Bajaj Platina: ಅತೀ ಹೆಚ್ಚು ಮೈಲೇಜ್ ನೀಡುವ ಕಡಿಮೆ ಬೆಲೆಯ ಹೊಸ ಬಜಾಜ್ ಬೈಕ್: ಇಲ್ಲಿದೆ ವಿವರ
Bajaj Platina: ಬರೀ ಹಳ್ಳಿಗಳಲ್ಲಿ ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಆಫೀಸ್ ಉದ್ದೇಶಕ್ಕಾಗಿ ಬಹುತೇಕ ಮಂದಿ ಹೆಚ್ಚು ಮೈಲೇಜ್ ನೀಡುವ ಕಡಿಮೆ ಬೆಲೆ ಬೈಕ್‌ಗಳನ್ನೇ ಹುಡುಕುತ್ತಿರುತ್ತಾರೆ. ಇಂತಹವರಿಗೆ ಹೊಸ ಬಜಾಜ್ ಪ್ಲಾಟೀನಾ ಹೇಳಿ ಮಾಡಿಸಿದ ಬೈಕ್ ಆಗಿದೆ. ಹಾಗಾದ್ರೆ ಇದರ ದರ ಹಾಗೂ ಮೈಲೇಜ್ ವಿವರಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಈ ಹಿಂದೆ ಬರೀ ಹಳ್ಳಿಗಳಲ್ಲಿ ಉತ್ತಮ ಮೈಲೇಜ್ ಉದ್ದೇಶದಿಂದ ಬಜಾಜ್ ಪ್ಲಾಟೀನಾದ ಮೊರೆ ಹೋಗುತ್ತಿದ್ದರು. ಆದರೆ, ದಿನದಿಂದ ದಿನಕ್ಕೆ ಪೆಟ್ರೋಲ್ ದರ ಹೆಚ್ಚಾಗುತ್ತಿರುವ ಹಿನ್ನೆಲೆ ನಗರ ಪ್ರದೇಶಗಳಲ್ಲೂ ಪ್ರತಿನಿತ್ಯ ಓಡಾಟಕ್ಕೆಂದು ಬಹುತೇಕ ಮಂದಿ ಮೈಲೇಜ್ ನೀಡುವ ಈ ಬೈಕ್ ಮೊರೆ ಹೋಗುತ್ತಿದ್ಧಾರೆ.

ಬಜಾಜ್ ಕಂಪನಿಯು ಮೊದಲಿನಿಂದಲೂ ಸಹ ಗ್ರಾಹಕರ ಇಷ್ಟಕ್ಕೆ ತಕ್ಕಂತೆ ಹೊಸ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ತರುತ್ತಲಿದೆ. ಹಾಗೆಯೇ, ಇದೀಗ ಹೊಸ ಬೈಕ್‌ವೊಂದನ್ನು ಪರಿಚಯಿಸಿದ್ದು, ಇದನ್ನು ಕೊಂಡುಕೊಳ್ಳಲು ಜನರು ನಾಮುಂದು ತಾಮುಂದು ಅಂತಾ ಮುಗಿಬಿದ್ದಿದ್ದಾರೆ.
ಈಗಾಗಲೇ ಜಿಎಸ್‌ಟಿ ಸಭೆಯಲ್ಲಿ ಕೆಲ ಬೈಕ್‌ಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. 350 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಿಸಿ ಇರುವ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಇಳಿಸಲಾಗಿದೆ. 28% ಇದ್ದ ಜಿಎಸ್‌ಟಿಯನ್ನು 18ಕ್ಕೆ ಇಳಿಕೆ ಮಾಡಲಾಗಿದ್ದು, ಸೆಪ್ಟೆಂಬರ್ 22ರಿಂದ ಹೊಸ ದರಗಳು ಜಾರಿಯಾಗಲಿವೆ. ಇದು ಹೊಸ ಬಜಾಜ್ ಪ್ಲಾಟೀನಾಗೂ ಕೂಡ ಅನ್ವಯ ಆಗಲಿದೆ.
ಮೊದಲಿನಿಂದಲೂ ಅತೀ ಕಡಿಮೆ ಬೆಲೆ ಹಾಗೂ ಹೆಚ್ಚು ಮೈಲೇಜ್ ನೀಡುವ ಬೈಕ್ ಅಂತಾ ಇದ್ದರೆ ಅದು ಬಜಾಜ್ ಪ್ಲಾಟೀನಾ. ಇದೀಗ ಈ ಕಂಪನಿಯು ಕಡಿಮೆ ಬೆಲೆಯ ಹೊಸ ಬೈಕ್ ಅನ್ನು ಪರಿಚಯಿಸಿದೆ. ಇದು ಸಣ್ಣ ಎಂಜಿನ್ ಹೊಂದಿದ್ದರೂ ಕೂಡ ಹಳ್ಳಿ ಹಾಗೂ ನಗರಗಳಲ್ಲಿ ಪ್ರತಿನಿತ್ಯ ಸಂಚಾರಕ್ಕೆ ಹೇಳಿ ಮಾಡಿಸಿದ ಬೈಕ್ ಆಗಿದೆ.
ಇನ್ನು ದೊಡ್ಡ ಇಂಜಿನ್ ಬೈಕ್‌ಗಳು ಹೆದ್ದಾರಿಗಳಲ್ಲಿ ವೇಗ ಮತ್ತು ಸ್ಥಿರತೆಯನ್ನು ನೀಡುತ್ತವೆ. ಈ ಹಿನ್ನೆಲೆ ಟ್ರಾವೆಲ್ ಮಾಡುವ ಯುವ ಪೀಳಿಗೆಯೂ ಬೈಕ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇವರು ಸಾಮಾನ್ಯವಾಗಿ ಹೆಚ್ಚಿನ ಸಿಸಿ ಇಂಜಿನ್‌ವುಳ್ಳ ಬೈಕ್‌ಗಳನ್ನು ಕೊಂಡುಕೊಳ್ಳುತ್ತಾರೆ. ಇಂತಹವರಿಗೂ ಗುಡ್ ನ್ಯೂಸ್ ಇದ್ದು, 350 ಸಿಸಿ ಹಾಗೂ ಅದಕ್ಕಿಂತ ಕಡಿಮೆ ಸಿಸಿ ಇರುವ ಬೈಕ್‌ಗಳ ಬೆಲೆ ಕಡಿಮೆಯಾಗಿದೆ. ಈ ಸಾಲಿನಲ್ಲಿ ರಾಯಲ್ ಎನ್‌ಫೀಲ್ಡ್, ಯಮಹಾ ಸೇರಿದಂದತೆ ಇನ್ನಿತರೆ ಕೆಲ ಕಂಪನಿಗಳಲ್ಲೂ ಟ್ರಾವೆಲ್ ಬೈಕ್‌ಗಳು ಸುಮಾರು ಸಿಗಲಿವೆ.
ಈ ನಡುವೆಯೂ ಮಧ್ಯಮವರ್ಗ ಹಾಗೂ ಪ್ರತಿನಿತ್ಯ ಆಫಿಸ್‌ಗೆ ಓಡಾಟಕ್ಕೆಂದು ಹೆಚ್ಚು ಮಲೇಜ್ ಕೊಡುವ ಕಡಿಮೆ ಬೆಲೆಯ ಬೈಕ್‌ಗಳನ್ನು ಹುಡುಕುತ್ತಿದ್ದಾರೆ. ಇಂತಹವರಿಗೆ ಮೊದಲು ನೆನಪಿಗೆ ಬರುವುದೇ ಬಜಾಜ್ ಪ್ಲಾಟೀನಾ ಅಂದ್ರೆ ತಪ್ಪಾಗಲಾರದು. ಮತ್ತೊಂದೆಡೆ ಇದೀಗ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಹೆಚ್ಚಳ ಆಗುತ್ತಿರುವ ಕಾರಣದಿಂದ ಬಹುತೇಕ ಹಳ್ಳಿಗರು ಹಾಗೂ ನಗರ ಪ್ರದೇಶಗಳ ಜನರು ಸಹ ಪ್ರತಿನಿತ್ಯ ಬಳಕೆಗಾಗಿ ಈ ಬೈಕ್ ಮೊರೆ ಹೋಗುತ್ತಿದ್ದಾರೆ.
