ಪಾಕ್ ವಲಸಿಗರಿಗೆ ಯುಎಸ್ ನಿಂದ ನಿಷೇಧ: ಭಾರತ ಸ್ವಾಗತ
ಪಾಕಿಸ್ತಾನದ ವಲಸಿಗರಿಗೆ ಅಮೆರಿಕ ಪ್ರವೇಶ ನಿಷೇಧ ಹೇರುವ ಟ್ರಂಪ್ ಅವರ ಪ್ರಸ್ತಾವನೆಯನ್ನು ಸಾಗತಿಸುತ್ತೇವೆ ಎಂದು ರಾ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ನವದೆಹಲಿ, ಜನವರಿ 30: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಮುಸ್ಲಿಂ ರಾಷ್ಟ್ರಗಳ ವಲಸಿಗರ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ಕ್ರಮಕ್ಕೆ ಮುಂದಾಗಿರುವುದು ತಿಳಿದಿರಬಹುದು. ಈ ಪಟ್ಟಿಗೆ ಪಾಕಿಸ್ತಾನ ಹೊಸದಾಗಿ ಸೇರ್ಪಡೆಗೊಂಡಿರುವುದನ್ನು ಭಾರತದ RAW ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಪಾಕಿಸ್ತಾನದ ವಲಸಿಗರಿಗೆ ಅಮೆರಿಕ ಪ್ರವೇಶ ನಿಷೇಧ ಹೇರುವ ಟ್ರಂಪ್ ಅವರ ಪ್ರಸ್ತಾವನೆಯನ್ನು ಸಾಗತಿಸುತ್ತೇವೆ. ಜಗತ್ತಿನ ಅತ್ಯಂತ ಭಯಾನಕ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಬೆಂಬಲವನ್ನು ಅಲ್ಲಿನ ಉಗ್ರರು ಹೊಂದಿದ್ದಾರೆ ಎಂದು ರಾ ಅಧಿಕಾರಿಗಳು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.













Click it and Unblock the Notifications