Bengaluru: ಮಣಿಪುರದ 100 ವಿದ್ಯಾರ್ಥಿಗಳಿಗೆ ಉಚಿತ ಐಎಎಸ್ ತರಬೇತಿ: ಇನ್‌ಸೈಟ್ ಅಕಾಡೆಮಿ
ಬೆಂಗಳೂರು, ಆಗಸ್ಟ್ 01: ಮಣಿಪುರದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರ, ಗಲಭೆ, ಸಾವು ನೋವುಗಳು ದೇಶಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿವೆ. ಇದರಿಂದ ಆ ರಾಜ್ಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿದೆ. ಇದನ್ನು ಅರಿತಿರುವ ಇನ್‌ಸೈಟ್ ಐಎಎಸ್ ಅಕಾಡೆಮಿ ಮಣಿಪುರದ 100 ಮಂದಿ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್ ನೀಡಲು ನಿರ್ಧರಿಸಿದೆ.
ಮಣಿಪುರದ ಗಲಾಟೆಗಳಿಂದ ವಿದ್ಯಾರ್ಥಿಗಳಿಗೆ, ಐಎಎಸ್ ಅಭ್ಯರ್ಥಿಗಳಿಗೆ ತೊಂದರೆ ಆಗಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಐಎಎಸ್ UPSE ಆಕಾಂಕ್ಷಿಗಳಿಗೆ ಉಚಿತವಾಗಿ ಮತ್ತು ವಿಧ್ಯಾರ್ಥಿ ವೇತನ ಸಹಿ ಒಟ್ಟು 100 ಮಂದಿಗೆ ಕೋಚಿಂಗ್ ನೀಡಲು ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕ ವಿನಯ್ ಕುಮಾರ್ ಜಿಬಿ ಅವರು ನಿರ್ಧರಿಸಿದ್ದಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಉದ್ಯೋಗಕಾಶ ದೊರೆಯಲು ಸಹಾಯ ಮಾಡಿದಂತಾಗುತ್ತದೆ.

ಅಕಾಡೆಮಿಯು ಇಂಟಿಗ್ರೇಟೆಡ್ ಫೌಂಡೇಶನ್ ಪ್ರೋಗ್ರಾಂ ನಡಿ ಆಫ್‌ಲೈನ್ ಮತ್ತು ಆನ್‌ಲೈನ್ ಮಾರ್ಗದರ್ಶನ ಮಾಡಲಿದ್ದು, ಅದರಲ್ಲಿ ಒಟ್ಟು ನೂರು ಮಂದಿ ಮಣಿಪುರದ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ. ಅವರಿಗೆ ವಿದ್ಯಾರ್ಥಿ ವೇತನ ಸಹ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಣಿಪುರದಲ್ಲಿ ಪ್ರತಿಯೊಂದು ವರ್ಗವು ಅಲ್ಲಿನ ಹಿಂಸಾಚಾರದಿಂದ ತುತ್ತಾಗಿದೆ. ನಾಗರಿಕರಾಗಿ ನಾವು ಅವರೊಂದಿಗೆ ಒಗ್ಗಟ್ಟನ್ನು ತೋರಿಸಬೇಕಿದೆ. ಅವರ ಕಷ್ಟಗಳಿಗೆ ಮಿಡಿಯಬೇಕಿದೆ. ಈ ಕಾರಣದಿಂದ ಮಣಿಪುರದ ವಿದ್ಯಾರ್ಥಿಗಳಿಗೆ ಕೋಚಿಂಗ್ ನ 100 ಉಚಿತ ಸೀಟು ಮೀಸಲಿಡಲು ತೀರ್ಮಾನಿಸಿ ಅಭ್ಯರ್ಥಿಗಳನ್ನು ಆಹ್ವಾನಿಸಿದ್ದೇವೆ ಎಂದರು.
ವಿದ್ಯಾರ್ಥಿವೇತನ ಪಡೆಯಲು ಅವಕಾಶ
ಸಮುದಾಯ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲು, ಅರ್ಜಿದಾರರು ಮಣಿಪುರದ ಖಾಯಂ ನಿವಾಸಿಗಳಾಗಿರಬೇಕು ಮತ್ತು ಪದವಿ ಪೂರ್ಣಗೊಳಿಸಬೇಕು. ಕೋಚಿಂಗ್ ಪಡೆಯುಲು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.insightsonindia.com ಬೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಐಎಎಸ್ ಭಾರತದಾದ್ಯಂತ UPSC CSE ಆಕಾಂಕ್ಷಿಗಳಿಗೆ ಕೋರ್ಸ್‌ಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಭಾರತದ ದೆಹಲಿ, ಶ್ರೀನಗರ, ಲಕ್ನೋ ಸೇರಿದಂತೆ ಕರ್ನಾಟಕದ ಬೆಂಗಳೂರು, ಧಾರವಾಡ, ಮೈಸೂರು ಸೇರಿದಂತೆ ಒಟ್ಟು ನಗರದಲ್ಲಿ ಅಕಾಡೆಮಿ ಶಾಖೆಗಳನ್ನು ಹೊಂದಿದೆ.
ನಿಯಂತ್ರಣಕ್ಕೆ ಬಾರದ ಜನಾಂಗೀಯ ಹಿಂಸಾಚಾರ
ಜಾತಿ ಮೀಸಲಾತಿ ಕುರಿತು ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ತಿಂಗಳುಗಳೇ ಕಳೆದರೂ ಇನ್ನೂ ಸಹ ತಹಬದಿಗೆ ಬಂದಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ರಾಹುಲ್ ಗಾಂಧಿಯವರು ಸಹ ಮಣಿಪುರಕ್ಕೆ ಭೇಟಿ ನೀಡಿದ್ದರು.
ಇನ್ನೂ ಇತ್ತೀಚೆಗೆ ಇಬ್ಬರು ಮಹಿಳೆಯರ ನಗ್ನ ಮೆರವಣಿಗೆ ಮಾಡಿ, ಹೊಲದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಯಿತು. ಈ ಘಟನೆ ನಡೆದು ಎರಡು ತಿಂಗಳೇ ಉರುಳಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿಡಿಯೋ ಆಧರಿಸಿ ಸಮಾರು ಏಳು ಮಂದಿ ಆರೋಪಿಗಳನ್ನು ಮಣಿಪುರ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications