ಮೋದಿಯವರೊಂದಿಗೆ ಪ್ರವಾಸದ ಫ್ಲ್ಯಾಷ್‌ಬ್ಯಾಕ್ ಫೋಟೋ ಹಂಚಿಕೊಂಡ ಬೇರ್ ಗ್ರಿಲ್ಸ್

'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ವಿಹಾರವನ್ನು ನೆನಪಿಸಿಕೊಂಡ ಬೇರ್ ಗ್ರಿಲ್ಸ್, ಫೋಟೋ ಹಂಚಿಕೊಂಡಿದ್ದಾರೆ.

ಜನಪ್ರಿಯ ಸಾಹಸ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಅವರು ಪ್ರಧಾನಿ ಮೋದಿಯವರೊಂದಿಗಿನ ಅವರ ಪ್ರವಾಸದ ಫ್ಲ್ಯಾಷ್‌ಬ್ಯಾಕ್ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 2019 ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮವನ್ನು ನೆನಪಿಸಿಕೊಳ್ಳುವಾಗ ಗ್ರಿಲ್ಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಮವಾರ ಗ್ರಿಲ್ಸ್ ಅವರು ತಮ್ಮ ಮತ್ತು ಪ್ರಧಾನಿ ಮೋದಿಯವರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಈ ಫೋಟೋವನ್ನು ತೆಗೆಯಲಾಗಿದೆ.

ಫೋಟೋವನ್ನು ಹಂಚಿಕೊಳ್ಳುವಾಗ ಗ್ರಿಲ್ಸ "ಭಾರತದ ಪ್ರಧಾನ ಮಂತ್ರಿಯೊಂದಿಗೆ ಕಾಡು ಸುತ್ತಿದ ಅತ್ಯಂತ ಸಾಹಸದ ನೆನಪು! ನನಗೆ ಗೊತ್ತಿರುವ ಎರಡು ವಿಷಯಗಳು: ಕಾಡು ಯಾವಾಗಲೂ ವಿಶಾಲವಾಗಿರುತ್ತದೆ. ಅಲ್ಲಿ ನಾವು ತುಂಬಾ ಚಿಕ್ಕವರು" ಎಂಬಾರ್ಥದಲ್ಲಿ ಗ್ರಿಲ್ಸ್ ವೈರಲ್ ಫೋಟೋಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ.

Bear Grylls remembers vacation with PM Modi: Viral Photo

ಬೇರ್ ಗ್ರಿಲ್ಸ್ ಅವರೊಂದಿಗೆ ಉತ್ತರಾಖಂಡ್‌ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಪರಿಸರ ಸಂರಕ್ಷಣೆ, ಪ್ರಕೃತಿ ಮತ್ತು ಅವರ ಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿದರು. ಇಲ್ಲಿಯವರೆಗೆ ವೈರಲ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ 3.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 96,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಅವರು ತಮ್ಮ ಪ್ರಕೃತಿ ಪ್ರೇಮವನ್ನು ಚರ್ಚಿಸುವಾಗ "ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದರೆ ಏನೂ ತಪ್ಪಾಗುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು. ಬಾಲಿವುಡ್ ತಾರೆಗಳಾದ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಅವರು ಪ್ರಸಿದ್ಧ ದೂರದರ್ಶನ ಸಾಹಸಿ ಮ್ಯಾನ್ Vs ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+