Bengaluru Pune Expressway: ಬೆಂಗಳೂರು–ಪುಣೆ ಎಕ್ಸ್‌ಪ್ರೆಸ್‌ ವೇ: 7 ಗಂಟೆಯಲ್ಲಿ ಪ್ರಯಾಣ ಸಾಧ್ಯ

Bengaluru Pune Expressway: ಬೆಂಗಳೂರು ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆ ಅಂತಿಮ ಅನುಮೋದನೆ ಹಂತಕ್ಕೆ ತಲುಪಿದೆ. ದೇಶದ ಪ್ರಮುಖ ಹೆದ್ದಾರಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. ಈ ಯೋಜನೆಗೆ ರಾಷ್ಟ್ರಿಯ ಮಟ್ಟದಲ್ಲಿ ಮನ್ನಣೆ ದೊರೆತಿದೆ.

ಕೇಂದ್ರ ಸರ್ಕಾರವು ಈ ಯೋಜನೆಯ ಬಗ್ಗೆ ಅಂತಿಮ ಅನುಮೋದನೆ ನೀಡುವ ಹಂತದಲ್ಲಿದ್ದು, ಮುಂದಿನ ಒಂದು ತಿಂಗಳಲ್ಲಿ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಅನುಮೋದನೆ ದೊರೆತ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನಂತರದಲ್ಲಿ ಕಾಮಗಾರಿ ಶುರುವಾಗಲಿದೆ. ಈ ಮುಖ್ಯ ಯೋಜನೆಯ ವಿವರವಾದ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ.

Bengaluru Pune Expressway

ಪ್ರಯಾಣ ಸಮಯ ಅರ್ಧಕ್ಕಿಂತ ಕಡಿಮೆ

ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 48 ಮೂಲಕ ಪುಣೆ ಬೆಂಗಳೂರು ಪ್ರಯಾಣಕ್ಕೆ ಸುಮಾರು 14 ರಿಂದ 15 ಗಂಟೆಗಳು ಬೇಕಾಗುತ್ತವೆ. ಟ್ರಾಫಿಕ್ ದಟ್ಟಣೆ, ಕಿರಿದಾದ ರಸ್ತೆಗಳು ಹಾಗೂ ಅಪಘಾತ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದರೆ ಪ್ರಯಾಣ ಸಮಯವನ್ನು ಸುಮಾರು 7 ಗಂಟೆಗಳ ಮಟ್ಟಿಗೆ ಇಳಿಸುವ ನಿರೀಕ್ಷೆಯಿದೆ.

ಯಾವ ಜಿಲ್ಲೆಗಳ ಮೂಲಕ ಹಾದು ಹೋಗಲಿದೆ

ಈ ಹೆದ್ದಾರಿಯು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಪರ್ಕವನ್ನು ಬಲಪಡಿಸುತ್ತದೆ. ಮಹಾರಾಷ್ಟ್ರದ ಸತಾರಾ ಮತ್ತು ಸಾಂಗ್ಲಿ ಜಿಲ್ಲೆಗಳ ಮುಖಾಂತರ ಸಾಗಿದ ನಂತರ ಕರ್ನಾಟಕದ ಬೆಳಗಾವಿ ಜಿಲ್ಲೆಗೆ ಪ್ರವೇಶಿಸುತ್ತದೆ. ಅಲ್ಲಿಂದ ಬಾಗಲಕೋಟೆ, ಗದಗ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಮೂಲಕ ಬೆಂಗಳೂರು ತಲುಪುತ್ತದೆ.

ಕಂಜಲೆ ಗ್ರಾಮ - ಕೋರೆಗಾಂವ್ ಬಳಿ ರಿಂಗ್‌ರೋಡ್ ಸಂಪರ್ಕ ಕಲ್ಪಿಸುವ ಯೋಜನೆಯೂ ಇದೆ. ಇದರಿಂದ ಪ್ರಾದೇಶಿಕ ಸಂಪರ್ಕ ಇನ್ನಷ್ಟು ಸುಧಾರಿಸುವ ಸಾಧ್ಯತೆ ಇದೆ. ಯೋಜನೆಯ ವೈಶಿಷ್ಟ್ಯಗಳು ಮತ್ತು ವೆಚ್ಚ ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಸುಮಾರು 700 ಕಿಮೀ ಉದ್ದವಾಗಿದ್ದು, ಆರು ಲೇನ್‌ಗಳ ಹೆದ್ದಾರಿಯಾಗಿ ನಿರ್ಮಿಸಲಾಗುತ್ತದೆ. ಕೆಲವು ಭಾಗಗಳಲ್ಲಿ ಇದನ್ನು ಎಂಟು ಲೇನ್‌ಗಳಿಗೆ ವಿಸ್ತರಿಸುವ ಯೋಜನೆಯೂ ಇದೆ.

ಈ ಹೊಸ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂದಾಜು 45,000 ಕೋಟಿ ರಿಂದ 50,000 ಕೋಟಿ ವೆಚ್ಚ ಎಂದು ಅಂದಾಜಿಸಲಾಗಿದೆ. ಸುಮಾರು 20,000 ಏಕರೆ ಭೂಮಿ ಅವಶ್ಯಕತೆ ಇದೆ. ಆರ್ಥಿಕ ಅಭಿವೃದ್ಧಿಯ ಉತ್ತೇಜನಕ್ಕೆ ಈ ಹೆದ್ದಾರಿ ನಿರ್ಮಾಣವಾದರೆ ಸಾರಿಗೆ ಸುಗಮವಾಗುವುದರ ಜೊತೆಗೆ ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆಯಿದೆ. ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ಸಿಗಲಿದ್ದು, ಉದ್ಯೋಗಾವಕಾಶಗಳು ಹೆಚ್ಚಾಗಬಹುದು. ಗ್ರಾಮೀಣ ಪ್ರದೇಶಗಳಿಗೂ ಉತ್ತಮ ಸಂಪರ್ಕ ದೊರೆತು ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+