Olympic 2024: ವಿನೇಶ್ ಪೋಗಟ್‌ಗೆ ತೂಕ ಹೆಚ್ಚಾಗಿದ್ದು ಮೊದಲೇ ಗೊತ್ತಿತ್ತಾ?, ರಾತ್ರಿಯಿಡೀ ದೇಹ ದಂಡಿಸಿದ್ದೇಕೆ?
ಭಾರತ ಪ್ಯಾರಿಸ್ ಒಲಿಂಪಿಕ್ 2024ರಲ್ಲಿ ಆರಂಭದಿಂದ ಅಚಲ ವಿಶ್ವಾಸದಿಂದ ಮುನುಗ್ಗಿದ್ದ ಕುಸಿಪಟು ಗಟ್ಟಿಗಿತ್ತಿ 'ವಿನೇಶ್ ಪೋಗಟ್' ಅವರು ಮಂಗಳವಾರ ಒಲಂಪಿಕ್ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಭಾರತದ ಚಿನ್ನದ ಪದಕ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ಪೋಗಟ್ ಅವರ ತೂಕ ಹೆಚ್ಚಾಗಿದ್ದೇ ಕಾರಣ ಎಂದು ಗೊತ್ತಾಗಿದೆ. ಹಾಗಾದರೆ ವಿನೇಶ್ ಪೋಗಟ್ ಅವರಿಗೆ ತಮ್ಮ ತೂಕ ಹೆಚ್ಚಾಗಿದ್ದ ಬಗ್ಗೆ ಮೊದಲೇ ಗೊತ್ತಿತ್ತೇ?, ಹೌದು ಎಂಬ ಮಾಹಿತಿ ಲಭ್ಯವಾಗಿದೆ.
ವಿನೇಶ್ ಪೋಗಟ್ ಅವರು ಭಾರತೀಯ ಕುಸ್ತಿಪಟುಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡವರು. ಏಕೆಂದರೆ ಲೈಂಗಿಕ ದೌರ್ಜನ್ಯ ವಿಚಾರದಲ್ಲಿ ತಮ್ಮ ಕೋಚ್ ವಿರುದ್ಧ ಗಟ್ಟಿಯಾಗಿ ನಿಂತವರು. ಪ್ರಧಾನಿ ಮೋದಿ ಸರ್ಕಾರವನ್ನು ಎದುರು ಹಾಕಿಕೊಂಡು ಉಗ್ರ ಹೋರಾಟ ಮಾಡಿ ದೇಶವ್ಯಾಪಿ ಪರಿಚಿತಗೊಂಡ ವಿನೇಶ್ ಪೋಗಟ್ ನಿರಂತರ ಪರಿಶ್ರಮದ ಮಧ್ಯೆ ಎಲ್ಲಿಯೂ ಮಾನಸಿಕವಾಗಿ ಕುಗ್ಗದೇ ಒಲಂಪಿಕ್ಸ್ ಗೆ ಸಿದ್ಧತೆ ನಡೆಸಿದರು.

ಫೈನಲ್ ಪಂದ್ಯ ಬಿಟ್ಟು ಉಳಿದೆಲ್ಲವು ಒಲಿಂಪಿಕ್ 2024ರಲ್ಲಿ ವಿನೇಶ್ ಪೋಗಟ್ ಅಂದುಕೊಂಡಂತೆ ನಡೆಯುತ್ತಾ ಬಂತು. ಆದರೆ ಅವರು ಅಧಿಕ ತೂಕದ ವಿಚಾರವಾಗಿ ಫೈನಲ್ ಪಂದ್ಯದಿಂದ ಹೊರ ನಡೆದಿದ್ದಾರೆ. ಇದು ಅವರಿಗೆ ಮಾತ್ರವಲ್ಲದೇ, ಇಡೀ ಭಾರತಕ್ಕೆ ಆಘಾತ ತಂದಿದೆ. ಈ ತೂಕ ಕರಗಿಸಲೆಂದೆ ರಾತ್ರಿಯೀಡಿ ವರ್ಕೌಟ್ (ವ್ಯಾಯಾಮ) ಮಾಡಿ, ಇಂದು ಆಸ್ಪತ್ರೆಗೆ ದಾಖಲಾದ ವಿನೇಶ್ ಪೋಗಟ್‌ಗೆ ಮೊದಲೇ ತಮ್ಮ ತೂಕದ ಬಗ್ಗೆ ಅರಿವಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಹೌದು, ತಮ್ಮ ತೂಕ ಹೆಚ್ಚಾಗಿದ್ದರಿಂದಲೇ ವಿನೇಶ್ ಪೋಗಟ್ ಅವರು ಒಲಿಂಪಿಕ್ ಫೈನಲ್ ಪಂದ್ಯ ಪ್ರವೇಶಕ್ಕೂ ಮೊದಲು ರಾತ್ರಿಯಿಡೀ ದೇಹ ದಂಡಿಸಿದ್ದಾರೆ. ನಾನಾ ಬಗೆಯ ವ್ಯಾಯಾಮ ಮಾಡಿ ದೇಹ ದಂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಏಕೆಂದರೆ ಅವರಿಗೆ ತನ್ನ ದೇಹ ತೂಕ ಹೆಚ್ಚಾಗಿದ್ದರ ಅರಿವು ಮೊದಲೇ ಇತ್ತು ಎನ್ನಲಾಗಿದೆ.
ತೂಕ ಇಳಿಸಲೇಬೇಕು...ಪೋಗಟ್
ತಮ್ಮ ತೂಕ ಹೆಚ್ಚಾಗುತ್ತಿದ್ದಂತೆ ನಿರಂತರ ಶ್ರಮ ಹಾಕಲು ಪೋಗಟ್ ಮುಂದಾಗಿದ್ದಾರೆ. ಹೇಗಾದರೂ ಮಾಡಿ ತೂಕ ಇಳಿಸಲೇ ಬೇಕು ಎಂದು ಫೈನಲ್ ಗೆ ಅರ್ಹತೆ ಪಡೆದು ಭಾರತಕ್ಕೆ ಚಿನ್ನದ ಪದಕ ತಂದುಕೊಡಲು ತೀರ್ಮಾನಿಸಿದ್ದರು. ಆದರೆ ವಿಧಿಯಾಟವೇ ಬೇರೆ ಆಗಿತ್ತು. ತೂಕ ಹೆಚ್ಚಳ ಕಾರಣಕ್ಕೆ ಅವರು ಕನಸು ಭಗ್ನಗೊಂಡಿತು. ನೀವು ಅನರ್ಹ ಎಂದು ಹೇಳುವ ಮೂಲಕ ಒಲಿಂಪಿಕ್ಸ್ ಅಸೋಸಿಯೇಷನ್ ಅವರಿಗೆ ಶಾಕ್ ನೀಡಿತು.
ಇದಾಗಿ ಕಣ್ಣೀರಿಡುತ್ತಲೇ ಹೊರ ನಡೆದ ವಿನೇಶ್ ಪೋಗಟ್ ಅವರು ಮಾನಸಿಕ ಒತ್ತಡಕ್ಕೆ ಒಳಗಾದರು. ಅಲ್ಲದೇ ರಾತ್ರಿಯಿಡಿ ವರ್ಕೌಟ್ ಮಾಡಿದ್ದರಿಂದ ಅವರಿಗೆ ಡಿ ಹೈಡ್ರೇಷನ್ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಅವರು ಫೈನಲ್‌ಗೆ ಅನರ್ಹವಾಗುತ್ತಿದ್ದಂತೆ ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾದರು. ಸದ್ಯ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications