BBC Documentry Row: ಬಿಬಿಸಿ ಸಂಸ್ಥೆ ಮೇಲೆ ಐಟಿ ದಾಳಿ, ವಿನಾಶ ಕಾಲೇ ವಿಪರೀತ ಬುದ್ಧಿ ಎಂದು ಕಾಂಗ್ರೆಸ್ ಟೀಕೆ
ಬಿಬಿಸಿ ಸಂಸ್ಥೆಯ ನವದೆಹಲಿ ಹಾಗೂ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ಕುರಿತು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಟೀಕಿಸಿದೆ.
ಬೆಂಗಳೂರು, ಫೆಬ್ರವರಿ 14: ಪ್ರಧಾನಿ ನರೇಂದ್ರ ಮೋದಿ ಕುರಿತಾದ ಸಾಕ್ಷ್ಯಚಿತ್ರದ ವಿವಾದ ಬಳಿಕ ಇದೀಗ ಬಿಬಿಸಿ ಸಂಸ್ಥೆಯ ನವದೆಹಲಿ ಹಾಗೂ ಮುಂಬೈ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ಕುರಿತು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, 'ವಿನಾಶ ಕಾಲೇ ವಿಪರೀತ ಬುದ್ಧಿ' ಎಂದು ಜರಿದಿದೆ.
ಬಿಬಿಸಿ ಸಂಸ್ಥೆ (British Broadcasting Company) ಮೇಲಿನ ಐಟಿ ದಾಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ಉದ್ಯಮಿ ಅದಾನಿ ಸಮೂಹದ ಹಗರಣದ ಬಗ್ಗೆ ನಾವು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಿ ಎಂದು ಕೇಳಿದರೆ, ಅವರು ಬಿಬಿಸಿ ಮೇಲೆ ಐಟಿ ದಾಳಿ ಮಾಡುತ್ತಾರೆ' ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಆದಾಯ ತೆರಿಗೆಗೆ ಮತ್ತು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ತಪಾಸಣೆ ನಡೆಸಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿದೆ. ದಿಢೀರ್ ದಾಳಿ ವೇಳೆ ದೆಹಲಿ ಹಾಗೂ ಮುಂಬೈ ಕಚೇರಿಯಲ್ಲಿನ ಸಿಬ್ಬಂದಿಯ ಮೊಬೈಲ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಬಿಬಿಸಿ ಸಂಸ್ಥೆ ತಯಾರಿಸಿದ 'ಇಂಡಿಯಾ- ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ತಿಳಿಸಿರುವ ಈವರೆಗಿನ ಯಾವ ಕಾರಣವೂ ಸರಿಯಾಗಿಲ್ಲ. ಹೀಗೆಂದು ವಿರೋಧ ಪಕ್ಷಗಳು ತಿಳಿಸಿವೆ. ಅಲ್ಲದೇ ಬಿಬಿಸಿ ಸಾಕ್ಷ್ಯಚಿತ್ರ ವಿವಾದ ಬಿರುಗಾಳಿ ಎದ್ದ ಬಳಿಕ ಬಿಜೆಪಿ ನಡೆ ವಿರುದ್ಧ ಪ್ರತಿ ಪಕ್ಷಗಳು ಖಂಡಿಸಿವೆ.

ಇನ್ನೂ ಈ ಸಾಕ್ಷ್ಯ ಚಿತ್ರ ಎಲ್ಲಿಯೂ ಪ್ರಸಾರವಾಗದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ತಂತ್ರಜ್ಞಾನ ನಿಯಮ 2021ರ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಲಾಗಿದೆ. ಸಾಕ್ಷ್ಯಚಿತ್ರ ಪ್ರದರ್ಶನ ತಡೆಹಿಡಿಯುವಂತೆ ಯೂಟ್ಯೂಬ್‌ಗೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವೆಬ್ ಕೊಂಡಿಗಳನ್ನು ತಡೆಹಿಡಿಯುವಂತೆ ಟ್ವಿಟರ್‌ಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications