲ್ಲಿ ಇಳಿಯುವುದು ಕಡ್ಡಾಯವಾಗಿದೆ. ಅಲ್ಲಿಂದ ಸುಮಾರು 15-20 ಕಿ.ಮೀ. ದೂರದ ವಾರಣಾಸಿಗೆ ಹೋಗಬಹುದಾಗಿದೆ.
4. ಹುಮ್‌ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (22354) ಪ್ರತಿ ಭಾನುವಾರ ಮಧ್ಯಾಹ್ನ 01:50ಕ್ಕೆ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಹೊರಡುತ್ತದೆ. ಕೃಷ್ಣರಾಜಪುರಂ, ಜೋಲಾರ್‌ಪೇಟೈ, ಕಟ್ಪಾಡಿ, ಪೆರಂಬೂರ್, ವಿಜಯವಾಡ, ನಾಗ್ಪುರ, ಇಟಾರ್ಸಿ (ಮಧ್ಯಪ್ರದೇಶ) ಮತ್ತು ಜಬಲ್ಪುರ್ ಮೂಲಕ ಸಾಗುತ್ತದೆ. ಯಾತ್ರಾರ್ಥಿಗಳು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (DDU) ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಾಶಿಗೆ ತೆರಳಬಹುದು.
5. ಪಾಟಲಿಪುತ್ರ ಎಕ್ಸ್‌ಪ್ರೆಸ್ ಸಾಪ್ತಾಹಿಕ (22352) ರೈಲು ಪ್ರತಿ ಸೋಮವಾರ ಮಧ್ಯಾಹ್ನ 01:50ಕ್ಕೆ ಬೆಂಗಳೂರಿನ ಎಸ್‌ಎಂವಿಟಿಯಿಂದ ಹೊರಡುತ್ತದೆ. ವಿವಿಧ ನಿಲ್ದಾಣಗಳನ್ನು ಹಾದು ಮೂರನೇ ದಿನಕ್ಕೆ ಸಹರ್ಸಾ ಜಂಕ್ಷನ್ (ಬಿಹಾರ) ತಲುಪುತ್ತದೆ. ಈ ಮಧ್ಯೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (DDU) ಯಾತ್ರಾರ್ಥಿಗಳು ಇಳಿದು ಅಲ್ಲಿಂದ ಕಾಶಿಗೆ ಹೋಗಬಹದು.
6. ಹುಮ್‌ಸಫರ್ ಎಕ್ಸ್‌ಪ್ರೆಸ್ ಸಾಪ್ತಾಹಿಕ ರೈಲು (06509) ಪ್ರತಿ ಸೋಮವಾರ ಬೆಳಗ್ಗೆ 07:15 ಗಂಟೆಗೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ನಿರ್ಗಮಿಸುತ್ತದೆ. ದಾನಾಪುರವರೆಗೆ ಸಂಚರಿಸುವ ಈ ರೈಲು ಡಿಡಿಯು ಜಂಕ್ಷನ್‌ನಲ್ಲಿ ನಿಲುಗಡೆ ನೀಡುತ್ತದೆ.
ವಾರಣಾಸಿ ರೈಲುಗಳು ನಿಲುಗಡೆ ನಿಲ್ದಾಣಗಳು ಯಾವುವು?
