Bank Holidays in November 2024: ನವೆಂಬರ್‌ನಲ್ಲಿ 13 ದಿನ ಬ್ಯಾಂಕ್‌ಗಳಿಗೆ ರಜೆ, ಗಮನಿಸಿ
ಬೆಂಗಳೂರು, ಅಕ್ಟೋಬರ್ 29: ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದಿಷ್ಟ ರಾಷ್ಟ್ರೀಯ ಸಾರ್ವಜನಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದೆ. ಅದರ ಪ್ರಕಾರ ನವೆಂಬರ್ 2024 ರಲ್ಲಿ ದೇಶದ ಎಲ್ಲ ಬ್ಯಾಂಕ್‌ಗಳಿಗೆ ಒಟ್ಟು 13 ದಿನ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಗ್ರಾಹಕರು ಇಲ್ಲಿ ನೀಡಲಾಗಿರುವ ದಿನಾಂಕಗಳನ್ನು ಗಮನಿಸಿ, ಬ್ಯಾಂಕ್‌ಗಳಿಗೆ ತೆರಳಬಹುದು, ವ್ಯವಹರಿಸಬಹುದು.
ಆರ್‌ಬಿಐ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಹಬ್ಬಗಳ ಆಧಾರದಲ್ಲಿ ಬ್ಯಾಂಕ್‌ಗಳಿಗೆ ನವೆಂಬರ್‌ನಲ್ಲಿ ಸಾರ್ವಜನಿಕ ರಜೆ ಘೋಷಿಸಿ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಹೀಗೆ ಬ್ಯಾಂಕ್‌ಗಳು ಬಂದ್ ಇರುವ ಸಮಯದಲ್ಲಿ ಆಯಾ ದಿನ ನೆಟ್ ಬ್ಯಾಂಕ್, ಮೊಬೈಲ್ ಅಪ್ಲಿಕೇಷನ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಆಯ್ಕೆಗಳು ಲಭ್ಯ ಇರುತ್ತವೆ ಎಂದು ಆರ್‌ಬಿಐ ತಿಳಿಸಿದೆ.

ನವೆಂಬರ್ ಬ್ಯಾಂಕ್ ರಜೆಗಳು ಯಾಕೆ?
ಮುಂದಿನ ನವೆಂಬರ್ ತಿಂಗಳಲ್ಲಿ ಮೊದಲ ದಿನವೇ ದೀಪಾವಳಿ ಹಬ್ಬ ಮತ್ತು ಛತ್ ಪೂಜೆ, ಗುರುನಾನಕ್ ಜಯಂತಿ ಇದೆ. ಇಷ್ಟು ಮಾತ್ರವಲ್ಲದೇ ಆಯಾ ರಾಜ್ಯಗಳಲ್ಲಿ ನಿರ್ದಿಷ್ಟ ಕಾರ್ಯಕ್ರಮಗಳ ಕಾರಣದಿಂದ ಬ್ಯಾಂಕ್ ವ್ಯವಹಾರ ಉದ್ದೇಶಿತ ದಿನಗಳಂದು ಕಾರ್ಯ ನಿರ್ವಹಿಸುವುದಿಲ್ಲ. ಈ ಬ್ಯಾಂಕ್ ಗಳ ಸಾರ್ವಜನಿಕ ರಜೆಯು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ನವೆಂಬರ್ ಮಾತ್ರವಲ್ಲದೇ ಯಾವಾಗಲೇ ಬ್ಯಾಂಕ್‌ಗಳು ರಜೆ ಇದ್ದರೂ ಸಹಿತ ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಸೇವೆ ಪಡೆಯಬಹುದು. ವಿತ್ ಡ್ರಾ, ಪಾವತಿ, ಇನ್ನಿತರ ಖಾತೆ ನಿರ್ವಹಣೆ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆ ನೀಡುವಂತೆ ಕೋರಿದೆ. ಈ ನವೆಂಬರ್ ರಜಾ ದಿನದ ಹೆಚ್ಚಿನ ಮಾಹಿತಿಗೆ ಗ್ರಾಹಕರು RBI ಕ್ಯಾಲೆಂಡರ್ ವೀಕ್ಷಿಸಬಹುದು.
ನವೆಂಬರ್ ತಿಂಗಳಲ್ಲಿ ಯಾವೆಲ್ಲ ದಿನ ಬ್ಯಾಂಕ್ ರಜೆ, ಪಟ್ಟಿ
ನವೆಂಬರ್ 1- ದೀಪಾವಳಿ ಅಮವಾಸ್ಯೆ
ನವೆಂಬರ್ 2- ದೀಪಾವಳಿ (ಬಲಿ ಪ್ರತಿಪದ)
ನವೆಂಬರ್ 3- ಭಾನುವಾರ
ನವೆಂಬರ್ 7- ಛತ್
ನವೆಂಬರ್ 8- ಛತ್
ನವೆಂಬರ್ 9 - ಎರಡನೇ ಶನಿವಾರ
ನವೆಂಬರ್ 10 - ಭಾನುವಾರ
ನವೆಂಬರ್ 12 - ಎಗಾಸ್-ಬಗ್ವಾಲ್
ನವೆಂಬರ್ 15 - ಗುರುನಾನಕ್ ಜಯಂತಿ
ನವೆಂಬರ್ 17 - ಭಾನುವಾರ
ನವೆಂಬರ್ 18 - ಕನಕದಾಸ ಜಯಂತಿ
ನವೆಂಬರ್ 23 - ಸೆಂಗ್ ಕುಟ್ಸ್ನೆಮ್, ನಾಲ್ಕನೇ ಶನಿವಾರ
ನವೆಂಬರ್ 24 - ಭಾನುವಾರ
ರಾಜ್ಯವಾರು ಬ್ಯಾಂಕ್ ರಜೆಗಳ ಮಾಹಿತಿ
ನವೆಂಬರ್ 1 ರಂದು ತ್ರಿಪುರ, ಕರ್ನಾಟಕ ಇನ್ನಿತರ ಕಡೆ ದೀಪಾವಳಿ ಮತ್ತು ಕನ್ನಡ ರಾಷ್ಟ್ರೀಯ ಹಬ್ಬ ರಜೆ ಇದೆ
ನವೆಂಬರ್ 7 ಮತ್ತು 8 ಕ್ಕೆ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಛತ್ ಪೂಜೆ ಸಲುವಾಗಿ ರಜೆ
ನವೆಂಬರ್ 15 ರಂದು ವಿವಿಧ ರಾಜ್ಯಗಳಲ್ಲಿ ಗುರುನಾನಕ್ ಜಯಂತಿ ಪ್ರಯುಕ್ತ ಬ್ಯಾಂಕ್ ರಜೆ ಇರಲಿವೆ.
ನವೆಂಬರ್ 18 ಮತ್ತು 23 ರಂದು ಕರ್ನಾಟಕ ಮತ್ತು ಮೇಘಾಲಯ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ಪ್ರಾದೇಶಿಕ ರಜೆ ಇದೆ.












Click it and Unblock the Notifications