ಹೊಸ ಬಜಾಜ್ ಪ್ಲಾಟಿನಾ 100 ಸಿಸಿ ಬೈಕ್ ಈಗಾಗಲೇ ಮುರುಕಟ್ಟೆಗೆ ಬಂದಿದೆ. ಇದರ ಪ್ರಸ್ತುತ ಎಕ್ಸ್-ಶೋರೂಂ ಬೆಲೆ 70,611 ರೂಪಾಯಿ ಆಗಿದ್ದು, ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಹೇಳಿ ಮಾಡಿಸಿದ ಬೈಕ್ ಆಗಿದೆ. ಇನ್ನು ಕೇಂದ್ರ ಸರ್ಕಾರವು ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು 28%ರಿಂದ 18%ಕ್ಕೆ ಇಳಿಕೆ ಮಾಡಿದೆ. ಪರಿಷ್ಕೃತ ದರಗಳು ಇದೇ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.
ಹೊಸ ಜಿಎಸ್‌ಟಿಯೊಂದಿಗೆ ಪ್ಲಾಟಿನಾ 100 ಸಿಸಿ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ. ಇದು ಉತ್ತಮ ಮೈಲೇಜ್ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ಗೆ ಏನೆಲ್ಲ ಅಂದರೂ 75-90 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ರಸ್ತೆಗಳ ಪರಿಸ್ಥಿತಿಗಳನ್ನು ಪರಿಗಣಿಸಿ ದೈನಂದಿನ ಪ್ರಯಾಣಕ್ಕೆ ಇದನ್ನು ತಯಾರಿಸಲಾಗಿದೆ. ಇದು 11 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಹೊಂದಿದ್ದು, ಪೂರ್ಣ ಟ್ಯಾಂಕ್‌ನಲ್ಲಿ 850ಕ್ಕಿಂತ ಹೆಚ್ಚು ಹೆಚ್ಚು ಕಿಲೋ ಮೀಟರ್ ಗಿಂತ ಪ್ರಯಾಣ ಮಾಡಬಹುದಾಗಿದೆ.
ಈ ಬೈಕ್ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಪ್ರತನಿತ್ಯ ಸಂಚಾರ ಮಾಡಲು ಹೇಳಿ ಮಾಡಿಸಿದ್ದಾಗಿದೆ. ಬಜಾಜ್ ಪ್ಲಾಟಿನಾ 100 ಸಿಸಿ ಕಡಿಮೆ ಬೆಲೆಗೆ ಲಭ್ಯ ಇದ್ದು, ಅದರ ಶಕ್ತಿಶಾಲಿ ಪವರ್‌ಟ್ರೇನ್ ಮತ್ತು ಅತ್ಯಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರಲ್ಲಿರುವ 102 ಸಿಸಿ ಪೆಟ್ರೋಲ್ ಎಂಜಿನ್ ಗರಿಷ್ಠ 7.9 ಬಿಎಚ್‌ಪಿ ಮತ್ತು 8.34 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್ ಲಭ್ಯವಿದೆ. ನೋಡುಗೆ ಕಣ್ಣು ಕುಕ್ಕುವಂತಹ ನೋಟವನ್ನು ಇದು ಹೊಂದಿದೆ. ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್ ಲ್ಯಾಂಪ್ ಮೂಲಕ ಇದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇನ್ನೂ ಗ್ರಾಹಕರು ಇದನ್ನು ಕೊಂಡುಕೊಳ್ಳಲು ಸೆಪ್ಟೆಂಬರ್ 22 ಯಾವಾಗ ಬರುತ್ತದೆಯೋ ಎಂದು ಕಾತರದಿಂದ ಕಾಯಿತ್ತಿದ್ದಾರೆ.












Click it and Unblock the Notifications