ಬೆಂಗಳೂರಿನಿಂದ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (DDU/ವಾರಣಾಸಿ) ಕಡೆಗೆ ಸಂಚರಿಸುವ ಈ ಎಕ್ಸ್‌ಪ್ರೆಸ್ ರೈಲುಗಳು ಕೆಎಸ್ಆರ್ ಬೆಂಗಳೂರು ಅಥವಾ ಎಸ್‌ಎಮ್‌ವಿಟಿಯಿಂದ ಯಿಂದ ಪ್ರಯಾಣ ಆರಂಭಿಸಿ ಕೆ.ಆರ್.ಪುರಂ, ಬಂಗಾರಪೇಟೆ ಮೂಲಕ ಕರ್ನಾಟಕ ದಾಟುತ್ತವೆ. ಬಳಿಕ ತಮಿಳುನಾಡಿನ ಜೋಲಾರ್‌ಪೆಟ್ಟೈ ಹಾಗೂ ಕಾಟ್ಪಾಡಿ, ಆಂಧ್ರಪ್ರದೇಶದ ವಿಜಯವಾಡ ಮತ್ತು ವಾರಂಗಲ್ ಮಾರ್ಗವಾಗಿ ಸಾಗಿ ನಾಗ್ಪುರವನ್ನು ತಲುಪುತ್ತವೆ. ಪ್ರಯಾಣದ ಮುಂದಿನ ಹಂತದಲ್ಲಿ ಮಧ್ಯಪ್ರದೇಶದ ಇಟಾರ್ಸಿ, ಜಬಲ್ಪುರ ಮತ್ತು ಸತ್ನಾ ನಿಲ್ದಾಣಗಳಲ್ಲೂ ನಿಲುಗಡೆ ನೀಡುತ್ತದೆ. ನಂತರ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಿಲ್ದಾಣ, ವಾರಣಾಸಿ ಸಮೀಪದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ (DDU) ನಿಲ್ದಾಣದಲ್ಲಿ ನಿಲುಗಡೆ ನೀಡುತ್ತವೆ. ಅಲ್ಲಿಂದ ಬೇರೆ ಬೇರೆ ರಾಜ್ಯಗಳ ಇತರ ನಿಲ್ದಾಣಗಳವರೆಗೆ ಈ ರೈಲು ಸಂಚರಿಸುತ್ತವೆ.
ಎಕ್ಸ್‌ಪ್ರೆಸ್ ರೈಲುಗಳ ಬೋಗಿಗಳ ವಿವರ
ಈ ರೈಲುಗಳು ಸಾಮಾನ್ಯವಾಗಿ ಸುಮಾರು 24 ಕೋಚ್‌ಗಳನ್ನು ಹೊಂದಿರುತ್ತವೆ. ಅದರಲ್ಲಿ ಎಂಟು ಎಸಿ 3-ಟಯರ್, ಆರು ಸ್ಲೀಪರ್ ಕ್ಲಾಸ್, ಎಂಟು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎರಡು ಎಸ್‌ಎಲ್‌ಆರ್/ಡಿ ಕೋಚ್‌ಗಳನ್ನು ಹೊಂದಿರುತ್ತವೆ.
ರೈಲು ಬುಕ್ಕಿಂಗ್ ಮಾಡುವುದು ಹೇಗೆ?
ಕರ್ನಾಟಕದಿಂದ ವಾರಣಾಸಿ (ಕಾಶಿ ಯಾತ್ರೆ)ಗೆ ಹೋಗುವ ರೈಲು ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದು. ಮೊದಲಿಗೆ ಭಾರತೀಯ ರೈಲ್ವೆ ಇಲಾಖೆ ಅಧಿಕೃತ ಜಾಲತಾಣ https://www.irctc.co.in/nget/train-search ಕ್ಕೆ ಭೇಟಿ ನೀಡಬೇಕು. ಅಲ್ಲಿ ಬಿಡುವ ಸ್ಥಳ, ಗಮ್ಯ ಸ್ಥಳ ಜೊತೆಗೆ ಪ್ರಯಾಣದ ದಿನಾಂಕ ನಮೂದಿಸಿ, ಯಾವ ವರ್ಗ ಸೀಟು ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಟಿಕೆಟ್ ಶುಲ್ಕವನ್ನು ನೀವು ಯುಪಿಐ, ಇತರ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಿದರೆ ಟಿಕೆಟ್ ದೃಢವಾಗಿದ್ದಲ್ಲಿ ಸಂದೇಶವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಟಿಕೆಟ್ ದರ ಎಷ್ಟು
ಬೆಂಗಳೂರು-ವಾರಣಾಸಿ (ಡಿಡಿಯು) ನಿಲ್ದಾಣಗಳ ನಡುವಿನ ಸದರಿ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರಗಳು ಆಯಾ ವರ್ಗದ ಸೀಟುಗಳ ಆಧಾರದ ಮೇಲೆ ನಿರ್ಧಾರವಾಗಿರುತ್ತವೆ. ಕನಿಷ್ಟ 875 ರೂ.ನಿಂದ ಗರಿಷ್ಠ ದರ 3400 ರೂಪಾಯಿಗು ಅಧಿಕವಿದೆ. ಮೂಲಗಳ ಪ್ರಕಾರ, ಸಾಮಾನ್ಯ ಸ್ಲೀಪರ್ (ಎಸ್‌ಎಲ್) ದರವು 875-975 ರೂಪಾಯಿ, 3ಎಸಿ ದರವು 2300- 2600 ರೂಪಾಯಿ, 2ಎಸಿ ದರವು 3400 ರೂಪಾಯಿಗಿಂತಲೂ ಹೆಚ್ಚಿದೆ. ಟಿಕೆಟ್ ಬೆಲೆ ಪ್ರಯಾಣದ ದಿನಾಂಕ (ಹಬ್ಬದ/ರಜಾ ದಿನಗಳ) ಹಾಗೂ ರೈಲಿನ ಪ್ರಕಾರದ ಮೇಲೆ ಬದಲಾಗುತ್ತವೆ.
(ವಿಶೇಷ ಸೂಚನೆ: ರೈಲ್ವೆ ಇಲಾಖೆಯು ತುರ್ತು ಕಾಮಗಾರಿ ಮತ್ತಿತರ ಸಂದರ್ಭಗಳಲ್ಲಿ ರೈಲುಗಳನ್ನು ನಿಯಂತ್ರಿಸುವುದು, ಸಮಯ ಬದಲಾವಣೆ, ವೇಳಾಪಟ್ಟಿ ಪರಿಷ್ಕರಣೆ/ಬದಲಾವಣೆ ಮಾಡುತ್ತಿರುತ್ತದೆ. ಕೆಲವು ಸಲ ರೈಲುಗಳನ್ನು ದಿಢೀರ್ ರದ್ದುಪಡಿಸುತ್ತದೆ. ಇದೆ ಅದೆಲ್ಲ ಪರಿಶೀಲಿಸಿ ನೀವು ಟಿಕೆಟ್ ಬುಕ್ ಮಾಡಬಹುದು.)
ಬೆಂಗಳೂರು-ವಾರಣಾಸಿ ರೈಲುಗಳ ಬಗ್ಗೆ ಜನರು ಪದೇ ಪದೇ ಕೇಳುವ ಪ್ರಶ್ನೆಗಳು (FAQs)
1. ಬೆಂಗಳೂರಿನಿಂದ ವಾರಣಾಸಿಗೆ ಇರುವ ಪ್ರಮುಖ ರೈಲುಗಳು ಯಾವುವು?
ಬೆಂಗಳೂರಿನಿಂದ ವಾರಣಾಸಿಗೆ ಮುಖ್ಯವಾಗಿ ಸಂಗಮಿತ್ರ ಎಕ್ಸ್‌ಪ್ರೆಸ್ (Sanghamitra Express), ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್ ಮತ್ತು ಬಾಗ್ಮತಿ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತವೆ.
2. ಬೆಂಗಳೂರಿನಿಂದ ವಾರಣಾಸಿಗೆ ಪ್ರಯಾಣದ ಸಮಯ ಎಷ್ಟು?
ರೈಲುಗಳ ವರ್ಗದ ಪ್ರಕಾರ ಪ್ರಯಾಣದ ಅವಧಿ ಬದಲಾಗುತ್ತದೆ. ಸಾಮಾನ್ಯವಾಗಿ ಈ ದೂರವನ್ನು ಕ್ರಮಿಸಲು ರೈಲುಗಳು ಸುಮಾರು 42 ರಿಂದ 48 ಗಂಟೆಗಳ ಸಮಯ ತೆಗೆದುಕೊಳ್ಳುತ್ತವೆ.
3. ಸಂಗಮಿತ್ರ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಯಾವಾಗ ಹೊರಡುತ್ತದೆ?
ಸಂಗಮಿತ್ರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12295) ಪ್ರತಿದಿನ ಬೆಂಗಳೂರಿನ ಕೆ.ಎಸ್.ಆರ್ (KSR) ನಿಲ್ದಾಣದಿಂದ ಬೆಳಗ್ಗೆ 09:15ಗಂಟೆಗೆ ಹೊರಡುತ್ತದೆ.
4. ವಾರಣಾಸಿ ತಲುಪಲು ರೈಲು ಟಿಕೆಟ್ ದರ ಎಷ್ಟಿರಬಹುದು?
ಟಿಕೆಟ್ ದರವು ನೀವು ಆಯ್ಕೆ ಮಾಡುವ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ. ಸ್ಲೀಪರ್ ಕ್ಲಾಸ್: 900 -1,100 ರೂ., 3-ಟೈರ್ ಎಸಿ (3ಎ): 2,300 - 2,500 ರೂ., 2-ಟೈರ್ ಎಸಿ (2ಎ): 3,300 - 3,600 ರೂ. ಇರಲಿದೆ.
5. ಬೆಂಗಳೂರಿನ ಯಾವ ನಿಲ್ದಾಣಗಳಿಂದ ವಾರಣಾಸಿಗೆ ರೈಲು ಲಭ್ಯವಿದೆ?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ನಗರ ನಿಲ್ದಾಣ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರೈಲುಗಳು ಲಭ್ಯವಿವೆ.
6. ವಿಮಾನ ನಿಲ್ದಾಣದಿಂದ ಈ ರೈಲು ನಿಲ್ದಾಣಗಳಿಗೆ ತಲುಪುವುದು ಹೇಗೆ?
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಎಂಟಿಸಿಯ 'ವಾಯು ವಜ್ರ' (KIA-9) ಬಸ್‌ಗಳ ಮೂಲಕ ನೀವು ಕೇವಲ 1 ಗಂಟೆಯಲ್ಲಿ ಮೆಜೆಸ್ಟಿಕ್ ಅಥವಾ ಕೆ.ಎಸ್.ಆರ್ ರೈಲು ನಿಲ್ದಾಣವನ್ನು ತಲುಪಬಹುದು. ವಿಮಾನ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ 24/7 ಬಸ್ ಸೌಲಭ್ಯವಿರುತ್ತದೆ.
7. ವಾರಣಾಸಿಗೆ ಹೋಗುವ ರೈಲುಗಳಲ್ಲಿ ಊಟದ ವ್ಯವಸ್ಥೆ ಹೇಗಿರುತ್ತದೆ?
ದೂರದ ಪ್ರಯಾಣದ ರೈಲುಗಳಲ್ಲಿ ಪ್ಯಾಂಟ್ರಿ ಕಾರ್ ಸೌಲಭ್ಯವಿರುತ್ತದೆ. ಪ್ರಯಾಣಿಕರು ರೈಲಿನಲ್ಲಿ ಅಥವಾ ಆನ್‌ಲೈನ್ ಇ-ಕ್ಯಾಟರಿಂಗ್ ಮೂಲಕ ಊಟವನ್ನು ಆರ್ಡರ್ ಮಾಡಬಹುದು.
-
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
South Western Railway: ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಿಶೇಷ ರೈಲು ಸಂಚಾರ; ಮಾರ್ಚ್ 21ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು










Click it and Unblock the Notifications