ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ: ಸುಪ್ರೀಂಕೋರ್ಟ್
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ, ಮಾರ್ಚ್ 31ರ ಗಡುವು ವಿಸ್ತರಿಸಲು ಸಾಧ್ಯವಿಲ್ಲ, 500 ಮೀಟರ್ ವಿನಾಯಿತಿ ತಿದ್ದುಪಡಿಗೂ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ(ಮಾರ್ಚ್ 31) ಹೇಳಿದೆ.
ನವದೆಹಲಿ, ಮಾರ್ಚ್ 31: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಂದ ಮದ್ಯದಂಗಡಿಗಳು ದೂರ ಉಳಿಯಲಿ, ಮಾರ್ಚ್ 31ರ ಗಡುವು ವಿಸ್ತರಿಸಲು ಸಾಧ್ಯವಿಲ್ಲ, 500 ಮೀಟರ್ ವಿನಾಯಿತಿ ತಿದ್ದುಪಡಿಗೂ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ(ಮಾರ್ಚ್ 31) ಹೇಳಿದೆ.
ಏ. 1ರಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಆಸುಪಾಸಿನ ಪ್ರಾಂತ್ಯಗಳಲ್ಲಿರುವ ಪರಸ್ಪರ 500 ಮೀ. ಅಂತರದೊಳಗಿರುವ ಮದ್ಯ ಮಾರಾಟದ ಅಂಗಡಿಗಳು ಎತ್ತಂಗಡಿಯಾಗಲಿವೆ.

ಕೇರಳ, ತೆಲಂಗಾಣ ಹಾಗೂ ಪಂಬಾಜ್ ರಾಜ್ಯಗಳ ಮದ್ಯ ಮಾರಾಟಗಳ ಒಕ್ಕೂಟಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಮರುಪರಿಶೀಲಿಸುವಂತೆ ಅರ್ಜಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಡುವಿನ ದೂರವನ್ನು 500 ಮೀ.ಗಳಿಗೆ ನಿಗದಿಗೊಳಿಸಿ ನೀಡಿದ್ದ ತನ್ನ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಗುರುವಾರದಂದು ಅರ್ಜಿಯನ್ನು ತಿರಸ್ಕರಿಸಿ, ಹಳೆ ಆದೇಶ ಜಾರಿಯಲ್ಲಿರಲಿದೆ ಎಂದು ಹೇಳಿತ್ತು.
ಆದರೆ, ಆದೇಶದಿಂದ ಸಿಕ್ಕಿಂ, ಮೇಘಾಲಯ ರಾಜ್ಯಗಳಿಗೆ ವಿನಾಯತಿ ಸಿಕ್ಕಿದೆ, ಹಿಮಾಚಲ ಪ್ರದೇಶ ರಾಜ್ಯಕ್ಕೆ 220 ಮೀಟರ್ ಅಂತರದಲ್ಲಿ ಮದ್ಯದಂಗಡಿ ಸ್ಥಾಪನೆ ಅವಕಾಶ ಲಭ್ಯವಿದೆ. ಜತೆಗೆ 20,000ಕ್ಕೂ ಕಡಿಮೆ ಜನಸಂಖ್ಯೆಯುಳ್ಳ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೊಳ್ಳುವುದಿಲ್ಲ.












Click it and Unblock the Notifications