ಬಿಬಿಎಂಪಿ ಭಾರಿ ಮೊತ್ತ ಬಾಕಿ: ಗುತ್ತಿಗೆದಾರ ಆತ್ಮಹತ್ಯೆ

ಬಿಬಿಎಂಪಿ ಸುಮಾರು 90 ಲಕ್ಷ ರೂಪಾಯಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದು, ಸಾಲಬಾಧೆ ಹೆಚ್ಚಾಗಿದೆ ಎಂದು ಆರೋಪಿಸಿ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಣ್ಯದ ಗಿರೀಶ್ (40) ಮೃತ ದುರ್ದೈವಿ. ಪೀಣ್ಯದ ದೊಡ್ಡ ಬಿದರಕಲ್ ನ ತಮ್ಮ ನಿವಾಸದಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಲ್ ಪಾವತಿಸಲು ಬಿಬಿಎಂಪಿ ವಿಳಂಬಮಾಡುತ್ತಿರುವುದರ ವಿರುದ್ಧ ಗುತ್ತಿಗೆದಾರ ಗಿರೀಶ್ ಇತ್ತೀಚೆಗೆ ಭಾರಿ ಪ್ರತಿಭಟನೆ ಮಾಡಿದ್ದರು. ಆದರೆ ಅದು ಬಿಬಿಎಂಪಿ ಕಣ್ಣು-ಕಿವಿಗೆ ಬಿದ್ದಿರಲಿಲ್ಲ. ಪಾಲಿಕೆಯೇ ಸಾಲದಲ್ಲಿರುವಾಗ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ಬೇಜವಾಬ್ದಾರಿ ಉತ್ತರವೂ ಪಾಲಿಕೆಯಿಂದ ಬಂದಿತ್ತು.
ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಗುತ್ತಿಗೆದಾರರು ಪಾಲಿಕೆಯ ಸಾಲದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಹಣ ಮಂಜೂರು ಮಾಡದ ಹಿನ್ನೆಲೆಯಲ್ಲಿ ಹಲವರು ಪ್ರತಿಭಟನೆಯ ಹಾದಿಯನ್ನೂ ಹಿಡಿಯುತ್ತಿದ್ದಾರೆ. ಈಗ ಒರ್ವ ಗುತ್ತಿಗೆದಾರ ಇದೇ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ.
ಮೇಯರ್ ಕಟ್ಟೆ ಸತ್ಯನಾರಾಯಣ ಅವರು ಆಯುಕ್ತ ಎಂ ಲಕ್ಷ್ಮೀನಾರಾಯಣ ಏನನ್ನುತ್ತಾರೆ? ಈಗಲಾದರೂ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತಾರಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications