ಭಾರತದಲ್ಲಿ ತಬ್ಲಿಘಿ ಜಮಾತ್ ನಿಷೇಧಿಸಿ; ಸಿಜೆಐಗೆ ಪತ್ರ
ನವದೆಹಲಿ, ಏಪ್ರಿಲ್ 08 : ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಕೊರೊನಾ ಸೋಂಕು ದೇಶದಲ್ಲಿ ಹೆಚ್ಚಾಗಲು ಈ ಸಭೆ ಕಾರಣವಾಯಿತು ಎಂಬುದು ಗುಟ್ಟಾಗಿ ಉಳಿದಿಲ್ಲ.
Recommended Video
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ತಬ್ಲಿಘಿ ಜಮಾತ್ ಚಟುವಟಿಕೆಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪತ್ರವೊಂದು ಬಂದಿದೆ. ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಈ ಕುರಿತು ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಸುಮಾರು 9 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ 1, 445 ಕೊರೊನಾ ಸೋಂಕಿನ ಪ್ರಕರಣಗಳು ತಬ್ಲೀಗ್ ಜಮಾತ್ ಸಭೆ ಜೊತೆ ಸಂಪರ್ಕ ಹೊಂದಿವೆ.

ತಬ್ಲಿಘಿ ಜಮಾತ್ ಚಟುವಟಿಕೆಗಳನ್ನು ದೇಶದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಬೇಕು ಮತ್ತು ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಸಭೆ ಬಗ್ಗೆ ಸಿಬಿಐ ತನಿಖೆ ನಡೆಸಲು ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ದೆಹಲಿ ಮೂಲದ ಅಜಯ್ ಗೌತಮ್ ಎಂಬುವವರು ಈ ಪತ್ರವನ್ನು ಬರೆದಿದ್ದಾರೆ. ತನ್ನ ಪತ್ರವನ್ನು ಅರ್ಜಿ ಎಂದು ಪರಿಗಣಿಸಬೇಕು. ನಿಜಾಮುದ್ದೀನ್ ಮಸೀದಿ ಇರುವ ಜಾಗವನ್ನು ದೆಹಲಿ ಸರ್ಕಾರ ಧ್ವಂಸಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ದೆಹಲಿ ಸರ್ಕಾರ 15 ರಿಂದ 20 ಜನರು ಗುಂಪು ಗೂಡದಂತೆ ಆದೇಶ ನೀಡಿತ್ತು. ಆದರೆ, ನಿಜಾಮುದ್ದೀನ್ ಮಸೀದಿಯಲ್ಲಿ ಇಷ್ಟು ಜನರು ಸೇರಿದ್ದು ಹೇಗೆ? ಸರ್ಕಾರದ ಆದೇಶವನ್ನು ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.












Click it and Unblock the Notifications