ಬೆಂಗಾಲಿ ನಟಿ ತನ್ನ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆ

Posted By:
Subscribe to Oneindia Kannada

ಕೋಲ್ಕತ್ತಾ, ಫೆಬ್ರವರಿ 08: ಪಶ್ಚಿಮಬಂಗಾಳದ ರಾಜಧಾನಿ ಕೊಲ್ಕತಾದ ಕಸ್ಬಾ ಪ್ರದೇಶದ ಫ್ಲಾಟೊಂದರಲ್ಲಿ ಬಂಗಾಳಿ ಸಹ ನಟಿಯೊಬ್ಬಳ ಕೊಳೆತ ಶವ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಾಲಿ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಬಿತಾಸ್ತಾ ಸಹಾ ಎಂಬ ನಟಿಯ ಕೊಳೆತ ಶವ ಆಕೆ ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿ ನೇಣು ಹಾಕಿದ ರೀತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು.[ನಟಿ ಪ್ರತ್ಯೂಷಾ ಸಾವಿಗೂ ಮುನ್ನ ಗರ್ಭಿಣಿಯಾಗಿದ್ದಳಂತೆ!]

Bengali actress Bitasta Saha found dead in apartment, kolkata police,

ಶವದ ಸೊಂಟದ ಭಾಗದಲ್ಲಿ ಅಳವಾಗಿ ಸೀಳಿದ ಗಾಯದ ಗುರುತು ಕಾಣಿಸಿತ್ತು. ದೇಹದ ಇತರೆ ಭಾಗಗಳ ಮೇಲೆ ಹಲವಾರು ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬರಲಿದೆ ಎಂದು ಪೊಲೀಸ್ ಆಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಸಂಜೆಯಿಂದ ಬಿತಾಸ್ತಾ ಅವರ ತಾಯಿ ಹಲವಾರು ಬಾರಿ ಆಕೆಗೆ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸದಿದ್ದಾಗ ಗಾಬರಿಗೊಂಡು ಫ್ಲಾಟಿಗೆ ತೆರಳಿದ್ದಾರೆ. ಬಾಗಿಲು ತೆಗೆಯದೇ ಇದ್ದಾಗ ಪೊಲೀಸರ ನೆರವಿನಿಂದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಬಿತಾಸ್ತಾ ಶವ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.

ಎರಡು ದಿನಗಳ ಹಿಂದೆ ಆಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮಣಿಕಟ್ಟು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ನಂತರ ನೇಣುಬಿಗಿದುಕೊಂಡು ಸಾವನ್ನಪ್ಪಿರಬಹುದು. ಆಕೆಯ ಫೇಸ್ ಬುಕ್ ಖಾತೆ ಪರಿಶೀಲಿಸಿದಾಗ, ಆಕೆ ಮಾನಸಿಕ ಒತ್ತಡದಲ್ಲಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A semi-decomposed body of a small-time local actress of the Bengali entertainment industry was on Tuesday recovered from her flat in the southern part of the city's Kasba area, police said.
Please Wait while comments are loading...